
ಬೆಂಗಳೂರು, (ಡಿಸೆಂಬರ್ 02): ಸಿಎಂ ಸಿದ್ದರಾಮಯ್ಯನವರು (Siddaramaiah) ಮೊನ್ನೆ ಅಷ್ಟೇ ತಮ್ಮ ನಿವಾಸದಲ್ಲಿ ಡಿಕೆ ಶಿವಕುಮಾರ್ (DK Shivakumar) ಅವರಿಗಾಗಿ ಉಪಹಾರ ಆಯೋಜಿಸಿದ್ದರು. ಇದರ ಬೆನ್ನಲ್ಲೇ ಇಂದು (ಡಿಸೆಂಬರ್ 02) ಡಿಕೆ ಶಿವಕುಮಾರ್ ತಮ್ಮ ಸದಾಶಿವನಗರದ ಮನೆಯಲ್ಲಿ ಸಿದ್ದರಾಮಯ್ಯನವರಿಗೆ ಬ್ರೇಕ್ ಫಾಸ್ಟ್ ಆಯೋಜಿಸಿದ್ದು, ಅವರಿಗೆ ಇಷ್ಟವಾದ ನಾಟಿ ಕೋಳಿ ಸಾರು, ಇಡ್ಲಿ ಉಣಬಡಿಸಿದ್ದಾರೆ. ಆದ್ರೆ, ಈ ವೇಲೆ ಎಲ್ಲರ ಗಮನಸೆಳೆದ ನಾಟಿ ಕೋಳಿ ಅಲ್ಲ. ಬದಲಿಗೆ ಉಭಯ ನಾಯಕರು ಧರಿಸಿದ್ದ ಒಂದೇ ಕಂಪನಿಯ ವಾಚ್. ಹೌದು….ಇಂದಿನ ಬ್ರೇಕ್ ಫಾಸ್ಟ್ ವೇಳೆ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕಾರ್ಟಿಯರ್ (Cartier) ಎನ್ನುವ ಕಂಪನಿಯ ವಾಚ್ ಧರಿಸಿರುವುದು ಎಲ್ಲರ ಗಮನಸೆಳೆದಿದ್ದು, ಇನ್ನು ಈ ಕಾರ್ಟಿಯರ್ ವಾಚ್ನ ಮಾರುಕಟ್ಟೆ ಬೆಲೆ ಬರೋಬ್ಬರಿ 43 ಲಕ್ಷ ರೂಪಾಯಿ. ಆಗಿದೆ
ಬ್ರೇಕ್ ಫಾಸ್ಟ್ ಮೀಟಿಂಗ್ ವೇಳೆ ಉಭಯ ನಾಯಕರು ಮಾಧ್ಯಮ ಮುಂದೆ ಬಂದಾಗ ಈ ಒಂದೇ ರೀತಿ ವಾಚ್ ಕಟ್ಟಿದ್ದು, ಫೋಟೋನಲ್ಲಿ ಇಬ್ಬರ ವಾಚ್ ಒಂದೇ ರೀತಿ ಹಾಗೂ ಒಂದೇ ಬ್ರ್ಯಾಂಡ್ ಎನ್ನುವುದು ಗೊತ್ತಾಗಿದೆ.ಒಟ್ಟಿಗೆ ಬ್ರೇಕ್ ಫಾಸ್ಟ್ ಮಾತ್ರವಲ್ಲದೇ ಒಂದೇ ಕಂಪನಿಯ ವಾಚ್ ಕಟ್ಟುವ ಮೂಲಕ ನಾವಿಬ್ಬರು ಒಂದೇ ಎನ್ನುವ ಸಂದೇಶ ರವಾನಿಸಿದ್ರಾ ಎನ್ನುವ ಪ್ರಶ್ನೆ ಉದ್ಭವಿಸಿದೆ. ಆದರೆ ಪ್ರಶ್ನೆ ಇದಲ್ಲ, ಇದರ ಬೆಲೆ, ಈ ವಾಚ್ ಬೆಲೆ ಬರೋಬ್ಬರಿ 43 ಲಕ್ಷ ರೂಪಾಯಿ.
ಇನ್ನು ಉಭಯ ನಾಯಕರು ಬೇಕಂತಲೇ ಸೇಮ್ ವಾಚ್ ಕಟ್ಟಿದ್ರಾ ಅಥವಾ ಕಾಕತಾಳೀಯ ಎಂಬಂತೆ ಅವರವ ಪಾಡಿಗೆ ಅವರು ಧರಿಸಿಕೊಂಡು ಬಂದಿದ್ರಾ ಎನ್ನುವುದೇ ಪ್ರಶ್ನೆಯಾಗಿದೆ.
ಇದರ ಬೆನ್ನಲ್ಲೇ 2016ರಲ್ಲಿ ಸಿದ್ದರಾಮಯ್ಯನವರ ಹ್ಯೂಬ್ಲೋಟ್ ವಾಚ್ ನಂತೆ ಇದೀಗ ಕಾರ್ಟಿಯರ್ ವಾಚ್ ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ವಿಪಕ್ಷ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿ ಟ್ವೀಟ್ ಮಾಡಿದ್ದು, ಸಿಎಂ ಸಿದ್ದರಾಮಯ್ಯನವರೇ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರೇ 43 ಲಕ್ಷ ರೂ. ಬೆಲೆ ಬಾಳುವ ಕಾರ್ಟಿಯರ್ ವಾಚ್ ಕಟ್ಟಿದ್ದೀರಿ. ರಾಜ್ಯಕ್ಕೆ ಯಾವ ಮಹತ್ತರ ಉಪಕಾರ ಮಾಡಿದಿರಿ ಎಂದು ನಿಮಗೆ ಈ ಲಕ್ಷ ಬೆಲೆ ಬಾಳುವ ಕಾರ್ಟಿಯರ್ ವಾಚ್ ಉಡುಗೊರೆಯಾಗಿ ಬಂದಿದೆ? ನಿಮ್ಮ ಉತ್ತರಕ್ಕಾಗಿ ಕಾಯುತ್ತಿರುವ ಕನ್ನಡಿಗರು ಎಂದು ಪ್ರಶ್ನಿಸಿದೆ.
Mr. @siddaramaiah , your definition of Socialism seems to come with a very high price tag. While the people of Karnataka struggle with drought and crumbling infrastructure, our “Simple Socialist” CM flaunts a Santos de Cartier.#CongressFailsKarnataka pic.twitter.com/Qog1jt1WSz
— BJP Karnataka (@BJP4Karnataka) December 2, 2025
ಕಾರ್ಟಿಯರ್ ಅತ್ಯಂತ ಲಕ್ಸುರಿ ವಾಚ್ ಬ್ರ್ಯಾಂಡ್ ಆಗಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಕ್ರಿಸ್ಟಲ್ ಆ್ಯಂಟಿ ರಿಫ್ಲೆಕ್ಟಿವ್ ಗ್ಲಾಸ್ ಹೊಂದಿದ್ದು, ವಾಟರ್ ಪ್ರೂಫ್ ಆಗಿದೆ. ಇನ್ನು ಈ ವಾಚ್‌ನಲ್ಲಿ ಚಿನ್ನ ಹಾಗೂ ಬೆಳ್ಳಿ ಬಳಕೆ ಮಾಡಲಾಗಿದೆ. 7 ಸೈಡೆಡ್ ಕ್ರೌನ್‌ನಲ್ಲಿ ರೋಸ್ ಗೋಲ್ಡ್ ಬಳಕೆ ಮಾಡಲಾಗಿದೆ. ಈ ವಾಚ್‌ಗೆ 8 ವರ್ಷದ ವಾರೆಂಟಿ ಇದ್ದು, ವಾರೆಂಟಿ ಸಮಯದಲ್ಲಿ ವಾಚ್‌ಗೆ ಏನಾದರೂ ಆದರೆ ರಿಪ್ಲೇಸ್ ಇರುತ್ತೆ. ಹಾಗೇ ಸರ್ವೀಸ್ ಕೂಡ ಕಾಂಪ್ಲಿಮೆಂಟರಿ ಆಗಿರುತ್ತದೆ.
ಹೀಗಾಗಿ ಈ ಅತ್ಯಧುನಿಕ ವಾಚ್ ಅನ್ನು ಶ್ರೀಮಂತರು, ಉದ್ಯಮಿಗಳು, ರಾಜಕಾರಣಿಗಳು, ಸೆಲೆಬ್ರೆಟಿಗಳು ಈ ಬ್ರ್ಯಾಂಡ್ ಬಳಕೆ ಮಾಡುತ್ತಾರೆ. ಹಾಲಿವುಡ್, ಬಾಲಿವುಡ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಈ ವಾಚ್ ಧರಿಸುತ್ತಾರೆ. ವಿಶೇಷವಾಗಿ ಬ್ರಿಟಿಷ್ ರಾಯಲ್ ಫ್ಯಾಮಿಲಿ ಹೆಚ್ಚಾಗಿ ಈ ವಾಚ್ ಬಳಕೆ ಮಾಡುತ್ತದೆ.ಈ ಪೈಕಿ ಪ್ರಿನ್ಸ್ ಡಯಾನ ಬಳಿ ಕಾರ್ಟಿಯರ್ ಬ್ರ್ಯಾಂಡ್ನ ಬಹುತೇಕ ಎಲ್ಲಾ ಮಾಡೆಲ್ ವಾಚ್‌ಗಳಿವೆ ಎನ್ನಲಾಗಿದೆ.