ಶಾಪಿಂಗ್ ಕಾಂಪ್ಲೆಕ್ಸ್‌ಗೆ ನುಗ್ಗಿದ ಲಾರಿ, ಸ್ಥಳದಲ್ಲೇ ಚಾಲಕ ಸಾವು
ಬೆಂಗಳೂರು: ಶಾಪಿಂಗ್ ಕಾಂಪ್ಲೆಕ್ಸ್‌ಗೆ ಟಿಪ್ಪರ್ ಲಾರಿ ನುಗ್ಗಿ ಚಾಲಕ ತೇಜಸ್ಸ್(32) ಮೃತಪಟ್ಟಿರುವ ಘಟನೆ ದೊಡ್ಡ ವಿದ್ಯಾರಣ್ಯಪುರ ಮುಖ್ಯರಸ್ತೆಯಲ್ಲಿ ನಡೆದಿದೆ. ಅಪಘಾತದ ರಭಸಕ್ಕೆ ಲಾರಿ ಮುಂಭಾಗ ನಜ್ಜುಗುಜ್ಜಾಗಿದೆ. ಲಾರಿಯಲ್ಲಿ ಸಿಲುಕಿಕೊಂಡಿದ್ದ ಕ್ಲೀನರ್ ಮಲ್ಲಪ್ಪ(23)ನನ್ನು ರಕ್ಷಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತದ ವೇಳೆ ಕ್ಲಿನರ್ ಮಲ್ಲಪ್ಪ ಚಾಲಕನ ಬದಲಾಗಿ ಲಾರಿ ಚಾಲನೆ ಮಾಡ್ತಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ಮತ್ತು ಅಗ್ನಿಶಾಮಕದಳ ಸಿಬ್ಬಂದಿಯಿಂದ ಲಾರಿ ತೆರವು ಕಾರ್ಯ ನಡೆದಿದೆ. ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಬೆಂಗಳೂರು: ಶಾಪಿಂಗ್ ಕಾಂಪ್ಲೆಕ್ಸ್‌ಗೆ ಟಿಪ್ಪರ್ ಲಾರಿ ನುಗ್ಗಿ ಚಾಲಕ ತೇಜಸ್ಸ್(32) ಮೃತಪಟ್ಟಿರುವ ಘಟನೆ ದೊಡ್ಡ ವಿದ್ಯಾರಣ್ಯಪುರ ಮುಖ್ಯರಸ್ತೆಯಲ್ಲಿ ನಡೆದಿದೆ. ಅಪಘಾತದ ರಭಸಕ್ಕೆ ಲಾರಿ ಮುಂಭಾಗ ನಜ್ಜುಗುಜ್ಜಾಗಿದೆ. ಲಾರಿಯಲ್ಲಿ ಸಿಲುಕಿಕೊಂಡಿದ್ದ ಕ್ಲೀನರ್ ಮಲ್ಲಪ್ಪ(23)ನನ್ನು ರಕ್ಷಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಅಪಘಾತದ ವೇಳೆ ಕ್ಲಿನರ್ ಮಲ್ಲಪ್ಪ ಚಾಲಕನ ಬದಲಾಗಿ ಲಾರಿ ಚಾಲನೆ ಮಾಡ್ತಿದ್ದ ಎಂದು ತಿಳಿದು ಬಂದಿದೆ. ಪೊಲೀಸರು ಮತ್ತು ಅಗ್ನಿಶಾಮಕದಳ ಸಿಬ್ಬಂದಿಯಿಂದ ಲಾರಿ ತೆರವು ಕಾರ್ಯ ನಡೆದಿದೆ. ಯಲಹಂಕ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.