
ಆ ಕಡೆ ಕೋಲ್ಕತ್ತಾದಿಂದ ಮುಂಬೈ ಈ ಕಡೆ ನವದೆಹಲಿಯಿಂದ ಬೆಂಗಳೂರಿನವರೆಗೆ ಇತ್ತೀಚೆಗೆ ಇಡೀ ಭಾರತ ಕಡು ಸುಡು ಬಿಸಿಲನ್ನು ಕಂಡಿದೆ. ಸೂರ್ಯನ ಕೋಪತಾಪಕ್ಕೆ ನಲುಗಿದೆ. ಬಿಸಿಲಿನ ಪ್ರತಾಪ ಕಂಡು ಪ್ರತಿಯೊಬ್ಬರೂ ಐಸ್ ಸ್ನಾನದ ಕನಸು ಕಾಣುವಂತೆ ಮಾಡಿದೆ! ಮುಂಗಾರು ದಕ್ಷಿಣ ಭಾರತಕ್ಕೆ ತುಸು ಬೇಗನೇ ಕಾಲಿಡುವುದರಿಂದ ದಕ್ಷಿಣ ಸದ್ಯಕ್ಕೆ ಕೂಲ್ ಕೂಲ್ ಆಗಿದೆ. ಅದೇ 50 ಡಿಗ್ರಿ ಗಡಿಯತ್ತ ಸಾಗಿರುವ ಉತ್ತರ ಭಾರತ ಬಿಸಿಲಿನಲ್ಲಿ ಇನ್ನೂ ಬೆವರಿಳಿಸುತ್ತಿದೆ. ಆದರೆ ಈ ಬಿಸಿಲ ಬೇಗೆಯನ್ನು ಬದಿಗಿಟ್ಟು ದೈಹಿಕ ಫಿಟ್ನೆಸ್ ಮತ್ತು ಚೇತರಿಕೆ ಬಗ್ಗೆ ಮಾತನಾಡುವುದಾದರೆ ದೊಡ್ಡ ದೊಡ್ಡ ಕ್ರೀಡಾಪಟುಗಳು, ಸಿನಿ ತಾರೆಯರು ತಮ್ಮ ದೈಹಿಕ ತರಬೇತಿಯಲ್ಲಿ ಐಸ್ ಸ್ನಾನವನ್ನು ಅಂದರೆ ಮಂಜುಗಡ್ಡೆ ಸ್ನಾನವನ್ನು ಕಟ್ಟುನಿಟ್ಟಾಗಿ ಪಾಲಿಸುವಂತಾಗಿದೆ. ಈ ಅನಿಯಂತ್ರಿತ ಬಿಸಿಲ ಬೇಗೆಯಿಂದ ಪರಿಹಾರ ಪಡೆಯಲು ಮತ್ತು ತ್ವಚೆಯ ಚೇತರಿಕೆಗೆ ಈ ಐಸ್ ಬಾತ್ (Ice Bath) ಹೇಳಿಮಾಡಿಸಿದಂತಿದೆ. ಅಷ್ಟಕ್ಕೂ ಏನಪ್ಪಾ Ice Bath ಅಂದರೆ ಕೊರೆಯುವ 14 ಡಿಗ್ರಿ ಸೆಲ್ಸಿಯಸ್ (14 degrees celsius) ತಾಪಮಾನಕ್ಕಿಂತ ಕಡಿಮೆ ಇರುವ ಮಂಜುಗಡ್ಡೆ ತಣ್ಣೀರಿನಿಂದ ತುಂಬಿದ ಟಬ್ನಲ್ಲಿ ಕೆಲ ಕಾಲ ಮುಳುಗಲು ನೀವು ಸಿದ್ಧರಿದ್ದರೆ, ಅನೇಕ ಕಾರಣಗಳಿಗಾಗಿ ನೀವು ಖಂಡಿತಾ ಸಂತೋಷದ ವ್ಯಕ್ತಿಯಾಗುತ್ತೀರಿ. ಅಷ್ಟರಮಟ್ಟಿಗೆ Ice Bath ನಿಮ್ಮ ಮೇಲೆ ಪರಿಣಾಮ, ಪ್ರಭಾವ ಬೀರುತ್ತದೆ. ...
Published On - 5:50 pm, Sat, 1 June 24