ಆಡಳಿತ ಪಕ್ಷದಲ್ಲೇ ಇದ್ದು ಡ್ರಗ್ ದಂಧೆಗೆ ಇಳಿದಿದ್ನಾ ಕಾರ್ತಿಕ್ ರಾಜ್!
ಬೆಂಗಳೂರು: ರಾಜ್ಯದಲ್ಲಿ ಡ್ರಗ್ ದಂಧೆಗೆ ಸಂಬಂಧಪಟ್ಟಂತೆ ಸಿಸಿಬಿ ವಶದಲ್ಲಿರುವ ಕಾರ್ತಿಕ್ ರಾಜ್, ರಾಷ್ಟ್ರೀಯ ಪಕ್ಷ ಬಿಜೆಪಿಯ ಕಾರ್ಯಕರ್ತನಾಗಿದ್ದಾನೆ ಎಂಬ ಸ್ಪೋಟಕ ಮಾಹಿತಿ ಈಗ ಹೊರಬಿದ್ದಿದೆ. ಸಿಸಿಬಿ ವಶದಲ್ಲಿರೋ ಡ್ರಗ್ ಪೆಡ್ಲರ್ ಕಾರ್ತಿಕ್ ರಾಜ್ಗೂ, ರಾಷ್ಟ್ರೀಯ ಪಕ್ಷ ಬಿಜೆಪಿಗೂ ನಂಟು ಇರುವುದು ಈಗ ಬೆಳಕಿಗೆ ಬಂದಿದೆ. ಗಾಲಿ ಜನಾರ್ದನ ರೆಡ್ಢಿ ಹಾಗೂ ನಟ ಸಾಯಿಕುಮಾರ್ ಜೊತೆಗೆ ಕಾರ್ತಿಕ್ ರಾಜ್ ಫೋಟೊ ತೆಗೆಸಿಕೊಂಡಿದ್ದಾನೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಶಿವಾಜಿನಗರದ ಚುನಾವಣೆ ಕೆಲಸ ಮಾಡಿದ್ದ ಕಾರ್ತಿಕ್ ರಾಜ್ಗೆ, ಚುನಾವಣೆ […]

ಬೆಂಗಳೂರು: ರಾಜ್ಯದಲ್ಲಿ ಡ್ರಗ್ ದಂಧೆಗೆ ಸಂಬಂಧಪಟ್ಟಂತೆ ಸಿಸಿಬಿ ವಶದಲ್ಲಿರುವ ಕಾರ್ತಿಕ್ ರಾಜ್, ರಾಷ್ಟ್ರೀಯ ಪಕ್ಷ ಬಿಜೆಪಿಯ ಕಾರ್ಯಕರ್ತನಾಗಿದ್ದಾನೆ ಎಂಬ ಸ್ಪೋಟಕ ಮಾಹಿತಿ ಈಗ ಹೊರಬಿದ್ದಿದೆ.

ಸಿಸಿಬಿ ವಶದಲ್ಲಿರೋ ಡ್ರಗ್ ಪೆಡ್ಲರ್ ಕಾರ್ತಿಕ್ ರಾಜ್ಗೂ, ರಾಷ್ಟ್ರೀಯ ಪಕ್ಷ ಬಿಜೆಪಿಗೂ ನಂಟು ಇರುವುದು ಈಗ ಬೆಳಕಿಗೆ ಬಂದಿದೆ. ಗಾಲಿ ಜನಾರ್ದನ ರೆಡ್ಢಿ ಹಾಗೂ ನಟ ಸಾಯಿಕುಮಾರ್ ಜೊತೆಗೆ ಕಾರ್ತಿಕ್ ರಾಜ್ ಫೋಟೊ ತೆಗೆಸಿಕೊಂಡಿದ್ದಾನೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಶಿವಾಜಿನಗರದ ಚುನಾವಣೆ ಕೆಲಸ ಮಾಡಿದ್ದ ಕಾರ್ತಿಕ್ ರಾಜ್ಗೆ, ಚುನಾವಣೆ ಕೆಲಸಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಯುವಮೋರ್ಚಾದಿಂದ ಪತ್ರ ಸಹ ನೀಡಲಾಗಿದೆ. ಹೀಗಾಗಿ ರಾಷ್ಟ್ರೀಯ ಪಕ್ಷದಲ್ಲಿ ಇದ್ದುಕೊಂಡೆ ಕಾರ್ತಿಕ್ ರಾಜ್ ಡ್ರಗ್ ದಂಧೆಗೆ ಇಳಿದಿದ್ದನಾ ಎನ್ನುವ ಅನುಮಾನ ಎಲ್ಲೆಡೆ ವ್ಯಕ್ತವಾಗುತ್ತಿದೆ.
Published On - 4:49 pm, Thu, 3 September 20




