ಮೊದಲೇ ಹೇಳಿದ್ದೆ ನೀವೆಲ್ಲ ರಾಜಕೀಯ ಸಮಾಧಿ ಆಗ್ತೀರೆಂದು.. ಈಗ ನೋಡಿ ಯೂಸ್ ಅಂಡ್ ಥ್ರೋ ಮಾಡಿದ್ದಾರೆ: ಡಿಕೆಶಿ
ಬಿಜೆಪಿ ಸಚಿವರ ಅಸಮಾಧಾನದ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೂತನ ಸಚಿವರ ಕಾಲೆಳೆದಿದ್ದಾರೆ. ವಲಸಿಗ ಸಚಿವರಿಗೆ ಡಮ್ಮಿ ಖಾತೆ ನೀಡಿರುವ ವಿಚಾರವಾಗಿ ಮಾತನಾಡುತ್ತ.. ನಾನು ವಿಧಾನಸಭೆಯಲ್ಲಿ ಈ ಮೊದಲೇ ಹೇಳಿದ್ದೆ ನೀವೆಲ್ಲ ರಾಜಕೀಯವಾಗಿ ಸಮಾಧಿ ಆಗ್ತೀರೆಂದು ಎಂದಿದ್ದಾರೆ.
ಬೆಂಗಳೂರು: ನೂತನ ಸಪ್ತ ಸಚಿವರು ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಂಪುಟದ 10 ಸಚಿವರು ಸೇರಿ ಒಟ್ಟು 17 ಸಚಿವರ ಖಾತೆ ಹಂಚಿಕೆ ಮತ್ತು ಬದಲಾವಣೆ ಮಾಡಲಾಗಿದೆ. ಆದರೆ ಕೆಲ ಸಚಿವರು ತಮಗೆ ಸಿಕ್ಕ ಖಾತೆಗಳಿಂದ ಅಸಮಾಧಾನರಾಗಿದ್ದಾರೆ. ಸಚಿವರ ನಡುವೆ ಅಸಮಾಧಾನ ಭುಗಿಲೆದ್ದಿದೆ. ಹೀಗಾಗಿ ಮೂವರ ಖಾತೆ ಬದಲಾವಣೆಗೆ ಸಿಎಂ ಚಿಂತಿಸುತ್ತಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಬಿಜೆಪಿ ಸಚಿವರ ಅಸಮಾಧಾನದ ಬಗ್ಗೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೂತನ ಸಚಿವರ ಕಾಲೆಳೆದಿದ್ದಾರೆ. ವಲಸಿಗ ಸಚಿವರಿಗೆ ಡಮ್ಮಿ ಖಾತೆ ನೀಡಿರುವ ವಿಚಾರವಾಗಿ ಮಾತನಾಡುತ್ತ.. ನಾನು ವಿಧಾನಸಭೆಯಲ್ಲಿ ಈ ಮೊದಲೇ ಹೇಳಿದ್ದೆ ನೀವೆಲ್ಲ ರಾಜಕೀಯವಾಗಿ ಸಮಾಧಿ ಆಗ್ತೀರೆಂದು. ಈಗ ನೋಡಿ ಯಾವ್ಯಾವ ಖಾತೆ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಐಸಿಯು, ವೆಂಟಿಲೇಟರ್ನಲ್ಲಿ ನಡೆಯುತ್ತಿದೆ ಎಂದು ಡಿಕೆಶಿ ವ್ಯಂಗ್ಯವಾಡಿದ್ದಾರೆ.
ಗೋಪಾಲಯ್ಯ, ಎಂಟಿಬಿ ನಾಗರಾಜ್, ನಾರಾಯಣಗೌಡ, ರೋಷನ್ ಬೇಗ್ ಅವರ ಕಥೆ ಈಗ ಏನಾಗಿದೆ ನೋಡಿ. ಎಂಟಿಬಿ ನಾಗರಾಜ್ಗೆ ಈ ಮೊದಲು ವಸತಿ ಖಾತೆ ಇತ್ತು. ಪಾಪ ಈಗ ಅಬಕಾರಿ ಖಾತೆ ಕೊಟ್ಟಿದ್ದಾರೆ. ವಲಸಿಗರನ್ನೆಲ್ಲ ಯೂಸ್ ಅಂಡ್ ಥ್ರೋ ಮಾಡಿದ್ದಾರೆ. ವಲಸಿಗರನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
ಭುಗಿಲೆದ್ದ ಅಸಮಾಧಾನ.. ಇಂದು ಮತ್ತೆ ಬದಲಾಗಲಿವೆ ಕೆಲವು ಸಚಿವರ ಖಾತೆಗಳು?
Published On - 1:43 pm, Fri, 22 January 21