ವಿಶ್ವೇಶ್ವರ ಹೆಗಡೆ ಕಾಗೇರಿಗೆ ಗ್ರಾಮಸ್ಥರಿಂದ ತರಾಟೆ; ಕಾಮಗಾರಿ ಶಂಕುಸ್ಥಾಪನೆ ಮಾಡದೇ ತೆರಳಿದ ಸ್ಪೀಕರ್​

ಜಿಲ್ಲೆಯ ಸಿದ್ದಾಪುರ ತಾಲೂಕಿನ ಬೇಡ್ಕಣಿ ಗ್ರಾಮದ ರಸ್ತೆ ಕಾಮಗಾರಿ ಶಂಕುಸ್ಥಾಪನೆಗೆ ಬಂದಿದ್ದ ಸ್ಪೀಕರ್​​​ ಕಾಗೇರಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದು, ಕಾಮಗಾರಿ ಶಂಕುಸ್ಥಾಪನೆ ಮಾಡದೇ ವಾಪಾಸ್ ತೆರೆಳಿದ್ದಾರೆ.

Follow us
| Updated By: Digi Tech Desk

Updated on:Mar 15, 2023 | 12:10 PM

ಉತ್ತರ ಕನ್ನಡ: ರಸ್ತೆ ಕಾಮಗಾರಿ ಶಂಕುಸ್ಥಾಪನೆಗೆ ಬಂದಿದ್ದ ಸ್ಪೀಕರ್​​​ ಕಾಗೇರಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡ ಘಟನೆ ಜಿಲ್ಲೆಯ ಸಿದ್ದಾಪುರದ ಬೇಡ್ಕಣಿಯಲ್ಲಿ ನಡೆದಿದೆ. 25 ಲಕ್ಷ ವೆಚ್ಚದ ಸಿಮೆಂಟ್ ರಸ್ತೆಗೆ ಶಂಕುಸ್ಥಾಪನೆಗೆ ಬಂದಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ(Vishweshwar Hegde Kageri), ಕೇವಲ 350 ಮೀಟರ್ ಸಿಮೆಂಟ್ ರಸ್ತೆ ಕಾಮಗಾರಿಯಾಗಿದೆ. ಅದನ್ನ 1000 ಮೀಟರ್ ಮಾಡುವಂತೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ. ಜೊತೆಗೆ ಸಿಮೆಂಟ್ ರಸ್ತೆ ಬದಲಿಗೆ ಟಾರ್ ರಸ್ತೆ ಮಾಡುವಂತೆ ಶಾಸಕರಿಗೆ ತರಾಟೆ ತೆಗೆದುಕೊಂಡಿದ್ದು, ಈ ಹಿಂದೆ ಮಾಡಿರುವ ರಸ್ತೆಯ ಗುಣಮಟ್ಟ ಕೂಡ ಕಳಪೆ ಆಗಿದೆ ಎಂದು ಆರೋಪಿಸಿದ್ದಾರೆ. ಈ ಹಿನ್ನಲೆ ರಸ್ತೆ ಶಂಕುಸ್ಥಾಪನೆ ನೆರವೇರಿಸದೇ ಇಂಜಿನಿಯರ್ ಕಡೆಯಿಂದ ಕಾಮಗಾರಿಯ ಎಸ್ಟಿಮೇಟ್ ಕೇಳಿ ಸ್ಪೀಕರ್ ಕಾಗೇರಿ ಹೋಗಿದ್ದಾರೆ.

ಈ ಹಿಂದೆ ಕೂಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ರಸ್ತೆ ಕಾಮಗಾರಿ ಕುರಿತು ಶಾಸಕ ಸುನೀಲ್​ ನಾಯ್ಕ್​, ಸಾರ್ವಜನಿರ ನಡುವೆ ವಾಗ್ವಾದ

ಹೌದು ಈ ಹಿಂದೆ ಫೆ.14ರಂದು ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲು ಭಟ್ಕಳ ತಾಲೂಕಿನ ಬೈಲೂರು ಗ್ರಾಮಕ್ಕೆ ಆಗಮಿಸಿದ್ದ ಭಟ್ಕಳ-ಹೊನ್ನಾವರ ಬಿಜೆಪಿ ಶಾಸಕ ಸುನೀಲ್ ನಾಯ್ಕ ಅವರಿಗೆ ರಸ್ತೆಯನ್ನ ಪೂರ್ಣ ಮಾಡಿಕೊಡಿ ಎಂದು ಗ್ರಾಮಸ್ಥರು ಕೇಳಿಕೊಂಡಿದ್ದರು. ಈ ವೇಳೆ ಶಾಸಕ ಸುನೀಲ್ ನಾಯ್ಕ ‘ಯಾವಾಗ ರಸ್ತೆ ಮಾಡಬೇಕು ನನಗೆ ಗೊತ್ತಿದೆ, ನಾನು ಮಾಡೋದೇ ಇಷ್ಟು, ನಾನು ಶಾಸಕ ರಸ್ತೆ ಮಾಡಲು ನನಗೆ ಯಾವುದೇ ದೊಣ್ಣೆ ನಾಯಕನ ಅಪ್ಪಣೆ ಬೇಕಿಲ್ಲ. ತಾಕತ್ತಿದ್ದರೆ ನಿಲ್ಲಿಸಿ ಎಂದು ಗ್ರಾಮಸ್ಥರಿಗೆ ಆವಾಜ್ ಹಾಕುವ ಮೂಲಕ ದರ್ಪದ ಮಾತನ್ನಾಡಿದ್ದರು. ಚುನಾವಣೆ ಮುಂದೆ ಇರುವ ಹಿನ್ನಲೆ ಸಂಪೂರ್ಣ ರಸ್ತೆ ಮಾಡಿಕೊಡಿ ಎಂದು ಗ್ರಾಮಸ್ಥರು ಬೇಡಿಕೆಯಿಟ್ಟಿದ್ದರು. ಈಗ 25 ಲಕ್ಷ ಹಣ ಮಂಜೂರಾಗಿದೆ, ಮುಂದಿನ ದಿನಗಳಲ್ಲಿ ಮಾಡುತ್ತೆನೆ ಎಂದ ಶಾಸಕರು, ಈ ಸಂದರ್ಭದಲ್ಲಿ ಗ್ರಾಮಸ್ಥರು ಮಾಡುವುದಾದರೆ ಪೂರ್ತಿ ರಸ್ತೆ ಮಾಡಿ ಎಂದು ಪಟ್ಟು ಹಿಡಿದಿದ್ದರು. ಈ ವೇಳೆ ಗ್ರಾಮಸ್ಥರು ಮತ್ತು ಶಾಸಕರ ನಡುವೆ ಮಾತಿನ ಜಟಾಪಟಿ ನಡೆದಿದ್ದು, ಶಾಸಕನ ವರ್ತನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ:ಉತ್ತರ ಕನ್ನಡ ಜಿಲ್ಲೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಜಾಗ ಮಂಜೂರು ಮಾಡಿದ ಕರ್ನಾಟಕ ಸರ್ಕಾರ

ಒಟ್ಟಿನಲ್ಲಿ ವಿಧಾನಸಭೆ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿಯಿದ್ದು, ಜಿಲ್ಲೆಯಲ್ಲಿನ ರಸ್ತೆಗಳು ಸಂಪೂರ್ಣವಾಗಿ ಹದೆಗಟ್ಟಿದ್ದು, ಹೇಗಾದರೂ ಮಾಡಿ ಚುನಾವಣಾ ಸಂದರ್ಭದಲ್ಲಿಯೇ ರಸ್ತೆ ಮಾಡಿಕೊಳ್ಳೋಣಾ ಎಂದು ಸಾರ್ವಜನಿಕರು ಶಾಸಕರ ವಿರುದ್ದ ತೊಡೆತಟ್ಟಿದ್ದಾರೆ.

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 12:04 pm, Wed, 15 March 23

ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಗುಜರಾತ್ ಪ್ರವಾಹದಲ್ಲಿ ಸಿಲುಕಿದ ಕಾರು ಹತ್ತಿ ಕುಳಿತು ಹರಟೆ ಹೊಡೆದ ದಂಪತಿ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ಕಾಂಗ್ರೆಸ್​-JDS ಮೈತ್ರಿ: ಬಹುಮತ ಇಲ್ಲದಿದ್ರೂ ಅಧ್ಯಕ್ಷ ಸ್ಥಾನ ಕೈ ವಶಕ್ಕೆ
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ದರ್ಶನ್​ ಜಾಮೀನು ಅರ್ಜಿ ಸಲ್ಲಿಸೋದು ಯಾವಾಗ? ಉತ್ತರ ನೀಡಿದ ಲಾಯರ್​
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಗಣಪತಿ ವಿಸರ್ಜನೆ ಬಳಿಕ ಈಜಲು ಹೊಳೆಗೆ ಹಾರಿದ ಯುವಕರು
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ಭಾಗ್ಯಲಕ್ಷ್ಮೀ ಬಾಂಡ್ ಹಣ ಹಾಕುವ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ಸಚಿವೆ
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೆಹಲಿ ಕ್ಲಬ್ ಹೊರಗೆ ಬೌನ್ಸರ್​ಗೆ ಹೆದರಿಸಿ ಗುಂಡು ಹಾರಿಸಿದ ವಿಡಿಯೋ ವೈರಲ್
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ದೀಪಾವಳಿ ಒಳಗೆ ಸಿದ್ದರಾಮಯ್ಯ ಸರ್ಕಾರ ಪತನ: ಸಿಟಿ ರವಿ
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಕೊನೆಯ ಓವರ್​ನಲ್ಲಿ 5 ಸಿಕ್ಸ್ ಸಿಡಿಸಿ ಇಡೀ ಪಂದ್ಯದ ಚಿತ್ರಣ ಬದಲಿಸಿದ ಮಯಾಂಕ್
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಲಕ್ಷ್ಮಿಯ ಪುತ್ರ ಗಣಪನಿಗೆ ಭಾರೀ ಬಂದೋಬಸ್ತ್​: ಸಿಸಿಟಿವಿ ಕಣ್ಗಾವಲು, ವಿಡಿಯೋ
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್
ಕೊಪ್ಪಳ: ಡ್ಯೂಟಿ ವೇಳೆ ಹಾಲು ಕದ್ದ ಹೆಡ್ ಕಾನ್ಸಟೇಬಲ್, ವಿಡಿಯೋ ವೈರಲ್