ಮಕರ ರಾಶಿಗೆ ಶನಿ ಪ್ರವೇಶ: ಆಸ್ತಿಕ ಭಕ್ತ ಸಾಗರದಿಂದ ವಿಶೇಷ ಪೂಜೆ, ಹೋಮ
ಮಂಡ್ಯ: ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಹಾಕಾಳಿ ದೇವಾಲಯಕ್ಕೆ ಭಕ್ತ ಸಾಗರ ಹರಿದು ಬರ್ತಿದೆ. ಇಂದಿನ ವಿಶೇಷ ಏನಂದ್ರೆ ಮಕರ ರಾಶಿಗೆ ಶನಿ ಪ್ರವೇಶವಾಗುತ್ತಿರೋ ಹಿನ್ನೆಲೆಯಲ್ಲಿ ಭಕ್ತರು ಕಾಳಿ ದೇವಿಯ ಮೊರೆ ಹೋಗ್ತಿದ್ದಾರೆ. ಪಶ್ಚಿಮಾಭಿಮುಖವಾಗಿರೋ ಜಿಲ್ಲೆಯ ಏಕೈಕ ಮಹಾಕಾಳಿ ದೇವಾಲಯ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ಇದೆ. ಶನಿ ದೇವರ ಪ್ರಭಾವಕ್ಕೆ ಹೆದರಿ ಆಸ್ತಿಕರು ಮಹಾಕಾಳಿ ಬಳಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಮಕರ ರಾಶಿಯ ಹೆಸರಿರೋ ಬಹುತೇಕ ಭಕ್ತರಿಂದ ಕಾಳಿ ದೇವಿಗೆ ವಿಶೇಷ ಪೂಜೆ ನಡೆಯುತ್ತಿದ್ದು, ಶನಿ […]
ಮಂಡ್ಯ: ಅಮಾವಾಸ್ಯೆ ಹಿನ್ನೆಲೆಯಲ್ಲಿ ಮಹಾಕಾಳಿ ದೇವಾಲಯಕ್ಕೆ ಭಕ್ತ ಸಾಗರ ಹರಿದು ಬರ್ತಿದೆ. ಇಂದಿನ ವಿಶೇಷ ಏನಂದ್ರೆ ಮಕರ ರಾಶಿಗೆ ಶನಿ ಪ್ರವೇಶವಾಗುತ್ತಿರೋ ಹಿನ್ನೆಲೆಯಲ್ಲಿ ಭಕ್ತರು ಕಾಳಿ ದೇವಿಯ ಮೊರೆ ಹೋಗ್ತಿದ್ದಾರೆ.
ಪಶ್ಚಿಮಾಭಿಮುಖವಾಗಿರೋ ಜಿಲ್ಲೆಯ ಏಕೈಕ ಮಹಾಕಾಳಿ ದೇವಾಲಯ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಟಿ.ಎಂ.ಹೊಸೂರು ಗೇಟ್ ಬಳಿ ಇದೆ. ಶನಿ ದೇವರ ಪ್ರಭಾವಕ್ಕೆ ಹೆದರಿ ಆಸ್ತಿಕರು ಮಹಾಕಾಳಿ ಬಳಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಮಕರ ರಾಶಿಯ ಹೆಸರಿರೋ ಬಹುತೇಕ ಭಕ್ತರಿಂದ ಕಾಳಿ ದೇವಿಗೆ ವಿಶೇಷ ಪೂಜೆ ನಡೆಯುತ್ತಿದ್ದು, ಶನಿ ಪ್ರಭಾವ ಬೀರದಂತೆ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ ಹವನ ನಡೆಯುತ್ತಿದೆ. ತಮಗೆ ಶನಿ ಪ್ರಭಾವ ತಾಕದಂತೆ ಭಕ್ತರು ತಾಯತ ಕಟ್ಟಿಸಿಕೊಂಡು ತಡೆ ಒಡ್ಡಿಸಿಕೊಳ್ತಿದ್ದಾರೆ. ಬೆಳಗ್ಗೆಯಿಂದಲೇ ದೇವಾಲಯದಲ್ಲಿ ಪ್ರತ್ಯಂಗಿರಾ ಹಾಗೂ ಶನಿಶಾಂತಿ ಹೋಮ ನಡೆಯುತ್ತಿದೆ.
ಕೋಲಾರ: ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಶನಿ ಶಾಂತಿ ಹೋಮ, ಮಕರ ರಾಶಿಯಯವರಿಗೆ ವಿಶೇಷ ಶಾಂತಿ ಹೋಮ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಬಂಗಾರಪೇಟೆ ತಾಲೂಕಿನ ಹಂಚಾಳ ಬಳಿ ಇರುವ ನಂಜುಡೇಶ್ವರಸ್ವಾಮಿ ಸಮೇತ ನವಗ್ರಹ ದೇಗುಲ ಓಂಕಾರ ಕ್ಷೇತ್ರದಲ್ಲಿ ಲೋಕಲ್ಯಾಣರ್ಥ ಜೇಷ್ಠಾದೇವಿ ಸಮೇತ ಶನೈಶ್ಚರಸ್ವಾಮಿ ಶಾಂತಿಹೋಮ ಮಹಾಯಜ್ಞ ನಡೆಯಲಿದೆ.
ಧನುಸ್ಸು ರಾಶಿಯಿಂದ ಮಕರ ರಾಶಿಗೆ ಶನಿ ಪ್ರವೇಶ: ನವಗ್ರಹಗಳಲ್ಲಿ ಒಂದಾದ ಶನಿಗ್ರಹವು ಇಂದಿನಿಂದ ಧನುಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸಲಿದ್ದಾನೆ. ಈ ಹಿನ್ನೆಲೆಯಲ್ಲಿ ವಿವಿಧ ದೇವಾಲಯಗಳಲ್ಲಿ ಶನಿ ಶಾಂತಿ ಹೋಮ, ಮಕರ ರಾಶಿಯವರಿಗೆ ವಿಶೇಷ ಶಾಂತಿ ಹೋಮ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ. ಸ್ವಸ್ತಿಶ್ರೀ ವಿಕಾರಿ ನಾಮ ಸಂವತ್ಸರದ ಪುಷ್ಯ ಬಹಳ ಚತುರ್ಥಿ ಶುಕ್ರವಾರ ಶನೈಶ್ಚರಸ್ವಾಮಿಯು ಧನಸ್ಸು ರಾಶಿಯಿಂದ ಮಕರ ರಾಶಿಗೆ ಪ್ರವೇಶ ಮಾಡಲಿದ್ದಾರೆ.
Published On - 12:12 pm, Fri, 24 January 20