ಬಸವ ಜಯಂತಿಯಂದು ಬಸವಣ್ಣನ ವಚನದ ಮೂಲಕ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್!

|

Updated on: May 10, 2024 | 11:38 AM

ಬಸವಣ್ಣನವರು ಹೇಳಿರುವ ಮಾತೇನು? ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವ ಅಂತ ಹೇಳಿದ್ದಾರೆ ಎಂದು ಶಿವಕುಮಾರ್ ಹೇಳಿದರು. ಹಾಗಾಗಿ ನಾವು ಲೋಕದ ಡೊಂಕು ತಿದ್ದುವ ಸಾಹಸಕ್ಕಿಳಿಯದೆ ನಮ್ಮ ನಮ್ಮ ಮನೆಗಳನ್ನು ನೇರಗೊಳಿಸಿಕೊಳ್ಳೋಣ ಎಂದು ಅವರು ಹೇಳಿದರು,

ಬೆಂಗಳೂರು: ಇಂದು ನಾಡಿನಾದ್ಯಂತ ಬಸವ ಜಯಂತಿಯನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಆಚರಿಸಲಾಗುತ್ತಿದೆ. ವಿಧಾನಸೌಧದ ಆವರಣದಲ್ಲಿ ಬಸವಣ್ಣನ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರಿಗೆ ಮಾಧ್ಯಮ ಪ್ರತಿನಿಧಿಗಳು, ಪ್ರಜ್ವಲ್ ರೇವಣ್ಣ ಲೈಂಗಿಕ ಟೇಪು (Prajwal Revanna sex tapes) ಮತ್ತು ಶಾಸಕ ಹೆಚ್ ಡಿ ರೇವಣ್ಣ (HD Revanna) ಅವರ ಬಂಧನಕ್ಕೆ ಸಂಬಂಧಿಸಿದಂತೆ ಜೆಡಿಎಸ್ ನಾಯಕರು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದಾರೆ ಅಂತ ಹೇಳಿದಾಗ ಮಗುಳ್ನಕ್ಕ ಅವರು, ಇವತ್ತು ನಾವು ಬಸವ ಜಯಂತಿ ಆಚರಿಸುತ್ತಿದ್ದೇವೆ, ಬಸವಣ್ಣನವರು ಹೇಳಿರುವ ಮಾತೇನು? ಲೋಕದ ಡೊಂಕ ನೀವೇಕೆ ತಿದ್ದುವಿರಿ, ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ, ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ, ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ ನಮ್ಮ ಕೂಡಲಸಂಗಮದೇವ ಅಂತ ಹೇಳಿದ್ದಾರೆ ಎಂದರು. ಹಾಗಾಗಿ ನಾವು ಲೋಕದ ಡೊಂಕು ತಿದ್ದುವ ಸಾಹಸಕ್ಕಿಳಿಯದೆ ನಮ್ಮ ನಮ್ಮ ಮನೆಗಳನ್ನು ನೇರಗೊಳಿಸಿಕೊಳ್ಳೋಣ ಎಂದ ಶಿವಕುಮಾರ್ ಪ್ರತ್ರಕರ್ತರು ಪೂರಕ ಪ್ರಶ್ನೆ ಕೇಳುತ್ತಿದ್ದರೂ ಅವಸರದಲ್ಲಿ ಅಲ್ಲಿಂದ ಹೊರಟರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ:  Pen drive Case: ದೇವರಾಜೇಗೌಡ ನನ್ನನ್ನು ಭೇಟಿಯಾಗಿದ್ದು, ಡಿಕೆ ಶಿವಕುಮಾರ್​ ಜತೆ ಪೋನ್​​ನಲ್ಲಿ ಮಾತಾಡಿದ್ದು ನಿಜ: ಶಿವರಾಮೇಗೌಡ