ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶ: ರಾಜ್ಯ ಚುನಾವಣಾ ಆಯೋಗ
ರಾಜ್ಯದ 224 ವಿಧಾನಸಭೆ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶ ನೀಡಲಾಗಿದೆ ಎಂದು ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಹೇಳಿದ್ದಾರೆ.
ಬೆಂಗಳೂರು: ಮುಂದಿನ ವರ್ಷ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ (Vidhansbha Election)ನಡೆಯಲಿದೆ. ಈ ಸಂಬಂಧ ರಾಜ್ಯದ 224 ವಿಧಾನಸಭೆ ಕ್ಷೇತ್ರಗಳ ಮತದಾರರ ಪಟ್ಟಿ (Voters List) ಪರಿಷ್ಕರಣೆಗೆ ಅವಕಾಶ ನೀಡಲಾಗಿದೆ ಎಂದು ಬೆಂಗಳೂರಿನಲ್ಲಿ ರಾಜ್ಯ ಚುನಾವಣಾ ಆಯುಕ್ತ ಮನೋಜ್ ಕುಮಾರ್ ಹೇಳಿದ್ದಾರೆ. ಭಾರತ ಚುನಾವಣಾ ಆಯೋಗದ ನಿರ್ದೇಶನಗಳನ್ವಯ ರಾಜ್ಯ ಚುನಾವಣಾ ಆಯೋಗ 224 ವಿಧಾನ ಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆಯನ್ನು ಆರಂಭಿಸಿದೆ. ಪರಿಷ್ಕರಿಸಿದ ಕರುಡು ಮತದಾನ ಪಟ್ಟಿಯು ನವೆಂಬರ್ 9ರಂದು ಪ್ರಕಟವಾಗಲಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ನವೆಂಬರ್ 9ರಿಂದ ಡಿಸೆಂಬರ್ 8ರವರೆಗೆ ಅವಕಾಶ ನೀಡಲಾಗಿದೆ. ಹಕ್ಕುಗಳು ಮತ್ತು ಆಕ್ಷೇಪಣೆ ವಿಲೇವಾರಿಗೆ ಡಿಸೆಂಬರ್ 26ರ ವರೆಗೆ ಅವಕಾಶ ನೀಡಲಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಣೆಯಲ್ಲಿ ತಿಳಿಸಿದೆ.
ಅಂತಿಮವಾಗಿ ಪರೀಕ್ಷಿಸಿದ ಪಟ್ಟಿಯನ್ನು 2023ರ ಜನವರಿ 5ರಂದು ಪ್ರಕಟಗೊಳ್ಳುತ್ತದೆ. ಮತದಾರರ ಪಟ್ಟಿಯಲ್ಲಿ ಸಾರ್ವಜನಿಕರು ತಮ್ಮ ಹೆಸರುನ್ನು ಪರಿಶೀಲಿಸಿಕೊಳ್ಳಲು ಚುನಾವಣಾ ಆಯೋಗದ ವೆಬ್ಸೈಟ್ನಲ್ಲಿ www.ceokarnataka.gov.in ಭೇಟಿ ನೀಡಬಹುದಾಗಿದೆ. ಒಂದು ವೇಳೆ ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ದರೇ ಫಾರ್ಮ್ 6ರ ಮೂಲಕ ಸೇರ್ಪಡೆಯಾಗಬಹುದು. ಗರುಡ ಆಪ್ ಮೂಲಕ ಅಥವಾ ಸ್ಮಾರ್ಟ್ ಫೋನ್ ಮೂಲಕ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ವಿಧಾನಸಭಾ ಕ್ಷೇತಗಳ ಮತದಾರರ ಪಟ್ಟಿಯನ್ನು ಮುಖ್ಯ ಚುನಾವಣಾಧಿಕಾರಿಗಳು, ಕರ್ನಾಟಕ ರಾಜ್ಯ ಇವರ ಅಧಿಕೃತ www.ceokarnataka.gov.in de hamp ಆವೃತ್ತಿಯನ್ನು ಹಾಕಲಾಗುವುದು. ಸಾರ್ವಜನಿಕರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದ ಬಗ್ಗೆ ಪರಿಶೀಲಿಸುವುದು ಹಾಗೂ ಸರಿಯಾದ ಹೆಸರನ್ನು ನಮೂದುಗಳೊಂದಿಗೆ ನೊಂದಾಯಿಸಿದ ಬಗ್ಗೆ ಖಚಿತಪಡಿಸಿಕೊಳ್ಳುವುದು.
ಅರ್ಜಿ ಸಲ್ಲಿಸುವ ವಿಧಾನ: ಪ್ರತಿ ವಿಧಾನಸಭಾಕ್ಷೇತ್ರಕ್ಕೆ ನೇಮಕವಾಗಿರುವ ಅಧಿಸೂಚಿತ ಮತದಾರರ ನೋಂದಣಾಧಿಕಾರಿಗಳು/ ಮತದಾರರ ನೋಂದಣಾಧಿಕಾರಿಗಳಿಗೆ ನಿಗದಿತ ನಮೂನೆಗಳಲ್ಲಿ ಅವಶ್ಯಕ ದಾಖಲೆಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಬೇಕು.
1. ನಮೂನೆ -6 2. ನಮೂನೆ -6A ಹೆಸರು ಸೇರ್ಪಡೆಗಾಗಿ ಸಾಗರೋತ್ತರ ಭಾರತೀಯ ಮತದಾರರಿಂದ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗಾಗಿ 3. ನಮೂನೆ -6B ಮತದಾರರ ಪಟ್ಟಿಯಲ್ಲಿರುವ ಮತದಾರರು ಸ್ವಯಂ ಪ್ರೇರಿತರಾಗಿ ಆಧಾರ್ ಅಥವಾ ನಮೂನೆ 6ಬಿರಲ್ಲಿ ನಮೂದಿಸಿದ ಇತರೆ 11 ದಾಖಲಾತಿಗಳಲ್ಲಿ ಒಂದನ್ನು ಜೋಡಣೆ ಮಾಡಿ ದೃಢಿಕರಿಸುವ ಸಲುವಾಗಿ 4. ನಮೂನೆ -7 ಹೆಸರು ಸೇರ್ಪಡೆಯ ವಿರುದ್ಧ ಆಕ್ಷೇಪಣೆ ಅಥವಾ ಹೆಸರು ತೆಗೆದು ಹಾಕುವ ಸಲುವಾಗಿ 5. ನಮೂನೆ -8 ವಿಧಾನ ಸಭಾ ಕ್ಷೇತ್ರದ ಒಳಗೆ/ಹೊರಗೆ ನಿವಾಸ ಬದಲಾವಣೆ, ನಮೂದುಗಳಲ್ಲಿ ತಿದ್ದುಪಡಿಗಳು, ಮೊಬೈಲ್ ಸಂಖ್ಯೆ ನಮೂದಿಸುವುದು, ಅಸ್ಪಷ್ಟ ಭಾವಚಿತ್ರಗಳನ್ನು ಬದಲಾಯಿಸುವುದು, ಎಪಿಕ್ ಬದಲಾವಣೆ ಮತ್ತು ಮತದಾರರ ಪಟ್ಟಿಯಲ್ಲಿ PwD (Persons with Disability) ವ್ಯಕ್ತಿಯ ಗುರುತನ್ನು ನಮೂದು ಮಾಡುವ ಸಲುವಾಗಿ.
ಮೇಲಿನ ಅರ್ಜಿಗಳನ್ನು www.nvsp.in ಅಥವಾ Voter Portal ಅಥವಾ Voter Helpline Mobile App ನ ಮುಖಾಂತರವೂ ಸಲ್ಲಿಸಲು ಅವಕಾಶವಿರುತ್ತದೆ.
ರಾಜ್ಯದಲ್ಲಿರುವ ಮತದಾರರು ಒಟ್ಟು ಮತದಾರರು 5,09,01,662, ಪುರುಷ ಮತದಾರರು 2,56,85,954, ಮಹಿಳಾ ಮತದಾರರು 2,52,11,218 ಮತ್ತು ಇತರರು 4,490 ಇದ್ದಾರೆ. 224 ಕ್ಷೇತ್ರದ ಪೈಕಿ ಬೆಂಗಳೂರು ದಕ್ಷಿಣ ಅತಿ ಹೆಚ್ಚು ಮತದಾರರಿರುವ ಕ್ಷೇತ್ರವಾಗಿದ್ದು, ಬೆಂ. ದಕ್ಷಿಣದಲ್ಲಿ 6,41,466 ಮತದಾರರಿದ್ದಾರೆ. ಶೃಂಗೇರಿ ವಿಧಾನಸಭಾ ಕ್ಷೇತ್ರ ಅತಿ ಕಡಿಮೆ ಮತದಾರರಿರುವ ಕ್ಷೇತ್ರವಾಗಿದೆ.
ಬಾಗಲಕೋಟೆ, ರಾಯಚೂರು, ಚಿಕ್ಕಬಳ್ಳಾಪುರ ರಾಮನಗರ, ಕೊಡಗು, ಮೈಸೂರು ಸೇರಿದಂತೆ 13 ಜಿಲ್ಲೆಗಳಲ್ಲಿ ಮಹಿಳಾ ಮತದಾರರು ಹೆಚ್ಚಿದ್ದಾರೆ.
2022ರಲ್ಲಿ ಒಟ್ಟು ಮತಗಟ್ಟೆ 58,179. ಕರಡು ಮತದಾರರ ಪಟ್ಟಿಯಲ್ಲಿ 2023ರಲ್ಲಿ ಒಟ್ಟು ಮತಗಟ್ಟೆ ಸಂಖ್ಯೆ 58,282ಕ್ಕೆ ಏರಿಕೆಯಾಗಿಲಿದೆ. ಹೊಸದಾಗಿ 225ಮತಗಟ್ಟೆ ಸೇರ್ಪಡೆ ಮಾಡಲಾಗಿದೆ. 122ಮತಗಟ್ಟೆಗಳನ್ನು ವಿಲೀನ ಮಾಡಲಾಗಿದೆ. ಒಟ್ಟಾರೆ 103 ಮತಗಟ್ಟೆ ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಈದಲು ಇಲ್ಲಿ ಕ್ಲಿಕ್ ಮಾಡಿ
Published On - 4:21 pm, Wed, 9 November 22