
ವಿಜಯಪುರ: ಜಿಲ್ಲೆಯ ತಾರಾಪುರದಲ್ಲಿ ಭೀಮೆಯ ಪ್ರವಾಹಕ್ಕೆ ಸಿಲುಕಿ ಜನರ ಜೊತೆ ಪ್ರಾಣಿಗಳಿಗೂ ಸಂಕಷ್ಟ ಎದುರಾಗಿದೆ. ತಮ್ಮ ಹಾಗೂ ತಮ್ಮ ಕುಟುಂಬಸ್ಥರ ಪ್ರಾಣ ಉಳಿಸಲು ಪರದಾಡುತ್ತಿರುವ ಜನರ ನಡುವೆ ತಾಯಿ ಶ್ವಾನವೊಂದು ತನ್ನ ಮರಿಗಳನ್ನ ರಕ್ಷಿಸಲು ಮುಂದಾದ ಮನ ಮಿಡಿಯುವ ಘಟನೆ ಕಂಡುಬಂತು.
ತನ್ನ ಬಾಯಿಯಲ್ಲಿ ಮರಿಯನ್ನು ಸುರಕ್ಷಿತವಾಗಿ ಸಿಕ್ಕಿಸಿಕೊಂಡು ಸುರಕ್ಷಿತ ಸ್ಥಳಕ್ಕೆ ಒಯ್ದ ನಾಯಿ ಇದೇ ರೀತಿ ತನ್ನ ಎರಡು ಮರಿಗಳನ್ನು ರಕ್ಷಿಸಿದೆ. ದುರಂತವೆಂದರೆ, ಶ್ವಾನದ ಮತ್ತೆರಡು ಮರಿಗಳು ಭೀಮೆಯ ಪ್ರವಾಹಕ್ಕೆ ಆಹಾರವಾಗಿ ಹೋದವು ಎಂಬುದೇ ದುಃಖಕರ ಸಂಗತಿ.