AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಕ್ಸಿಜನ್ ಕೊರತೆಯಿಂದ ದಿನ 30 ಜೀವಗಳು ಬಲಿಯಾಗುತ್ತಿವೆ, ಆಕ್ಸಿಜನ್ ಕೊರತೆಗೆ ಸರ್ಕಾರದ ವಿರುದ್ಧ ಖಂಡ್ರೆ ಆಕ್ರೋಶ

ಆಕ್ಸಿಜನ್ ಕೊರತೆಯಿಂದ ಪ್ರತಿ ದಿನ 30 ಜೀವಗಳು ಬಲಿಯಾಗುತ್ತಿವೆ ಎಂದು ಭಾಲ್ಕಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಕಳವಳ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ 30KL ಆಕ್ಸಿಜನ್ ಅಗತ್ಯವಿದ್ದು 20KL ಕೊರತೆ ಇದೆ. ನಿಗದಿತ ಪ್ರಮಾಣದ ಆಕ್ಸಿಜನ್ ಪೂರೈಸದಿದ್ದರೆ ಅನಾಹುತ ಆಗಲಿದೆ.

ಆಕ್ಸಿಜನ್ ಕೊರತೆಯಿಂದ ದಿನ 30 ಜೀವಗಳು ಬಲಿಯಾಗುತ್ತಿವೆ, ಆಕ್ಸಿಜನ್ ಕೊರತೆಗೆ ಸರ್ಕಾರದ ವಿರುದ್ಧ ಖಂಡ್ರೆ ಆಕ್ರೋಶ
ಈಶ್ವರ್​ ಖಂಡ್ರೆ
ಆಯೇಷಾ ಬಾನು
|

Updated on: Apr 26, 2021 | 7:53 AM

Share

ಬೀದರ್: ಕೊರೊನಾ ಆರ್ಭಟದ ನಡುವೆ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆಗೆ ಉಂಟಾಗಿದೆ. ಹೀಗಾಗಿ ಆಕ್ಸಿಜನ್ ಕೊರತೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಆಕ್ರೋಶ ಹೊರ ಹಾಕಿದ್ದಾರೆ. ಆಕ್ಸಿಜನ್ ಪೂರೈಕೆಗೆ ಗಮನಹರಿಸಲು ಸಿಎಂ ಬಿ.ಎಸ್. ಯಡಿಯೂರಪ್ಪ, , ಡಾ.ಕೆ.ಸುಧಾಕರ್‌ ಹಾಗೂ ಪಿಎಂ ನರೇಂದ್ರ ಮೋದಿಗೆ ಆಗ್ರಹಿಸಿ ಟ್ವೀಟ್ ಮಾಡಿದ್ದಾರೆ.

ಆಕ್ಸಿಜನ್ ಕೊರತೆಯಿಂದ ಪ್ರತಿ ದಿನ 30 ಜೀವಗಳು ಬಲಿಯಾಗುತ್ತಿವೆ ಎಂದು ಭಾಲ್ಕಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಈಶ್ವರ್ ಖಂಡ್ರೆ ಕಳವಳ ವ್ಯಕ್ತಪಡಿಸಿದ್ದಾರೆ. ಜಿಲ್ಲೆಗೆ 30KL ಆಕ್ಸಿಜನ್ ಅಗತ್ಯವಿದ್ದು 20KL ಕೊರತೆ ಇದೆ. ನಿಗದಿತ ಪ್ರಮಾಣದ ಆಕ್ಸಿಜನ್ ಪೂರೈಸದಿದ್ದರೆ ಅನಾಹುತ ಆಗಲಿದೆ. ಆಕ್ಸಿಜನ್ ಸಿಗದೆ ಜನ ಬಲಿಯಾದರೆ ಮೋದಿ, BSY ಹೊಣೆ ಎಂದು ಟ್ವಿಟ್ಟರ್‌ ಮೂಲಕ ಸರ್ಕಾರಕ್ಕೆ ಈಶ್ವರ್ ಖಂಡ್ರೆ ಎಚ್ಚರಿಕೆ ನೀಡಿದ್ದಾರೆ. ಸೂಕ್ಷ್ಮತೆ ಅರಿತು ಬೀದರ್ ಜಿಲ್ಲೆಗೆ ಆಕ್ಸಿಜನ್ ಪೂರೈಕೆಗೆ ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಆಕ್ಸಿಜನ್ ಕೊರತೆ ಹೆಚ್ಚಿದೆ ಜನ ಆಕ್ಸಿಜನ್ ಇಲ್ಲದೆಯೇ ಹೆಚ್ಚಾಗಿ ಮೃತಪಡುತ್ತಿದ್ದಾರೆ. ಬೆಂಗಳೂರಿನಲ್ಲೂ ಇದರ ಅಭಾವ ಹೆಚ್ಚಿದೆ. ಆದಷ್ಟು ಬೇಗ ಈ ಬಗ್ಗೆ ಸರ್ಕಾರ ಗಮನ ಹರಿಸಬೇಕಿದೆ.

ಇದನ್ನೂ ಓದಿ: ಅಧ್ಯಯನದ ಪ್ರಕಾರ ವಿರಾಮವಿಲ್ಲದೇ ದೀರ್ಘಕಾಲದವರೆಗೆ ಕೆಲಸ ಮಾಡುವುದು ಮೆದುಳಿನ ಒತ್ತಡಕ್ಕೆ ಕಾರಣ