Legislative Council chairman election ಪರಿಷತ್ ಸಭಾಪತಿ ಸ್ಥಾನಕ್ಕೆ ನಾಳೆ ಚುನಾವಣೆ: JDS ಬಸವರಾಜ್ ಹೊರಟ್ಟಿ, Congress ನಸೀರ್ ಅಹ್ಮದ್ ನಾಮಪತ್ರ ಸಲ್ಲಿಕೆ

karnataka Legislative Council chairman election ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ನಾಳೆ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಬಸವರಾಜ್ ಹೊರಟ್ಟಿ ಹಾಗೂ ಕಾಂಗ್ರೆಸ್​ನಿಂದ ನಸೀರ್ ಅಹ್ಮದ್ ನಾಮಪತ್ರ ಸಲ್ಲಿಸಿದ್ದಾರೆ.

Legislative Council chairman election ಪರಿಷತ್ ಸಭಾಪತಿ ಸ್ಥಾನಕ್ಕೆ ನಾಳೆ ಚುನಾವಣೆ: JDS ಬಸವರಾಜ್ ಹೊರಟ್ಟಿ, Congress ನಸೀರ್ ಅಹ್ಮದ್ ನಾಮಪತ್ರ ಸಲ್ಲಿಕೆ
ಕಾಂಗ್ರೆಸ್ MLC ನಸೀರ್ ಅಹ್ಮದ್ ಮತ್ತು ಜೆಡಿಎಸ್ MLC ಬಸರವಾಜ ಹೊರಟ್ಟಿ
shruti hegde

|

Feb 08, 2021 | 6:07 PM

ಬೆಂಗಳೂರು: ನಾಳೆ ವಿಧಾನ ಪರಿಷತ್​ ಸಭಾಪತಿ ಸ್ಥಾನದ ಚುನಾವಣೆ ಹಿನ್ನೆಯಲ್ಲಿ ಬಿಜೆಪಿ ಬೆಂಬಲದೊಂದಿಗೆ MLC ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಯಾಗಿ MLC ನಸೀರ್ ಅಹ್ಮದ್ ನಾಮಪತ್ರ ಸಲ್ಲಿಸಿ ಮಾತನಾಡಿದ್ದಾರೆ. ಇಂದು ಸಂಜೆ 6ಗಂಟೆಗೆ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ಸಭೆ ಕರೆದಿದ್ದು, ಬಸವರಾಜ ಹೊರಟ್ಟಿಗೆ ಬೆಂಬಲ ಕೊಡುವ ವಿಚಾರವಾಗಿ ಚರ್ಚೆ ನಡೆಯಲಿದೆ.

ನಾಮಪತ್ರ ಸಲ್ಲಿಕೆ ಬಳಿಕ ಬಸವರಾಜ ಹೊರಟ್ಟಿ ಮಾತನಾಡಿ, ಬಿಜೆಪಿ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿದ್ದೇನೆ. ಕಾಂಗ್ರೆಸ್​ನವರದ್ದು ಅವರ ನಿರ್ಧಾರ, ಅವರು ಕ್ಯಾಂಡಿಡೇಟ್ ಹಾಕುತ್ತಿರುವುದಕ್ಕೆ ನಾವು ಅಡ್ಡಿ ಮಾಡಲು ಆಗಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಯಾಗಿ ನಸೀರ್ ಅಹ್ಮದ್ ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿ, ಪಕ್ಷದ ವರಿಷ್ಠರ ತೀರ್ಮಾನದಂತೆ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. JDS ಮೊದಲಿನಿಂದ ಜಾತ್ಯತೀತ ಪಕ್ಷ ಎನ್ನುತ್ತಿದೆ. JDS ಜಾತ್ಯತೀತ ಪರವಾ, ಕೋಮುವಾದಿ ಪರನಾ ಎಂಬುದನ್ನು ಈಗ ತೀರ್ಮಾನ ಮಾಡಬೇಕು. ಮೂರೂ ಪಕ್ಷಗಳಿಗೆ ಪೂರ್ಣ ಬಹುಮತ ಇಲ್ಲ. ಹೀಗಾಗಿ ನಾವು ಕೊನೇ ಕ್ಷಣದವರೆಗೆ ಕಾಯುತ್ತೇವೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ವಿಧಾನ ಪರಿಷತ್​ ಸಭಾಪತಿ ಸ್ಥಾನಕ್ಕೆ ಮಂಗಳವಾರ ಚುನಾವಣೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada