ಕುಮಾರಸ್ವಾಮಿ ಮಾಡಿದಂತೆ ನೀವೂ ಸಾಲ ಮನ್ನಾ ಮಾಡಿ: BSYಗೆ ರೇವಣ್ಣ ಒತ್ತಾಯ

ಹಾಸನ: ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಮಾಡಿದಂತೆ ನೀವೂ ರೈತಾಪಿ ವರ್ಗದ ಸಾಲಮನ್ನಾ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಒತ್ತಾಯ ಮಾಡಿದ್ದಾರೆ. ಸಾಲಾ ಮನ್ನಾ ಮಾಡದಿದ್ದರೆ ದೇವರು ನಿಮ್ಮನ್ನ ಕ್ಷಮಿಸಲ್ಲ: ಕೂಲಿ ಕಾರ್ಮಿಕರು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲಾ ಮನ್ನಾ ಮಾಡಿ ನೆರವಾಗದಿದ್ದರೆ ದೇವರು ನಿಮ್ಮನ್ನ ಕ್ಷಮಿಸಲ್ಲ. ರಾಷ್ಟ್ರೀಕೃತ ಬ್ಯಾಂಕ್​ನಲ್ಲಿರುವ‌ ರೈತರ ಸಾಲ ಮನ್ನಾ ಮಾಡಿ. ರಾಜ್ಯ ಸರ್ಕಾರ 2ನೆ ಪ್ಯಾಕೇಜ್​ನಲ್ಲಿ ಸಾಲಾ ಮನ್ನಾ ಮಾಡಿ ಎಂದು ಹಾಸನದಲ್ಲಿ […]

ಕುಮಾರಸ್ವಾಮಿ  ಮಾಡಿದಂತೆ  ನೀವೂ ಸಾಲ ಮನ್ನಾ ಮಾಡಿ: BSYಗೆ ರೇವಣ್ಣ ಒತ್ತಾಯ
ಸಾಧು ಶ್ರೀನಾಥ್​

Updated on: May 14, 2020 | 2:04 PM

ಹಾಸನ: ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಮಾಡಿದಂತೆ ನೀವೂ ರೈತಾಪಿ ವರ್ಗದ ಸಾಲಮನ್ನಾ ಮಾಡಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಒತ್ತಾಯ ಮಾಡಿದ್ದಾರೆ.

ಸಾಲಾ ಮನ್ನಾ ಮಾಡದಿದ್ದರೆ ದೇವರು ನಿಮ್ಮನ್ನ ಕ್ಷಮಿಸಲ್ಲ:

ಕೂಲಿ ಕಾರ್ಮಿಕರು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲಾ ಮನ್ನಾ ಮಾಡಿ ನೆರವಾಗದಿದ್ದರೆ ದೇವರು ನಿಮ್ಮನ್ನ ಕ್ಷಮಿಸಲ್ಲ. ರಾಷ್ಟ್ರೀಕೃತ ಬ್ಯಾಂಕ್​ನಲ್ಲಿರುವ‌ ರೈತರ ಸಾಲ ಮನ್ನಾ ಮಾಡಿ. ರಾಜ್ಯ ಸರ್ಕಾರ 2ನೆ ಪ್ಯಾಕೇಜ್​ನಲ್ಲಿ ಸಾಲಾ ಮನ್ನಾ ಮಾಡಿ ಎಂದು ಹಾಸನದಲ್ಲಿ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.

ಯಡಿಯೂರಪ್ಪನವರೇ ಕೊರೊನಾ ಸೋಂಕನ್ನು ಹಾಸನಕ್ಕೆ ಕಳಿಸಿರಬೇಕು!

ಹಾಸನದಲ್ಲಿ ಕೊರೊನಾ ಪಾಸಿಟೀವ್ ಪ್ರಕರಣದ ಬಗ್ಗೆ ಮಾತನಾಡಿದ ಹೆಚ್​.ಡಿ.ರೇವಣ್ಣ,ಬಹುಶಃ ಶಿವಮೊಗ್ಗದಲ್ಲಿ ಪಾಸಿಟೀವ್ ಬಂತು ಎಂದು ಯಡಿಯೂರಪ್ಪನೇ ಹಾಸನಕ್ಕೆ ಕಳಿಸಿರಬೇಕು. ಇಷ್ಟು ದಿನ ಹಾಸನ ಗ್ರೀನ್ ಜೋನ್ ಆಗಿತ್ತು. ಆದ್ರೆ ಈಗ ಜಿಲ್ಲೆಗೆ ಕೊರೊನಾ ವೈರಸ್ ಎಂಟ್ರಿಯಾಗಿದೆ. ಇದರ ಹಿಂದೆ ಯಾರಿದ್ದಾರೋ ಏನೋ ನನಗೆ ಗೊತ್ತಿಲ್ಲ. ಹೊರ ರಾಜ್ಯದಲ್ಲಿರುವ ನಮ್ಮ ಜನ ಇಲ್ಲಿಗೆ ವಾಪಸಾಗಲಿ. ಆದ್ರೆ ಬರೋರ ಅರೋಗ್ಯದ ದೃಢೀಕರಣದ ಬಳಿಕವೇ ಒಳಬರಲಿ ಎಂದು ಹಾಸನದಲ್ಲಿ ಮಾಜಿ ಸಚಿವ ರೇವಣ್ಣ ನೀಡಿದರು.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us