ಬೆಂಗಳೂರು, (ಮೇ 20): ಲೋಕಸಭಾ ಚುನಾವಣೆ ಫಲಿತಾಂಶದ (Loksabha Result 2024 )ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳು(five guarantee schemes) ಸ್ಥಗಿತವಾಗಲಿವೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ವಿಪಕ್ಷ ನಾಯಕರು ಸಹ ಭವಿಷ್ಯ ನುಡಿಯುತ್ತಿದ್ದಾರೆ. ಇದರ ಬೆನ್ನಲ್ಲೇ ಹಳ್ಳಿಗಳಲ್ಲಿ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗುವ ಬಗ್ಗೆ ಚರ್ಚೆಗಳು ನಡೆದಿವೆ. ಇದರ ಬೆನ್ನಲ್ಲೇ ಇದೀಗ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ(siddaramaiah) ಅವರು ಸ್ಪಷ್ಟನೆ ನೀಡಿದ್ದು, ಯಾವುದೆ ಕಾರಣಕ್ಕೂ ಗ್ಯಾರಂಟಿಗಳು ಸ್ಥಗಿತವಾಗುವುದಿಲ್ಲ. ಯಥಾಸ್ಥಿತಿಯಲ್ಲಿ ಐದು ಗ್ಯಾರಂಟಿಗಳು ಮುಂದುವರೆಯಲಿದೆ ಎಂದು ಸ್ಪಷ್ಟಪಡಿಸಿದರು. ಅಲ್ಲದೇ ಅದಕ್ಕಾಗಿ 5200 ಕೋಟಿ ರೂ. ಹಣ ಮೀಸಲಿಡುವುದಾಗಿಯೂ ಸಹ ಹೇಳಿದ್ದಾರೆ.
ವರ್ಷದ ಸಂಭ್ರಮಾಚರಣೆಯಲ್ಲಿರೋ ಸಿಎಂ ಸಿದ್ದರಾಮಯ್ಯ ಇಂದು(ಮೇ 20) ಬೆಂಗಳೂರು ಪ್ರೆಸ್ ಕ್ಲಬ್ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಸರ್ಕಾರದ ಸಾಧನೆಗಳ ಬಗ್ಗೆ ಸಂತಸ ಹಂಚಿಕೊಂಡ್ರು. ಕೊಟ್ಟ ಮಾತಿನಂತೆ ಐದು ಗ್ಯಾರಂಟಿ ಅನುಷ್ಠಾನಕ್ಕೆ ತಂದಿದ್ದೇವೆ. ಈ ವರ್ಷ ಗ್ಯಾರಂಟಿಗಾಗಿ 36 ಸಾವಿರ ಕೋಟಿ ಖರ್ಚು ಮಾಡಿದ್ದು, ಗ್ಯಾರಂಟಿಗಳಿಗೆ ಇದಕ್ಕಿಂತ ಹೆಚ್ಚು ಹಣ ಕೊಡುತ್ತೇವೆ ಎಂದು ಹೇಳಿದರು.
ಇದನ್ನೂ ಓದಿ: ಮಧ್ಯವರ್ತಿಗಳಿಲ್ಲದೆ ಫಲಾನುಭವಿಗಳಿಗೆ ತಲುಪಿದ 5 ಗ್ಯಾರೆಂಟಿ: 1 ವರ್ಷದ ಸಾಧನೆ ಬಿಚ್ಚಿಟ್ಟ ಸಿದ್ದರಾಮಯ್ಯ
ಮುಂದಿನ ವರ್ಷಕ್ಕೆ ಅಂದರೆ 2024-25ಕ್ಕೆ ಗ್ಯಾರಂಟಿ ಯೋಜನೆಗಳಿಗಾಗಿ ಬರೋಬ್ಬರಿ 52 ಸಾವಿರ ಕೋಟಿ ರೂ. ಮೀಸಲಿಡಲಿದ್ದೇವೆ, ಇದರ ಗಾತ್ರ ಮುಂದಿನ ವರ್ಷಕ್ಕೆ ಇನ್ನೂ ಜಾಸ್ತಿ ಆಗಬಹದು. ಅಂದಾಜು ಮಾಡಿಕೊಂಡು ಬಜೆಟ್ ನಲ್ಲಿ ಹಣ ಇಡುತ್ತೇವೆ. ಲೋಕಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಗ್ಯಾರಂಟಿಗಳು ಸ್ಥಗಿತವಾಗುತ್ತವೇ ಎಂಬುದು ಬಿಜೆಪಿಯ ಅಪ್ಪಟ ಸುಳ್ಳು ಎಂದರು.
ಕಾಂಗ್ರೆಸ್ ಸರ್ಕಾರ ಮಹತ್ವಕಾಂಕ್ಷೆಯ ಐದು ಗ್ಯಾರಂಟಿ ಯೋಜನೆಗೆ ಈವರೆಗೆ 44,816 ಕೋಟಿ ರೂ. ವೆಚ್ಚವಾಗಿದೆ. ಯಾವ ಯೋಜನೆಗೆ ಎಷ್ಟು ವೆಚ್ಚವಾಗಿದೆ ಎನ್ನುವುದನ್ನು ನೋಡುವುದಾದರೆ, ಗೃಹಲಕ್ಷ್ಮಿ(ಪ್ರತಿ ಮನೆ ಯಜಮಾನಿಗೆ 2000 ರೂ) 23,098 ಕೋಟಿ ರೂ. ವೆಚ್ಚ , ಗೃಹಜ್ಯೋತಿ (ಪ್ರತಿ ಮನೆಗೆ 200 ಯುನಿಟ್ ವಿದ್ಯುತ್ ಫ್ರೀ) 10,207 ಕೋಟಿ ರೂ., ಶಕ್ತಿ ಯೋಜನೆ(ಮಹಿಳೆಯರಿಗೆ ಉಚಿವ ಬಸ್ ಪ್ರಯಾಣ) 4,054 ಕೋಟಿ ರೂ. ವೆಚ್ಚ (211.5 ಕೋಟಿ ಟ್ರಿಪ್ ಗಳಲ್ಲಿ ಮಹಿಳೆಯರು ಸರ್ಕಾರಿಬಸ್ ನಲ್ಲಿ ಸಂಚರಿಸಿದ್ದಾರೆ), ಯುವನಿಧಿ 93 ಕೋಟಿ ರೂಪಾಯಿ ವೆಚ್ಚ, ಅನ್ನಭಾಗ್ಯ 7,364 ಕೋಟಿ ರೂ. ವೆಚ್ಚವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ