ಸಿಹಿ ಸುದ್ದಿ ನೀಡಿದ ಎಸ್ಕಾಂ: ಮುಂದಿನ 3 ತಿಂಗಳ ಕಾಲ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡದಿರಲು ನಿರ್ಧಾರ

|

Updated on: Mar 15, 2023 | 12:26 PM

ವಿದ್ಯಾರ್ಥಿಗಳು, ರೈತರ ಹಿತದೃಷ್ಟಿಯಿಂದ ರಾಜ್ಯದಲ್ಲಿ ಮುಂದಿನ 3 ತಿಂಗಳ ಕಾಲ ಲೋಡ್ ಶೆಡ್ಡಿಂಗ್ ಮಾಡದಿರಲು, ಎಲ್ಲ ಎಸ್ಕಾಂಗಳು ನಿರ್ಧರಿಸಿವೆ.

ಸಿಹಿ ಸುದ್ದಿ ನೀಡಿದ ಎಸ್ಕಾಂ: ಮುಂದಿನ 3 ತಿಂಗಳ ಕಾಲ ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಮಾಡದಿರಲು ನಿರ್ಧಾರ
ಎಸ್ಕಾಂ (ಎಡಚಿತ್ರ) ಸಾಂಧರ್ಬಿಕ ಚಿತ್ರ
Follow us on

ಬೆಂಗಳೂರು: ಬೇಸಿಗೆ ಆರಂಭವಾಗುತ್ತಿದ್ದಂತೆ ನೀರಿನ ಅಭಾವ ಮತ್ತು ವಿದ್ಯುತ್​​ ವ್ಯತ್ಯಯ ಉಂಟಾಗುತ್ತದೆ. ಇದರಿಂದ ರಾಜ್ಯದ ನಾನಾ ಪ್ರದೇಶದ ಜನರು ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಬೇಸಿಗೆ ಮಾರ್ಚ್​​ನಿಂದ ಆರಂಭವಾಗುವುದರಿಂದ ಈ ಸಮಯದಲ್ಲಿ ಪರೀಕ್ಷೆಗಳು ಪ್ರಾರಂಭವಾಗುತ್ತವೆ. ಈ ಕಾಲದಲ್ಲಿ ವಿದ್ಯುತ್​ ಕಡಿತದಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ತೊಂದರೆಯಾಗುತ್ತದೆ. ಆದರೆ ಈ ಬಾರಿ ಇದು ಸಂಭವಿಸುವುದಿಲ್ಲ. ಬೇಸಿಗೆಯಲ್ಲಿ ಲೋಡ್ ಶೆಡ್ಡಿಂಗ್ (Loadshedding) ಮಾಡದಿರಲು ಎಲ್ಲ ಎಸ್ಕಾಂಗಳು ನಿರ್ಧರಿಸಿವೆ. ವಿದ್ಯಾರ್ಥಿಗಳು, ರೈತರ ಹಿತದೃಷ್ಟಿಯಿಂದ ರಾಜ್ಯದಲ್ಲಿ ಮುಂದಿನ 3 ತಿಂಗಳ ಕಾಲ ಲೋಡ್ ಶೆಡ್ಡಿಂಗ್ ಮಾಡದಿರಲು, ಎಲ್ಲ ಎಸ್ಕಾಂಗಳ (Escom) ವ್ಯವಸ್ಥಾಪಕ ನಿರ್ದೇಶಕರ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಬೇಸಿಗೆಯಲ್ಲಿ ಪರೀಕ್ಷೆ ಶುರುವಾಗಿವೆ ಮತ್ತು ರೈತರ ಜಮೀನುಗಳಿಗೆ ಹೆಚ್ಚಿನ ವಿದ್ಯುತ್​ ಅವಶ್ಯವಾದ ಹಿನ್ನೆಲೆ ವಿದ್ಯುತ್ ಬೇಡಿಕೆ ಹೆಚ್ಚಾಗಿದೆ. ಇನ್ನು ಬೆಂಗಳೂರು ವಿದ್ಯುತ್​ ಸರಬರಾಜು ಕಂಪನಿ ನಿಯಮಿತ (ಬೆಸ್ಕಾಂ) 3 ತಿಂಗಳ ವಿದ್ಯುತ್​ ಬಳಕೆಯನ್ನು ಅಂದಾಜಿಸಿದೆ.

ಇದನ್ನೂ ಓದಿ: ವೇತನ ಪರಿಷ್ಕರಣೆಗೆ ಆಗ್ರಹಿಸಿ ಮಾ. 16ರಂದು KPTCL ನೌಕರರ ಸಂಘದಿಂದ ಮುಷ್ಕರಕ್ಕೆ ಕರೆ

ಮಾರ್ಚ್​ನಿಂದ ಮೇ ಅಂತ್ಯದವರೆಗೆ ವಿದ್ಯುತ್ ಬೇಡಿಕೆ ಮತ್ತು ಬಳಕೆ ಅಂದಾಜು

ಈ ತಿಂಗಳು (ಮಾರ್ಚ್​) ನಲ್ಲಿ ದಿನದ ಗರಿಷ್ಠ ಬೇಡಿಕೆ 7600 ಮೆಗಾವ್ಯಾಟ್ ತಲುಪುವ ಸಾಧ್ಯತೆ ಇದ್ದು, ಕಳೆದ 12 ದಿನಗಳಿಂದ ಸರಾಸರಿ ದಿನದ ವಿದ್ಯುತ್ ಬೇಡಿಕೆ 7400 ಮೆಗಾವ್ಯಾಟ್ ಇತ್ತು. ಮಾರ್ಚ್​ನಲ್ಲಿ ದಿನದ ವಿದ್ಯುತ್ ಬೇಡಿಕೆ 132 ಮಿಲಿಯನ್ ಯೂನಿಟ್ ಆಗಿದೆ.

ಎಪ್ರಿಲ್​ನಲ್ಲಿ ವಿದ್ಯುತ್ ಬೇಡಿಕೆ 7650 ಮೆಗಾವ್ಯಾಟ್ ತಲುಪಲಿದ್ದು, ದಿನದ ವಿದ್ಯುತ್ ಬಳಕೆ ಸರಾಸರಿ 135 ಮಿಲಿಯನ್ ಯೂನಿಟ್ ಆಗಲಿದೆ. ಮೇ ತಿಂಗಳಲ್ಲಿ ವಿದ್ಯುತ್ ಬೇಡಿಕೆ 6800 ಮೆಗಾ ವ್ಯಾಟ್​ಗೆ ಇಳಿಯಲಿದ್ದು, ದಿನದ ವಿದ್ಯುತ್ ಬಳಕೆ 124 ಮಿಲಿಯನ್ ಯೂನಿಟ್ ಆಗಲಿದೆ ಎಂದು ಬೆಸ್ಕಾಂ ಮಾಧ್ಯಮ ಪ್ರಕಟಣೆ ಹೊರಡಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:25 pm, Wed, 15 March 23