ರಸ್ತೆ ಕಾಮಗಾರಿಗೆ ವಿರೋಧ; ಜೆಸಿಬಿ ಎದುರು ಮಲಗಿ ರೈತರ ಪ್ರತಿಭಟನೆ
ಕಾಮಗಾರಿ ಆರಂಭಿಸಲು ಬಂದಿದ್ದ ಜೆಸಿಬಿ ಎದುರು ರೈತರು ಮಲಗಿ, ಕಾಮಗಾರಿಗೆ ಹೈಕೋರ್ಟ್ ತಡೆ ನೀಡಿದ್ದರೂ ಏಕೆ ಬಂದಿದ್ದೀರಿ ಎಂದು ಅಧಿಕಾರಿಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದರು.
ಬೆಳಗಾವಿ: ತಾಲೂಕಿನ ಮಚ್ಛೆ – ಹಲಗಾ ಬೈಪಾಸ್ ರಸ್ತೆ ಕಾಮಗಾರಿಗೆ ವಿರೋಧ ವ್ಯಕ್ತಪಡಿಸಿದ ರೈತರು ಜೆಸಿಬಿ ಎದುರು ಮಲಗಿ ಪ್ರತಿಭಟನೆ ನಡೆಸಿ, ಕಾಮಗಾರಿಗೆ ಹೈಕೋರ್ಟ್ ತಡೆ ನೀಡಿದ್ದರೂ ಏಕೆ ಬಂದಿದ್ದೀರಿ? ಎಂದು ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡರು.
ಮಚ್ಛೆ – ಹಲಗಾ ಬೈಪಾಸ್ ರಸ್ತೆ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಆಗಮಿಸಿದ್ದರು. ಈ ವೇಳೆ ಕಾಮಗಾರಿ ಆರಂಭಿಸಲು ಬಂದಿದ್ದ ಜೆಸಿಬಿ ಎದುರು ರೈತರು ಮಲಗಿ, ಕಾಮಗಾರಿಗೆ ಹೈಕೋರ್ಟ್ ತಡೆ ನೀಡಿದ್ದರೂ ಏಕೆ ಬಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಎಸಿ ಅನುಮತಿ ಪಡೆದು ಕಾಮಗಾರಿ ಆರಂಭಿಸಲು ಬಂದಿದ್ದೇವೆಂದು ಹೇಳಿದ ಅಧಿಕಾರಿಗಳಿಗೆ ಕೋರ್ಟ್ ಆದೇಶ ತೋರಿಸುವಂತೆ ರೈತ ಮುಖಂಡರ ಪಟ್ಟು ಹಿಡಿದು, ಕಾಮಗಾರಿ ಆರಂಭಿಸುವುದಾದರೆ ನಮ್ಮ ಮೇಲೆ ಜೆಸಿಬಿ ಹರಿಸಿ ಆನಂತರ ಆರಂಭಿಸಿ ನೋಡೋಣ ಅಂತಾ ಎಚ್ಚರಿಕೆ ಕೊಟ್ಟರು.
ಜೀವ ಹೋದರೂ ಕಾಮಗಾರಿ ಆರಂಭಿಸಲು ಬಿಡಲ್ಲ ಎಂದು ಪಟ್ಟು ಬಿದ್ದ ರೈತರಿಗೆ ಮನವೊಲಿಸಲು ಗ್ರಾಮೀಣ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರು.
ಶೃಂಗೇರಿ: ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ; ಮತ್ತೆ ಐವರು ಆರೋಪಿಗಳ ಬಂಧನ