ಮೀಸಲಾತಿ ಸಾಧ್ಯತೆ ಪರಿಶೀಲನೆಗೆ ಉನ್ನತ ಸಮಿತಿ ರಚನೆ: ಕರ್ನಾಟಕ ಸಚಿವ ಸಂಪುಟ ಸಭೆ ನಿರ್ಧಾರ
ಮೀಸಲಾತಿ ಬಗ್ಗೆ ಉನ್ನತ ಸಮಿತಿ ರಚಿಸಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ವೀರಶೈವ, ಒಕ್ಕಲಿಗೆ ಸೇರಿದಂತೆ ಇತರೆ ಸಮುದಾಯದ ಕೆಲ ಪಂಗಡಗಳನ್ನ ಸೇರಿಸಲಾಗಿದೆ. ಎಸ್‌ಟಿಗೆ ಸೇರಿಸಲು ಕುರುಬ ಸಮುದಾಯ ಒತ್ತಾಯಿಸುತ್ತಿದೆ.
ಬೆಂಗಳೂರು: ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಬಜೆಟ್ ಸಿದ್ಧತಾ ರಾಜ್ಯ ಸಚಿವ ಸಂಪುಟ ಸಭೆ ಮುಕ್ತಾಯಗೊಂಡಿದ್ದು, ಸಭೆ ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮೀಸಲಾತಿಯ ಸಾಧ್ಯತೆಗಳನ್ನು ಪರಿಶೀಲಿಸಲು ಉನ್ನತ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದ ಒಬಿಸಿ ಲಿಸ್ಟ್ಗೆ ವೀರಶೈವ ಹಾಗೂ ಒಕ್ಕಲಿಗ ಸಮುದಾಯದ ಕೆಲ ಪಂಗಡಗಳನ್ನ ಸೇರಿಸಲಾಗಿದೆ. ಸುಪ್ರೀಂಕೋರ್ಟ್ ಶೇ 50ಕ್ಕಿಂತ ಹೆಚ್ಚು ಮೀಸಲಾತಿ ಇರಬಾರದು ಎಂದು ಹೇಳಿದೆ. ಇತರ ಕೆಲ ರಾಜ್ಯಗಳಲ್ಲಿ ಇದೇ ರೀತಿ ಬೇಡಿಕೆ ಬಂದಿದೆ ಎಂದು ಹೇಳಿದರು.
ಮೀಸಲಾತಿ ಬಗ್ಗೆ ಉನ್ನತ ಸಮಿತಿ ರಚಿಸಲು ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ವೀರಶೈವ, ಒಕ್ಕಲಿಗೆ ಸೇರಿದಂತೆ ಇತರೆ ಸಮುದಾಯದ ಕೆಲ ಪಂಗಡಗಳನ್ನ ಸೇರಿಸಲಾಗಿದೆ. ಎಸ್‌ಟಿಗೆ ಸೇರಿಸಲು ಕುರುಬ ಸಮುದಾಯ ಒತ್ತಾಯಿಸುತ್ತಿದೆ. ಶೇ 50ಕ್ಕಿಂತ ಹೆಚ್ಚು ಮೀಸಲಾತಿ ಇರಬಾರದೆಂದು ಸುಪ್ರೀಂಕೋರ್ಟ್ ಹೇಳಿದೆ. ಬೇರೆಬೇರೆ ರಾಜ್ಯಗಳಲ್ಲೂ ಇದೇ ರೀತಿ ಬೇಡಿಕೆ ಬಂದಿದೆ ಎಂದು ಹೇಳಿದರು.
ಮೀಸಲಾತಿ ಕುರಿತು ಸಮಗ್ರ ವರದಿ ನೀಡಲು ಉನ್ನತ ಸಮಿತಿ ರಚನೆಗೆ ತೀರ್ಮಾನ ಕೈಗೊಳ್ಳಲಾಗಿದೆ. ವರದಿ ನೀಡಲು ಉನ್ನತ ಸಮಿತಿಗೆ ಯಾವುದೇ ಗಡುವು ನೀಡಿಲ್ಲ. ಸಮಿತಿಗೆ ಸದಸ್ಯರ ನೇಮಕ ಜವಾಬ್ದಾರಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ನೀಡಿದ್ದೇವೆ ಎಂದು ಸಂಪುಟ ಸಭೆ ಬಳಿಕ ಪ್ರತಿಕ್ರಿಯೆ ನೀಡಿದರು. ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕಡ್ಡಾಯ ಮಾಡಲು ₹ 18 ಕೋಟಿ ನೀಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈಗಾಗಲೇ 782 ಠಾಣೆಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ. ಉಳಿದ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಸಬೇಕಿದೆ. ಇನ್ನು, ಸಂಪುಟ ಸಭೆಯಲ್ಲಿ ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಬಗ್ಗೆ ಚರ್ಚೆಯಾಗಿಲ್ಲ ಎಂದರು.
ಕಲ್ಯಾಣ ಕರ್ನಾಟಕ ಭಾಗದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಬೆಂಗಳೂರಿಗೆ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ನಿರ್ಮಾಣದ ಕುರಿತು ಚರ್ಚಿಸಲಾಗಿದೆ. ಕರ್ನಾಟಕ ಸಿವಿಲ್ ಸರ್ವೀಸ್ನಲ್ಲಿ ಕಾಂಪಿಟೇರ್ ಲಿಟ್ರಸಿ ಇತ್ತು. ಇದೀಗ ಎಲ್ಲರೂ ಕಾಂಪಿಟೇಟರ್ಸ್ ಆಗಿರೋ ಕಾರಣ ಈ ಯೋಜನೆ ಕೈ ಬಿಡಲಾಗಿದೆ. ಇನ್ನು, ಆಯುಷ್ ಕಾಲೇಜು ಉಪನ್ಯಾಸಕರಿಗೂ ಕೂಡ ಅಲೋಪತಿ ರೀತಿಯ ಸ್ಯಾಲರಿ ಸ್ಕೇಲ್ ಫಿಕ್ಸ್ ಮಾಡಲಾಗಿದೆ ಎಂದರು.
ಇದನ್ನೂ ಓದಿ: ಗಣಿಗಳಲ್ಲಿ 15 ದಿನಕ್ಕೊಮ್ಮೆ ಅಧಿಕಾರಿಗಳಿಂದ ಸ್ಫೋಟಕಗಳ ಪರಿಶೀಲನೆ: ಬಸವರಾಜ ಬೊಮ್ಮಾಯಿ
ಇದನ್ನೂ ಓದಿ: ಡಾ. ಬಸವರಾಜ ಗುರೂಜಿಯಿಂದ ರಮೇಶ್ ಜಾರಕಿಹೊಳಿ ಜಾತಕ ವಿಶ್ಲೇಷಣೆ: ಸದ್ಯಕ್ಕೆ ಸಂಕಷ್ಟ, ಏಪ್ರಿಲ್ ನಂತರ ಗುರು ಬಲ