Green Skill Training Centre: ಬಳಸಿದ ಹೂಗಳಿಂದ ರಂಗೋಲಿ, ಸಾವಯವ ಬಣ್ಣ ತಯಾರಿಸುತ್ತಿರುವ ನಿಮ್ಹಾನ್ಸ್​​​, ಇದು ವಿನೂತ ಪ್ರಯತ್ನ ಎಂದ ಶಾಸಕ

ಬಳಸಿದ ಹೂಗಳಿಂದ ನಿಮ್ಹಾನ್ಸ್ ಗ್ರೀನ್ ಸ್ಕಿಲ್ ಟ್ರೈನಿಂಗ್ ಸೆಂಟರ್ ರಂಗೋಲಿ ಮತ್ತು ಸಾವಯವ ಬಣ್ಣ ತಯಾರಿಸುತ್ತಿದ್ದಾರೆ, ಈ ಬಗ್ಗೆ ಶಾಸಕರು ಕೂಡ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

Green Skill Training Centre: ಬಳಸಿದ ಹೂಗಳಿಂದ ರಂಗೋಲಿ, ಸಾವಯವ ಬಣ್ಣ ತಯಾರಿಸುತ್ತಿರುವ ನಿಮ್ಹಾನ್ಸ್​​​,  ಇದು ವಿನೂತ ಪ್ರಯತ್ನ ಎಂದ ಶಾಸಕ
ಸಾಂದರ್ಭಿಕ ಚಿತ್ರ

Updated on: May 18, 2023 | 11:53 AM

ರಾಜಕಾರಣಿಗಳಿಗೆ ನೀಡುವ ಹೂವಿನ ಹಾರ, ಹೂಗುಚ್ಛಗಳನ್ನು ಏನು? ಮಾಡುತ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಬಹುದು, ಕೆಲವರು ಅದನ್ನು ಕಸದ ಬುಟ್ಟಿಗೆ ಅಥವಾ ಗಿಡಗಳಿಗೆ ಗೊಬ್ಬರ ಎಂದು ಹಾಕಿಕೊಳ್ಳಬಹುದು, ಆದರೆ ಇನ್ನೂ ಕೇಲವರು ಹೀಗೂ ಮಾಡುತ್ತಾರೆ. ಹೌದು ಇತ್ತೀಚೆಗೆ ಕರ್ನಾಟಕದ ಚುನಾವಣೆ ಮುಗಿದು, ಫಲಿತಾಂಶ ಬಂದು ಕಾಂಗ್ರೆಸ್​​​ ಸರ್ಕಾರ ರಚನೆಯಾಗಿದೆ. ಆದರೆ ಈ ಗೆಲುವಿನ ಸಂಭ್ರಮಕ್ಕೆ ಅನೇಕ ಅಭಿಮಾನಿಗಳು, ಹಿರಿಯರು, ಕಾರ್ಯಕರ್ತರು ಹೂವಿನ ಹಾರ, ಹೂಗುಚ್ಛಗಳನ್ನು ನೀಡಿದ್ದಾರೆ. ಆದರೆ ಈ ಹೂಗಳನ್ನು ವ್ಯರ್ಥವಾಗದಂತೆ ನೋಡಿಕೊಳ್ಳಲು ನಿಮ್ಹಾನ್ಸ್ ಗ್ರೀನ್ ಸ್ಕಿಲ್ ಟ್ರೈನಿಂಗ್ ಸೆಂಟರ್ ಹೊಸ ಪ್ರಯೋಗವನ್ನು ಮಾಡುತ್ತಿದೆ. ಹೌದು ರಾಜಕಾರಣಿಗಳು ಅಥವಾ ದೇವಾಲಯದಲ್ಲಿ ಉಪಯೋಗ ಮಾಡಿದ ಹೂಗಳನ್ನು ಸಂಗ್ರಹಿಸಿ, ಅದರಲ್ಲಿ ರಂಗೋಲಿ ಅಥವಾ ಸಾವಯವ ಬಣ್ಣವನ್ನು ಮಾಡಲು ಉಪಯೋಗ ಮಾಡುತ್ತಾರೆ.

ಈಗಾಗಲೇ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಅವರ ಮನೆಯಲ್ಲಿ ಇಂತಹದೇ ಒಂದು ಘಟನೆ ನಡೆದಿದೆ, ಹೌದು ಶಾಸಕರಾಗಿ ಆಯ್ಕೆಯಾದ ನಂತರ ಅವರಿಗೆ ಅನೇಕರು ಹೂವಿನ ಹಾರ ಮತ್ತು ಹೂಗುಚ್ಛಗಳನ್ನು ತಂದಿದ್ದರು. ಹೂವಿನ ಹಾರ ಮತ್ತು ಹೂಗುಚ್ಛಗಳು ಒಂದು ಕಡೆ ಸಂಗ್ರಹ ಮಾಡಲಾಗಿತ್ತು. ಈ ಸಮಯದಲ್ಲಿ ಶಾಸಕ ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿದ ಕೋರಮಂಗಲ 1ನೇ ಬ್ಲಾಕ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಪದ್ಮಶ್ರೀ ಬಲರಾಮ್ ಅವರು ಕೊಠಡಿ ತುಂಬ ಹೂಮಾಲೆ, ಹೂಗುಚ್ಛಗಳನ್ನು ಕಂಡು, ಈ ಹೂಮಾಲೆ, ಹೂಗುಚ್ಛಗಳು ಇನ್ನೂ ಯಾವುದಕ್ಕೂ ಉಪಯೋಗವಿಲ್ಲ ಎಂದು ನಿಮ್ಹಾನ್ಸ್ ನಲ್ಲಿರುವ ಗ್ರೀನ್ ಸ್ಕಿಲ್ ಟ್ರೈನಿಂಗ್ ಸೆಂಟರ್​​ಗೆ​​​ ಕಳುಹಿಸಿದ್ದಾರೆ.

ರಾಜಕಾರಣಿಗಳು ಅಥವಾ ಮಂತ್ರಿಗಳಿಗೆ ನೀಡಿದ ಹೂಗಳನ್ನು ನಿಮ್ಹಾನ್ಸ್ ನಲ್ಲಿರುವ ಗ್ರೀನ್ ಸ್ಕಿಲ್ ಟ್ರೈನಿಂಗ್ ಸೆಂಟರ್​​ಗೆ ಕಳುಹಿಸಲಾಗುವುದು ಅಲ್ಲಿರುವ ಮಾನಸಿಕ ರೋಗಿಗಳು, ಇದನ್ನೂ ಪುಡಿ ಮಾಡಿ, ರಂಗೋಲಿ ಮತ್ತು ಸಾವಯವ ಬಣ್ಣವನ್ನು ಮಾಡುತ್ತಾರೆ, ಈ ಬಗ್ಗೆ ಮಾತನಾಡಿದ ಪದ್ಮಶ್ರೀ ಬಲರಾಮ್ ನಿಮ್ಹಾನ್ಸ್ ನಲ್ಲಿರುವ ಗ್ರೀನ್ ಸ್ಕಿಲ್ ಟ್ರೈನಿಂಗ್ ಸೆಂಟರ್​​ ಬಗ್ಗೆ ನನಗೆ ತಿಳಿದಿತ್ತು. ಹಾಗಾಗಿ ರೋಗಿಗಳಿಗೆ ಸಹಾಯ ಮಾಡಲು ಮತ್ತು ಹೂವುಗಳಿಂದ ಮಾಡಿದ ಹೂಮಾಲೆಗಳು ವ್ಯರ್ಥವಾಗದಂತೆ ನೋಡಿಕೊಳ್ಳಲು ಇದು ಅತ್ಯುತ್ತಮ ಮಾರ್ಗವೆಂದು ನಾನು ಭಾವಿಸಿ, ಇಂತಹ ಕೆಲಸವನ್ನು ಮಾಡಲಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ: Health Tips: ಧೂಮಪಾನಕ್ಕಿಂತಲೂ ಕುಳಿತುಕೊಳ್ಳುವ ಜೀವನಶೈಲಿ ಅಪಾಯಕಾರಿಯೇ? ಇಲ್ಲಿದೆ ತಜ್ಙರ ಎಚ್ಚರಿಕೆ

ಇನ್ನೂ ಗ್ರೀನ್ ಸ್ಕಿಲ್ ತರಬೇತಿ ಕೇಂದ್ರದ ಬೋಧಕರಾದ ಎನ್.ಬಿ.ಮೈತ್ರೇಯಿ ಮಾತನಾಡಿ, ನಿಮ್ಹಾನ್ಸ್ ನಲ್ಲಿರುವ ಗ್ರೀನ್ ಸ್ಕಿಲ್ ಟ್ರೈನಿಂಗ್ ಸೆಂಟರ್ ಸಾಮಾನ್ಯವಾಗಿ ದೇವಾಲಯಗಳು ಮತ್ತು ಇತರ ಸ್ಥಳಗಳಿಂದ ದಿನಕ್ಕೆ ಸುಮಾರು 10-15 ಕೆಜಿ ಬಳಸಿದ ಹೂವುಗಳು ಬರುತ್ತವೆ. ನಿಮ್ಹಾನ್ ಕ್ಯಾಂಪಸ್‌ನಲ್ಲಿ ಮಾನಸಿಕ ರೋಗಿಗಳು ಹೂವುಗಳನ್ನು ಬೇರ್ಪಡಿಸಲು ಕೇಳುತ್ತಾರೆ. ಹೋಳಿಗೆ ಸಾವಯವ ಬಣ್ಣ ಮತ್ತು ರಂಗೋಲಿಗಳನ್ನು ಬಿಡಿಸಲು ಬೇರ್ಪಡಿಸಿದ ಹೂವುಗಳನ್ನು ಒಣಗಿಸಿ ಪುಡಿ ಮಾಡಲಾಗುತ್ತದೆ. ಮಕ್ಕಳಿಗಾಗಿ ಆರ್ಟ್ ಕಿಟ್‌ಗಳನ್ನು ತಯಾರಿಸಲು ಹೂವುಗಳನ್ನು ಸಹ ಬಳಸಲಾಗುತ್ತದೆ ಎಂದು ಹೇಳಿದರು.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
Follow Us