ಶೆಟ್ಟರ್ ಅವರೇ, ಗುಜರಾತ್ ರಾಜ್ಯದ ಮಾಡಲ್ ನೋಡುವುದಕ್ಕೆ ರಾಜ್ಯದ ತೆರಿಗೆ ಹಣ ವ್ಯಯ ಮಾಡಬೇಡಿ: ಹೆಚ್.ಡಿ. ಕುಮಾರಸ್ವಾಮಿ ಕಿವಿಮಾತು

ಡೊಲೆರೋ ಸಿಟಿ ಮುಕ್ತಾಯ ಆಗಲು ಇನ್ನು 100 ವರ್ಷ ಬೇಕು. ಹೀಗಾಗಿ ಜಗದೀಶ್ ಶೆಟ್ಟರ್ ಗುಜರಾತ್ ಮಾಡಲ್ ಬಿಟ್ಟು ರಾಜ್ಯದಲ್ಲೆ ಉತ್ತಮ ಮಾಡಲ್ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಶೆಟ್ಟರ್ ಅವರೇ, ಗುಜರಾತ್ ರಾಜ್ಯದ ಮಾಡಲ್ ನೋಡುವುದಕ್ಕೆ ರಾಜ್ಯದ ತೆರಿಗೆ ಹಣ ವ್ಯಯ ಮಾಡಬೇಡಿ: ಹೆಚ್.ಡಿ. ಕುಮಾರಸ್ವಾಮಿ ಕಿವಿಮಾತು
ಎಚ್.ಡಿ.ಕುಮಾರಸ್ವಾಮಿ
TV9kannada Web Team

| Edited By: sadhu srinath

Jul 16, 2021 | 1:30 PM

ಬೆಂಗಳೂರು: ಗುಜರಾತ್ ಮಾಡೆಲ್ ನೋಡಲು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಗುಜರಾತ್ ಪ್ರವಾಸ ಮಾಡುತ್ತಿರುವ ವಿಚಾರವಾಗಿ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ, ರಾಜ್ಯದ ತೆರಿಗೆ ಹಣವನ್ನು ಬೇರೆ ರಾಜ್ಯದ ಮಾಡಲ್ ನೋಡುವುದಕ್ಕೆ ವ್ಯಯ ಮಾಡಬೇಡಿ. ಗುಜರಾತ್​ನಲ್ಲಿರುವ ಡೊಲೆರೋ ಸಿಟಿ ಪ್ರಧಾನಿ ನರೇಂದ್ರ ಮೋದಿ ಅವರ ಡ್ರೀಮ್ ಪ್ರಾಜೆಕ್ಟ್. ಇದರ ಬಗ್ಗೆ ಅಧ್ಯಯನ ಮಾಡಲು ಹೋಗುತ್ತಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿ ಅವರು 2014 ರಲ್ಲಿ ಚುನಾವಣೆಗೋಸ್ಕರ ಈ ಡೊಲೆರೋ ಸಿಟಿ 3ಡಿ ಪ್ರಾಜೆಕ್ಟ್ ಘೋಷಣೆ ಮಾಡಿದರು. ಇದೊಂದು ದೇಶದಲ್ಲೇ ಕ್ರಾಂತಿ ಮಾಡುವ ಪ್ರಾಜೆಕ್ಟ್ ಎಂದು ಹೇಳಿದ್ದರು. ಆದರೆ ಡೊಲೆರೋ ಸಿಟಿ ಪ್ರಾಜೆಕ್ಟ್ ಅನ್ನು ಗುಜರಾತ್ ಜನರು ಕೂಡಾ ಈಗ ಮರೆತು ಹೋಗಿದ್ದಾರೆ. 2008 ರಲ್ಲಿ ಪ್ರಾರಂಭ ಆದ ಈ ಡೊಲೆರೋ ಸಿಟಿ ಪ್ರಾಜೆಕ್ಟ್ 2021 ಆದರೂ ಮುಗಿದಿಲ್ಲ. ಇದನ್ನು ನೋಡೋಕೆ ಈಗ ಜಗದೀಶ್ ಶೆಟ್ಟರ್ ಹೊರಟಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಡೊಲೆರೋ ಸಿಟಿ ಪ್ರಾಜೆಕ್ಟ್‌ ನೋಡಲು ಗುಜರಾತ್​ಗೆ ಹೋಗುವುದು ಬೇಡ, ಯೂಟ್ಯೂಬ್​ನಲ್ಲಿ ನೋಡಿದರೆ ಸಾಕು ಯಾವ ಸ್ಥಿತಿಯಲ್ಲಿ ಪ್ರಾಜೆಕ್ಟ್ ಇದೆ ಎಂದು ಗೊತ್ತಾಗುತ್ತದೆ. ನಮ್ಮ ರಾಜ್ಯದಲ್ಲಿ ತೆಗೆದುಕೊಂಡ ಅನೇಕ ನಿರ್ಧಾರಗಳು ದೇಶಕ್ಕೆ ಮಾಡಲ್ ಆಗಿರುವ ಉದಾಹರಣೆಗಳಿವೆ. ಡೊಲೆರೋ ಸಿಟಿ ನೋಡಲು ಹೋಗಿ ಕರ್ನಾಟಕ ಕಟ್ಟಬೇಕಾದ ಅವಶ್ಯಕತೆ ಇಲ್ಲ. ಗುಜರಾತ್​ಗೆ ಹೋಗದೇ ಯೂಟ್ಯೂಬ್​ನಲ್ಲಿ ಡೊಲೆರೋ ಸಿಟಿ ನೋಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಡೊಲೆರೋ ಸಿಟಿ ಮಾಡಲ್ ನಮ್ಮ ರಾಜ್ಯಕ್ಕೆ ಅವಶ್ಯಕತೆ ಇಲ್ಲ. ನಮಗೆ ಬೇಕಾಗಿರುವುದು ಜನರ ಬದುಕು. ಜನರು ಬದಕಲು ಏನು ಮಾಡಬೇಕೋ ನೋಡಿ. ಶಿಕ್ಷಣ, ಆರೋಗ್ಯ, ಕೃಷಿ, ಉದ್ಯೋಗ ಸೃಷ್ಟಿಗೆ ಏನು ಮಾಡಬೇಕು ಎಂದು ಇಲ್ಲಿ ಕೂತು ಚರ್ಚೆ ಮಾಡಬೇಕು. ಅದು ಬಿಟ್ಟು ಡೊಲೆರೋ ಸಿಟಿ ಕಟ್ಟೋ ಅವಶ್ಯತೆ ಇಲ್ಲ. ಡೊಲೆರೋ ಸಿಟಿ ಮುಕ್ತಾಯ ಆಗಲು ಇನ್ನು 100 ವರ್ಷ ಬೇಕು. ಹೀಗಾಗಿ ಜಗದೀಶ್ ಶೆಟ್ಟರ್ ಗುಜರಾತ್ ಮಾಡಲ್ ಬಿಟ್ಟು ರಾಜ್ಯದಲ್ಲೆ ಉತ್ತಮ ಮಾಡಲ್ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಡೊಲೆರೋ ಸಿಟಿ ಮುಗಿದಿಲ್ಲ ಆಗಲೇ ಅಯೋಧ್ಯೆಯಲ್ಲಿ 10 ಸಿಟಿ ಘೋಷಣೆ ಮಾಡಿದ್ದಾರೆ. ಯುಪಿ ಚುನಾವಣೆ ಇರುವುದರಿಂದ ಬಿಜೆಪಿ ಯುಪಿಯಲ್ಲಿ 3ಡಿ ತೋರಿಸುತ್ತಿದೆ. 3ಡಿ ಯಲ್ಲಿ ಏನು ಬೇಕಾದರೂ ತೋರಿಸಿಕೊಳ್ಳಬಹುದು. ಯಾವುದೇ ರಾಜ್ಯದ ಮಾಡಲ್ ಎಂದು ಹೋಗಿ ನಮ್ಮ ರಾಜ್ಯದ ಗೌರವ ಹಾಳು ಮಾಡಬೇಡಿ. ನಮ್ಮ ರಾಜ್ಯದಲ್ಲೆ ಉತ್ತಮ ಕಾರ್ಯಕ್ರಮ ಕೊಡೋರು ಬೇಕಾದಷ್ಟು ಜನ ಇದ್ದಾರೆ. ಅವರನ್ನು ಬಳಕೆ ಮಾಡಿಕೊಂಡು ಕೆಲಸ ಮಾಡಿ ಎಂದು ಜಗದೀಶ್ ಶೆಟ್ಟರ್​ಗೆ ಹೆಚ್​.ಡಿ. ಕುಮಾರಸ್ವಾಮಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಸುಮಲತಾ ಹೆಚ್​ಡಿಕೆ ಪುತ್ರನನ್ನ ಸೋಲಿಸಿದ್ದಕ್ಕೆ ಕುಮಾರಸ್ವಾಮಿ ರಾಜಕೀಯ ಮಾಡುತ್ತಿದ್ದಾರೆ: ಹುಬ್ಬಳ್ಳಿಯಲ್ಲಿ ಸಿದ್ದರಾಮಯ್ಯ ಹೇಳಿಕೆ

ನನ್ನ ಮತ್ತು ಇಂದ್ರಜಿತ್ ನಡುವಿನ ಚಿತ್ರ ಹಳೆಯದು: ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಸ್ಪಷ್ಟನೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada