Snake Mongoose fight ಹುಬ್ಬಳ್ಳಿ: ಹಾವು ಮುಂಗುಸಿ ನಡುವೆ ಕಾದಾಟ.. ಹಾವಿನ ಸಾವಿನೊಂದಿಗೆ ಹೋರಾಟ ಅಂತ್ಯ

snake mongoose fight ಹಾವು ಮುಂಗುಸಿ ಒಂದನ್ನು ಕಂಡರೆ ಇನ್ನೋಂದಕ್ಕೆ ಆಗುವುದಿಲ್ಲ ಎನ್ನುವುದು ಇಂದಿನ ಮಾತಲ್ಲ ತಲತಲಾಂತರದಿಂದಲೂ ಕೂಡ ಇದು ಜಾರಿಯಲ್ಲಿದೆ. ಇದೇ ರೀತಿಯ ಕಾದಾಟ ಮತ್ತೆ ನಡೆದಿದ್ದು, ಹುಬ್ಬಳ್ಳಿಯಲ್ಲಿ ಹಾವು ಮತ್ತು ಮುಂಗುಸಿ ಎರಡು ರೋಷಾವೇಷದಿಂದ ಸೆಣಸಾಡಿವೆ.

Snake Mongoose fight ಹುಬ್ಬಳ್ಳಿ: ಹಾವು ಮುಂಗುಸಿ ನಡುವೆ ಕಾದಾಟ.. ಹಾವಿನ ಸಾವಿನೊಂದಿಗೆ ಹೋರಾಟ ಅಂತ್ಯ
ಹಾವು ಮುಂಗುಸಿ ಕದಾಟ
Updated By: ಸಾಧು ಶ್ರೀನಾಥ್​

Updated on: Feb 08, 2021 | 12:46 PM

ಧಾರವಾಡ: ಹಾವು ಮುಂಗುಸಿ ನಡುವೆ ಸುಮಾರು ಅರ್ಧ ಗಂಟೆ ಕಾಲ ಕಾದಾಟ ನಡೆದ ಘಟನೆ ಹುಬ್ಬಳ್ಳಿ ತಾಲೂಕಿನ ರಾಯನಾಳ ಗ್ರಾಮದಲ್ಲಿ ನಡೆದಿದೆ. ಬಸವರಾಜ ಬಡಿಗೇರ ಎಂಬುವರ ಮನೆಯ ಹಿತ್ತಲಲ್ಲಿ ನಡೆದ ಹಾವು ಮುಂಗಸಿಯ ಈ ಕಿತ್ತಾಟಕ್ಕೆ ಸಾಕ್ಷಿಯಾದ ಜನ ಮೂಕವಿಸ್ಮಿತರಾಗಿದ್ದಾರೆ!

ಹಾವು – ಮುಂಗುಸಿ ಒಂದನ್ನು ಕಂಡರೆ ಇನ್ನೊಂದಕ್ಕೆ ಆಗುವುದೇ ಇಲ್ಲ ಎನ್ನುವುದು ಇಂದಿನ ಮಾತಲ್ಲ; ತಲೆತಲಾಂತರದಿಂದಲೂ ಇದು ಜಾರಿಯಲ್ಲಿದೆ. ಇದೇ ರೀತಿಯ ಕಾದಾಟ ಮತ್ತೆ ನಡೆದಿದ್ದು, ಹುಬ್ಬಳ್ಳಿಯಲ್ಲಿ ಹಾವು ಮತ್ತು ಮುಂಗುಸಿ ಎರಡು ರೋಷಾವೇಷದಿಂದ ಸೆಣಸಾಡಿವೆ. ಸದ್ಯ ಸ್ಥಳೀಯರ ಮೊಬೈಲ್ ಕ್ಯಾಮೆರಾದಲ್ಲಿ ಈ ಅಪರೂಪದ ದೃಶ್ಯ ಸೆರೆಯಾಗಿದ್ದು, ಈ ಕಾದಾಟದ ಕೊನೆಗೆ ಮುಂಗುಸಿಯೊಂದಿಗೆ ಹೋರಾಡಿದ ಹಾವು ಸಾವನ್ನಪ್ಪಿದೆ.

ಹಾವು ಮತ್ತು ಮುಂಗುಸಿ ಜಗಳ

ರಕ್ಷಕನನ್ನೇ ಭಕ್ಷಿಸಿದ ಹಾವು: 1 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಉರಗ ತಜ್ಞ ಸ್ನೇಕ್ ಡ್ಯಾನಿ ಸಾವು