ಕರ್ನಾಟಕ ಬಂದ್: ಕೇಂದ್ರದ ಮಸೂದೆ ವಿರುದ್ಧ ನಾಳೆ ರೈತ ಸಂಘಟನೆಗಳ ಕಹಳೆ!

ಬೆಂಗಳೂರು: ರಾಜ್ಯದಲ್ಲಿ ರೈತರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ತುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶದ ಕಟ್ಟೆ ಒಡೆದಿದ್ದು, ಸೋಮವಾರ ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ಬೃಹತ್ ಪ್ರತಿಭಟನೆಗೆ ರೈತ ಮುಖಂಡರು ಮುಂದಾಗಿದ್ದಾರೆ. ರೈತ ಸಂಘಟನೆಗಳಲ್ಲಿನ ಗೊಂದಲಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಹೆಸರಿನಲ್ಲಿ ನಡೆದ ಸುದ್ದಿಗೋಷ್ಠಿ ಎಲ್ಲಾ ಗೊಂದಲಕ್ಕೆ ಫುಲ್ ಸ್ಟಾಪ್ ಇಟ್ಟಿದೆ. ರೈತ ಸಂಘಟನೆಗಳು ಸೋಮವಾರ ಕರ್ನಾಟಕ ಬಂದ್​ಗೆ ಕರೆಕೊಟ್ಟಿವೆ. ಕೇಂದ್ರದ ಮಸೂದೆ […]

ಕರ್ನಾಟಕ ಬಂದ್: ಕೇಂದ್ರದ ಮಸೂದೆ ವಿರುದ್ಧ ನಾಳೆ ರೈತ ಸಂಘಟನೆಗಳ ಕಹಳೆ!
ಪ್ರಾತಿನಿಧಿಕ ಚಿತ್ರ
Ayesha Banu

|

Sep 27, 2020 | 6:59 AM

ಬೆಂಗಳೂರು: ರಾಜ್ಯದಲ್ಲಿ ರೈತರ ಹೋರಾಟ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ತುತ್ತಿದೆ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶದ ಕಟ್ಟೆ ಒಡೆದಿದ್ದು, ಸೋಮವಾರ ಕರ್ನಾಟಕ ಬಂದ್​ಗೆ ಕರೆ ನೀಡಲಾಗಿದೆ. ಬೃಹತ್ ಪ್ರತಿಭಟನೆಗೆ ರೈತ ಮುಖಂಡರು ಮುಂದಾಗಿದ್ದಾರೆ.

ರೈತ ಸಂಘಟನೆಗಳಲ್ಲಿನ ಗೊಂದಲಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಹೆಸರಿನಲ್ಲಿ ನಡೆದ ಸುದ್ದಿಗೋಷ್ಠಿ ಎಲ್ಲಾ ಗೊಂದಲಕ್ಕೆ ಫುಲ್ ಸ್ಟಾಪ್ ಇಟ್ಟಿದೆ. ರೈತ ಸಂಘಟನೆಗಳು ಸೋಮವಾರ ಕರ್ನಾಟಕ ಬಂದ್​ಗೆ ಕರೆಕೊಟ್ಟಿವೆ.

ಕೇಂದ್ರದ ಮಸೂದೆ ವಿರುದ್ಧ ಸಿಡಿದೆದ್ದ ರೈತರು ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ಸೇರಿದಂತೆ ಕೃಷಿ ಮಸೂದೆ ವಿರೋಧಿಸಿ 9ರೈತ ಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಿವೆ.

ಯಾವ್ಯಾವ ಸಂಘಟನೆಗಳಿಂದ ಬಂದ್‌ಗೆ ಕರೆ? ರಾಜ್ಯದ 2 ರೈತ ಸಂಘಗಳಾದ ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ರೈತ ಕೃಷಿ ಕಾರ್ಮಿಕರ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಆಶಾ ಜನಶಕ್ತಿ ಸಂಘ ಸೇರಿದಂತೆ 9 ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿವೆ.

ನಾಳೆ ಬೆಳಗ್ಗೆ 6ಗಂಟೆಯಿಂದ ಸಂಜೆ 6ರವರೆಗೂ ಬಂದ್ ಕೇಂದ್ರ ಸರ್ಕಾರ ಕೃಷಿ ವಲಯವನ್ನ ಹಾಳು ಮಾಡುವ ಕಾಯ್ದೆ ತಂದಿದೆ. ರೈತರ ಪಾಲಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸತ್ತು ಹೋಗಿವೆ. ಹಾಗಾಗಿ ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6ಗಂಟೆವರೆಗೂ ಕರ್ನಾಟಕ ಸಂಪೂರ್ಣ ಬಂದ್ ಆಗಲಿದೆ ಅಂತಾ ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

‘ಸೋಮವಾರ ಬಂದ್ ಮಾಡೇ ಮಾಡ್ತೀವಿ’ ಇನ್ನು ನಾಳಿನ ಬಂದ್ ಕುರಿತಂತೆ ಟಿವಿ9ನೊಂದಿಗೆ ಮಾತನಾಡಿದ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಸೋಮವಾರ ಬಂದ್ ಮಾಡೇ ಮಾಡ್ತೀವಿ. ಸೋಮವಾರ ಬಂದ್ ಸಕ್ಸಸ್ ಆಗುತ್ತೆ ಅನ್ನೋ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾಳೆ ನಡೆಯುವ ಬಂದ್‌ಗೆ ಯಾವ ಯಾವ ಸಂಘಟನೆಗಳು ಬೆಂಬಲ ನೀಡಿವೆ ಅನ್ನೋದನ್ನ ನೋಡೋದ್ದಾರೆ.

ಯಾವ್ಯಾವ ಸಂಘಟನೆಗಳ ಬೆಂಬಲ ? ಕನ್ನಡಪರ ‌ಸಂಘಟನೆಗಳು ಕರ್ನಾಟಕ ಬಂದ್‌ಗೆ ಸಂಪೂರ್ಣ ಬೆಂಬಲ ನೀಡಿವೆ. ರೈತ ಸಂಘ, ಹಸಿರು ಸೇನೆ, ದಲಿತ ಸಂಘಟನೆಗಳು, ಓಲಾ-ಉಬರ್ ಚಾಲಕರ ಸಂಘಗಳು ರೈತರ ಪ್ರತಿಭಟನೆಗೆ ಬೆಂಬಲ ನೀಡಿವೆ. ಇದರ ಜೊತೆಗೆ ಸಿಐಟಿಯು ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಿದೆ. ರೈತರ ಹೋರಾಟಕ್ಕೆ ಬೀದಿ ಬದಿ ವ್ಯಾಪಾರಿಗಳು ಸಂಪೂರ್ಣ ಬೆಂಬಲ ನೀಡಿದ್ದಾರೆ.

ಇನ್ನು ಪೆಟ್ರೋಲ್- ಡಿಸೇಲ್ ಅಸೋಸಿಯೇಷನ್, ಹೋಟೆಲ್ ಮಾಲೀಕರ ಸಂಘದಿಂದ, ಬಾರ್ ಮಾಲೀಕರ ಅಸೋಸಿಯೇಷನ್‌, ಖಾಸಗಿ ಬಸ್‌ಗಳ ಒಕ್ಕೂಟದಿಂದ, ಕೆಎಸ್ಆರ್‌ಟಿಸಿ, ಬಿಎಂಟಿಸಿ ನೌಕರರ ಸಂಘ, ಮಾಲ್ ಅಸೋಸಿಯೇಷನ್‌ನ್ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘಟನೆಗಳು ನೈತಿಕ ಬೆಂಬಲ ಸೂಚಿಸಿವೆ.

ಒಟ್ಟಿನಲ್ಲಿ ಅನ್ನದಾತರ ಕಿಚ್ಚು ಸದ್ಯಕ್ಕೆ ತಣ್ಣಗಾಗುವ ಲಕ್ಷಣಗಳು ಕಾಣ್ತಿಲ್ಲ. ಕಳೆದ 6 ದಿನಗಳಿಂದ ಹೋರಾಟ ಮಾಡುತ್ತಿರುವ ರೈತರ ಪ್ರತಿಭಟನೆಗೆ ಸರ್ಕಾರ ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ನಾಳೆ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ. ಸರ್ಕಾರಕ್ಕೆ ರೈತರ ಬಿಸಿ ಎಷ್ಟರ ಮಟ್ಟಿಗೆ ತಟ್ಟುತ್ತೆ ಅನ್ನೋದನ್ನ ಕಾದುನೋಡಬೇಕಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada