ರೋಷನ್ ಬೇಗ್​ಗೆ ತಪ್ಪಿದ್ದ ಟಿಕೆಟ್ ಶರವಣಗೆ ಕೊಟ್ರು!

sadhu srinath

sadhu srinath |

Updated on: Nov 14, 2019 | 4:38 PM

ಬೆಂಗಳೂರು: ಮೊದಲ ಪಟ್ಟಿಯಲ್ಲಿ ಎರಡು ಕ್ಷೇತ್ರಗಳಿಗೆ ಪೆಂಡಿಂಗ್ ಇಟ್ಟು 13 ಕ್ಷೇತ್ರಗಳಲ್ಲಿ ಅನರ್ಹ ಶಾಸಕರಿಗೇ ಟಿಕೆಟ್​ ಹಂಚಿದ್ದ ಬಿಜೆಪಿ ನಾಯಕರು ಇದೀಗ ಶಿವಾಜಿನಗರ ಕ್ಷೇತ್ರದ ಉಪಚುನಾವಣೆಗೂ ಕ್ಯಾಂಡಿಡೇಟ್​ ಅನ್ನು ಅನೌನ್ಸ್​ ಮಾಡಿದ್ದಾರೆ. ಅಲ್ಲಿಗೆ ಅನರ್ಹ ಶಾಸಕ ರೋಷನ್ ಬೇಗ್​ಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದು, ರಾಣೆಬೆನ್ನೂರು ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿ ಘೋಷಣೆ ಬಾಕಿ ಇದೆ. ಬೆಳಗ್ಗೆಯಷ್ಟೇ ಮರುಸೇರ್ಪಡೆಯಾಗಿದ್ದ ಶರವಣಗೆ ಲಕ್​! ಡಿಸೆಂಬರ್ 5ರಂದು ನಡೆಯುವ ಉಪಚುನಾವಣೆಗೆ ಶಿವಾಜಿನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎಂ. ಶರವಣ ಕಣಕ್ಕೆ ಇಳಿಯಲಿದ್ದಾರೆ. ಬಿಜೆಪಿ ಹೈಕಮಾಂಡ್​ನಿಂದ […]

ರೋಷನ್ ಬೇಗ್​ಗೆ ತಪ್ಪಿದ್ದ ಟಿಕೆಟ್ ಶರವಣಗೆ ಕೊಟ್ರು!

ಬೆಂಗಳೂರು: ಮೊದಲ ಪಟ್ಟಿಯಲ್ಲಿ ಎರಡು ಕ್ಷೇತ್ರಗಳಿಗೆ ಪೆಂಡಿಂಗ್ ಇಟ್ಟು 13 ಕ್ಷೇತ್ರಗಳಲ್ಲಿ ಅನರ್ಹ ಶಾಸಕರಿಗೇ ಟಿಕೆಟ್​ ಹಂಚಿದ್ದ ಬಿಜೆಪಿ ನಾಯಕರು ಇದೀಗ ಶಿವಾಜಿನಗರ ಕ್ಷೇತ್ರದ ಉಪಚುನಾವಣೆಗೂ ಕ್ಯಾಂಡಿಡೇಟ್​ ಅನ್ನು ಅನೌನ್ಸ್​ ಮಾಡಿದ್ದಾರೆ. ಅಲ್ಲಿಗೆ ಅನರ್ಹ ಶಾಸಕ ರೋಷನ್ ಬೇಗ್​ಗೆ ಬಿಜೆಪಿ ಟಿಕೆಟ್ ಕೈತಪ್ಪಿದ್ದು, ರಾಣೆಬೆನ್ನೂರು ಕ್ಷೇತ್ರಕ್ಕೆ ಮಾತ್ರ ಅಭ್ಯರ್ಥಿ ಘೋಷಣೆ ಬಾಕಿ ಇದೆ.

ಬೆಳಗ್ಗೆಯಷ್ಟೇ ಮರುಸೇರ್ಪಡೆಯಾಗಿದ್ದ ಶರವಣಗೆ ಲಕ್​! ಡಿಸೆಂಬರ್ 5ರಂದು ನಡೆಯುವ ಉಪಚುನಾವಣೆಗೆ ಶಿವಾಜಿನಗರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎಂ. ಶರವಣ ಕಣಕ್ಕೆ ಇಳಿಯಲಿದ್ದಾರೆ. ಬಿಜೆಪಿ ಹೈಕಮಾಂಡ್​ನಿಂದ ಎಂ.ಶರವಣ ಹೆಸರು ಘೋಷಣೆಯಾಗಿದೆ.

ಶರವಣ, ಬಿಬಿಎಂಪಿ ಮಾಜಿ ಕಾರ್ಪೊರೇಟರ್. ಇಂದು ಬೆಳಗ್ಗೆ ಬಿಜೆಪಿಗೆ ಮರು ಸೇರ್ಪಡೆಯಾಗಿದ್ದ ಶರವಣಗೆ ಎರಡನೇ ಪಟ್ಟಿಯಲ್ಲಿ ಶಿವಾಜಿನಗರದ ಟಿಕೆಟ್​ ದೊರೆತಿದೆ.

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada