ಜೈಲಿಗೆ ಯಾಕೆ ಹೋದೆ ಅಂದ್ರೆ ನೀವು ಕಳಿಸಿದ್ರಿ ನಾನು ಹೋದೆ; ಈಶ್ವರಪ್ಪ ಪ್ರಶ್ನೆಗೆ ಡಿಕೆ ಶಿವಕುಮಾರ್ ತಿರುಗೇಟು

| Updated By: sandhya thejappa

Updated on: Dec 06, 2021 | 10:29 AM

ಬಿಎಸ್​ವೈ ಆದ ನೋವನ್ನು ಬಿಜೆಪಿ ಮೇಲೆ ಹೇಳಲಾಗಲ್ಲ. ಅವರ ದುಃಖ, ದುಮ್ಮಾನ, ರೇಡ್, ಮಾನಸಿಕ ಹಿಂಸೆ ರಾಜೀನಾಮೆಯ ನೋವನ್ನು ಹೊರಹಾಕಬೇಕು. ನಾವು ಫ್ರೀಯಾಗಿದೀವಿ ಎಂದು ನಮ್ಮ ಮೇಲೆ ಹಾಕುತ್ತಿದ್ದಾರೆ.

ಜೈಲಿಗೆ ಯಾಕೆ ಹೋದೆ ಅಂದ್ರೆ ನೀವು ಕಳಿಸಿದ್ರಿ ನಾನು ಹೋದೆ; ಈಶ್ವರಪ್ಪ ಪ್ರಶ್ನೆಗೆ ಡಿಕೆ ಶಿವಕುಮಾರ್ ತಿರುಗೇಟು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌
Follow us on

ಬೆಳಗಾವಿ: ಡಿಕೆಶಿ ತಿಹಾರ್ ಜೈಲಿಗೆ ಯಾಕೆ ಹೋಗಿದ್ದರೆಂದು ಪ್ರಶ್ನೆ ಮಾಡಿದ ವಿಚಾರಕ್ಕೆ ಸಂಬಂಧಿಸಿ ಸಚಿವ ಕೆಎಸ್ ಈಶ್ವರಪ್ಪಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ತಿರುಗೇಟು ನೀಡಿದ್ದಾರೆ. ಜೈಲಿಗೆ ಯಾಕೆ ಹೋದೆ ಅಂದ್ರೆ ನೀವು ಕಳಿಸಿದ್ರಿ ನಾನು ಹೋದೆ. ನಿಮಗೆ ಸಪೋರ್ಟ್ ಮಾಡಲಿಲ್ಲ, ನಿಮ್ಮ ಜೊತೆ ಬರಲಿಲ್ಲ. ಹೀಗಾಗಿ ನೀವು ನನ್ನನ್ನು ತಿಹಾರ್ ಜೈಲಿಗೆ ಕಳಿಸಿದ್ರಿ ಅಂತ ಈಶ್ವರಪ್ಪ (KS Eshwarappa) ಹೇಳಿಕೆಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಇನ್ನು ಇದೇ ವೇಳೆ ರಾಜ್ಯದಲ್ಲಿ ಕಾಂಗ್ರೆಸ್ ಉಸಿರು ನಿಲ್ಲಿಸುತ್ತೇವೆ ಎಂಬ ಮಾಜಿ ಸಿಎಂ ಯಡಿಯೂರಪ್ಪ ಹೇಳಿಕೆಗೆ ಡಿಕೆಶಿ ತಿರುಗೇಟು ನೀಡಿದ್ದಾರೆ. ಬಿಎಸ್​ವೈ ಆದ ನೋವನ್ನು ಬಿಜೆಪಿ ಮೇಲೆ ಹೇಳಲಾಗಲ್ಲ. ಅವರ ದುಃಖ, ದುಮ್ಮಾನ, ರೇಡ್, ಮಾನಸಿಕ ಹಿಂಸೆ ರಾಜೀನಾಮೆಯ ನೋವನ್ನು ಹೊರಹಾಕಬೇಕು. ನಾವು ಫ್ರೀಯಾಗಿದೀವಿ ಎಂದು ನಮ್ಮ ಮೇಲೆ ಹಾಕುತ್ತಿದ್ದಾರೆ. ನಮ್ಮನ್ನು ಶಾಶ್ವತವಾಗಿ ವಿರೋಧ ಪಕ್ಷದಲ್ಲಿಯೇ ಕೂರಿಸಲಿ. ಸರ್ಕಾರದ ಸ್ಥಿರತೆಯನ್ನು ನಾವು ಹಾಳು ಮಾಡುತ್ತಿಲ್ಲ. ಅವರ ಪಕ್ಷದವರೇ ಹಾಳು ಮಾಡುತ್ತಿದ್ದಾರೆ ಅಂತ ಶಿವಕುಮಾರ್ ಹೇಳಿದ್ದಾರೆ.

ಈಶ್ವರಪ್ಪ ಹೇಳಿದ್ದೇನು?
ಏನ್ ತಪ್ಪು ಮಾಡಿ ತಿಹಾರ್ ಜೈಲಿಗೆ ಹೋಗಿದ್ರಿ ಮೊದಲು ಹೇಳಿ. ಹೆತ್ತ ತಾಯಿ ಕಣ್ಣೀರಿನ ಶಾಪ ಯಾರಿಗೆ ತಟ್ಟುತ್ತದೆ. ತಾಯಿಗೆ ಕಣ್ಣೀರು ಹಾಕಿಸಿದ್ದು ಯಾರ ತಪ್ಪು ಉತ್ತರಸಲಿ. ಡಿಕೆಶಿ ಬಂಡೆಯಲ್ಲಿ ಎಷ್ಟು ದುಡ್ಡು ಮಾಡಿದ್ದಾರೆ ಎಂದು ಗೋತ್ತಿದೆ. ನಮ್ಮನ್ನು ಹೊಗಳಿದ ಡಿಕೆಶಿಗೆ ಧನ್ಯವಾದಗಳು ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ದಿ ಸಚಿವ ಈಶ್ವರಪ್ಪ ವಾಗ್ದಾಳಿ ನಡೆಸಿದ್ದರು.

ಇದನ್ನೂ ಓದಿ

ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಮತ್ತೆ ಅಸಮಾಧಾನ ವ್ಯಕ್ತಪಡಿಸಿದ ಬಿಜೆಪಿ ಸಂಸದ; ಪೊಲೀಸರ ಲಾಠಿಚಾರ್ಜ್​ಗೆ ಖಂಡನೆ

IND vs NZ 2nd Test, Day 3 LIVE Score: 4ನೇ ದಿನ ಮಿಂಚಿದ ಜಯಂತ್ ಯಾದವ್: ಟೆಸ್ಟ್ ಸರಣಿ ವಶಪಡಿಸಿಕೊಂಡ ಭಾರತ

Published On - 10:23 am, Mon, 6 December 21