ಪ್ರಜ್ವಲ್ ರೇವಣ್ಣ​​ ಕೇಸ್​: ಟ್ವೀಟ್​ ಮೂಲಕ HD ಕುಮಾರಸ್ವಾಮಿ ವಿರುದ್ಧ ಡಿಕೆ ಶಿವಕುಮಾರ್​ ಕಿಡಿ​​

ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಷ್ಟ್ರಮಟ್ಟದಲ್ಲಿ ಕೂಡ ಚರ್ಚೆ ಆಗುತ್ತಿದೆ. ಅದರಂತೆ ಇದೀಗ ಟ್ವೀಟ್​ ಮೂಲಕ H.D ಕುಮಾರಸ್ವಾಮಿ(HD Kumaraswamy) ವಿರುದ್ಧ ಡಿಕೆ ಶಿವಕುಮಾರ್​(DK Shivakumar)​ ಅಟ್ಯಾಕ್ ಮಾಡಿದ್ದು,​ ‘​ಕುಮಾರಸ್ವಾಮಿ ಹಿಟ್‌ ಆ್ಯಂಡ್​ ರನ್‌ ಗಿರಾಕಿ ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ. ಅವರ ಈ ಹಿಂದಿನ ಯಾವುದೇ ಆರೋಪಗಳು ಸಾಭೀತಾಗಿಲ್ಲ ಎಂದು ಕಿಡಿಕಾರಿದ್ದಾರೆ.

ಪ್ರಜ್ವಲ್ ರೇವಣ್ಣ​​ ಕೇಸ್​: ಟ್ವೀಟ್​ ಮೂಲಕ HD ಕುಮಾರಸ್ವಾಮಿ ವಿರುದ್ಧ ಡಿಕೆ ಶಿವಕುಮಾರ್​ ಕಿಡಿ​​
HD ಕುಮಾರಸ್ವಾಮಿ ವಿರುದ್ಧ ಡಿಕೆ ಶಿವಕುಮಾರ್​ ಕಿಡಿ​​
Follow us
ಪ್ರಸನ್ನ ಗಾಂವ್ಕರ್​
| Updated By: ಕಿರಣ್ ಹನುಮಂತ್​ ಮಾದಾರ್

Updated on: May 08, 2024 | 5:29 PM

ಬೆಂಗಳೂರು, ಮೇ.08: ಪ್ರಜ್ವಲ್ ರೇವಣ್ಣ​​ ಪ್ರಕರಣ ಇದೀಗ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದೆ. ಈ ಮಧ್ಯೆ ಚುನಾವಣೆ ಮುಗಿದರೂ ಉಭಯ ಪಕ್ಷಗಳು ಆರೋಪ-ಪ್ರತ್ಯಾರೋಪಗಳ ಸುರಿಮಳೆಗೈಯುತ್ತಿದ್ದಾರೆ. ಅದರಂತೆ ಇದೀಗ ಟ್ವೀಟ್​ ಮೂಲಕ H.D ಕುಮಾರಸ್ವಾಮಿ(HD Kumaraswamy) ವಿರುದ್ಧ ಡಿಕೆ ಶಿವಕುಮಾರ್​(DK Shivakumar)​ ಅಟ್ಯಾಕ್ ಮಾಡಿದ್ದು,​ ‘​ಕುಮಾರಸ್ವಾಮಿ ಹಿಟ್‌ ಆ್ಯಂಡ್​ ರನ್‌ ಗಿರಾಕಿ ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ. ಅವರ ಈ ಹಿಂದಿನ ಯಾವುದೇ ಆರೋಪಗಳು ಸಾಭೀತಾಗಿಲ್ಲ. ಇನ್ನು ಪ್ರಜ್ವಲ್‌ ಸೆಕ್ಸ್​​ಗೇಟ್‌ ಕೇಸ್​ನಲ್ಲಿ ನನ್ನ ಹೆಸರು ಮುನ್ನಲೆಗೆ ತಂದರೆ, ಇಡೀ ರಾಜ್ಯದ ಗಮನ ಸೆಳೆಯಬಹುದು ಎನ್ನುವ ಕಾರಣಕ್ಕೆ ಪದೇ ಪದೇ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಪ್ರಜ್ವಲ್​ ಕೇಸ್​ನ ಹಿಂದೆ ಕುಮಾರಸ್ವಾಮಿ ಇದ್ದಾರೆ ಎಂದು ಗಂಭೀರ ಆರೋಪ

ಈ ಪ್ರಕರಣದ ಹಿಂದೆ ಬ್ಲಾಕ್‌ ಮೇಲ್‌ ಕಿಂಗ್‌ ಕುಮಾರಸ್ವಾಮಿ ಇದ್ದಾರೆ. ರಾಜಕಾರಣಿಗಳು, ಅಧಿಕಾರಿಗಳನ್ನು ಬ್ಲಾಕ್‌ ಮೇಲ್‌ ಮಾಡುವುದೇ ಅವರ ಕೆಲಸ. ಅವರಿಗೆ ದಿನಕ್ಕೊಮ್ಮೆ ನನ್ನ ಹೆಸರು ಎತ್ತದಿದ್ದರೆ ನಿದ್ದೆ ಬರಲ್ಲ. ಈಗಲೂ ನಾನು ಹೇಳುತ್ತಿದ್ದೇನೆ ಈ ಪ್ರಕರಣದ ಕಥಾನಾಯಕ, ಡೈರೆಕ್ಟರ್, ಪ್ರೋಡ್ಯೂಸರ್ ಎಲ್ಲಾ ಕುಮಾರಸ್ವಾಮಿ ಅವರೇ ಎಂದಿದ್ದಾರೆ.

ಡಿಕೆ ಶಿವಕುಮಾರ್​ ಟ್ವೀಟ್​

ಇದನ್ನೂ ಓದಿ:ರೇವಣ್ಣ ಬಂಧನ ಖಂಡಿಸಿ ಹಾಸನದಲ್ಲಿ ಜೆಡಿಎಸ್ ಕಾರ್ಯಕರ್ತರ ಹೋರಾಟ; ಡಿಕೆ ಶಿವಕುಮಾರ್​ ವಜಾಕ್ಕೆ ಆಗ್ರಹ

‘ನಮ್ಮದು ರೇವಣ್ಣ ಅವರದು ಬೇರೆ ಕುಟುಂಬ ಎಂದು ಹಿಂದೆ ಅವರೇ ಹೇಳಿದ್ದರು. ಉಪ್ಪು ತಿಂದವನು ನೀರು ಕುಡಿಯಬೇಕು ಅಂತ ಕೂಡ ಹೇಳಿದ್ರು, ಈಗ ಯಾಕೆ ಮತ್ತೆ ಹಿಟ್‌ ಅಂಡ್‌ ರನ್‌ ಮಾಡ್ತಿದ್ದಾರೆ?. ಪ್ರಕರಣ ಇನ್ನೂ ತನಿಖೆ ಹಂತದಲ್ಲಿದೆ. ಈಗಲೇ ತೀರ್ಪು ಕೊಡುವುದಕ್ಕೆ ಕುಮಾರಸ್ವಾಮಿ ಅವರೇನು ಲಾಯರೋ? ಜಡ್ಜೋ?. ಚರ್ಚೆ ಮಾಡಲು ಇನ್ನೂ ಟೈಮ್ ಇದೆ. ವಿಧಾನಸಭೆ ಅಧಿವೇಶನ ಇದೆ. ಎಲ್ಲಾ ತೆಗೆದುಕೊಂಡು ಬರಲಿ ಚರ್ಚೆ ಮಾಡೋಣ ಎಂದು ಡಿಕೆ ಶಿವಕುಮಾರ್​ ತಮ್ಮ ಎಕ್ಸ್​ ಖಾತೆ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ