ಕಡಲ ತೀರದ ಜನರಿಗೆ ತಟ್ಟಿದ ಮೀನುಗಾರಿಕೆ ಬಂದ್ ಬಿಸಿ: ಗಗನಕ್ಕೇರಿದ ಮೀನು, ತರಕಾರಿ ಬೆಲೆ
ರಾಜ್ಯಾದ್ಯಾಂತ ಉತ್ತಮ ಮಳೆಯಾಗುತ್ತಿದೆ. ಜೊತೆಗೆ ಅನಾಹುತವನ್ನು ಸಹ ಸೃಷ್ಟಿಸುತ್ತಿದೆ. ಇತ್ತ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದ್ದು, ಉತ್ತರ ಕನ್ನಡ ಜಿಲ್ಲಾಡಳಿತ ಮೀನುಗಾರಿಕೆಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಕರಾವಳಿ ಭಾಗದಲ್ಲಿ ಮೀನುಗಳ ಬೆಲೆ ಗಗನಕ್ಕೇರಿದೆ. ಜೊತೆಗೆ ತರಕಾರಿಗೂ ಬೇಡಿಕೆ ಹೆಚ್ಚಾಗಿದೆ.
ಉತ್ತರ ಕನ್ನಡ, ಮೇ 20: ರಾಜ್ಯದಲ್ಲಿ ಆಗುತ್ತಿರುವ ಮಳೆಯಿಂದ ಕೃಷಿ ಚಟುವಟಿಕೆಗಳಿಗೆ ಅನಕೂಲ ಮಾಡಿಕೊಟ್ಟಿದ್ದರೆ, ಕುಡಿಯುವ ನೀರಿಗಾಗಿ ಪರಿತಪ್ಪಿಸುತ್ತಿರುವ ಜನರಲ್ಲಿನ ಆತಂಕ ದೂರ ಮಾಡಿದೆ. ಆದರೆ ಕೆಲವೆಡೆ ಅವಂತಾರಗಳನ್ನು ಸೃಷ್ಟಿ ಮಾಡಿರುವ ಈ ಮಳೆ. ಕರಾವಳಿ ಭಾಗದ ಜನರಿಗೆ ಮೀನು (Fish) ಬೆಲೆ ಏರಿಕೆ ಬಿಸಿ ತಂದೊಡ್ಡಿದೆ. ಮಳೆಗಾಲ (Rain) ಆರಂಭಕ್ಕೂ ಮುನ್ನವೇ ಹೀಗಾದರೆ ಮುಂದೇನು ಎಂಬ ಪ್ರಶ್ನೆ ಮೂಡಿದೆ. ರಾಜ್ಯಾದ್ಯಾಂತ ಉತ್ತಮ ಮಳೆಯಾಗುತ್ತಿದೆ. ಜೊತೆಗೆ ಅನಾಹುತವನ್ನು ಸಹ ಸೃಷ್ಟಿಸುತ್ತಿದೆ. ಇತ್ತ ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದ್ದು, ಉತ್ತರ ಕನ್ನಡ ಜಿಲ್ಲಾಡಳಿತ ಮೀನುಗಾರಿಕೆಗೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಕರಾವಳಿ ಭಾಗದಲ್ಲಿ ಮೀನುಗಳ ಬೆಲೆ ಗಗನಕ್ಕೇರಿದೆ.
ಮೇ 18 ರಿಂದ 22 ರವರೆಗೆ ಬಂಗಾಲಕೊಲ್ಲಿಯಲ್ಲಿ ವಾಯು ಭಾರ ಕುಸಿತ ಆಗುವ ಸಾಧ್ಯತೆ ಇದ್ದು ಆದ್ದರಿಂದ ಅರಬ್ಬಿ ಸಮುದ್ರದಲ್ಲಿ ದೊಡ್ಡ ಅಲೆಗಳು ಸೃಷ್ಟಿ ಆಗುವ ಸಾಧ್ಯತೆ ಇದೆ. ಹಾಗಾಗಿ ಮೀನುಗಾರರ ಬಹುತೇಕ ಎಲ್ಲ ಬೋಟ್ಗಳು ಬಂದರ್ನಲ್ಲಿ ಲಗಾಮು ಹಾಕುತ್ತಿವೆ.
ಗಗನಕ್ಕೇರಿದ ಮೀನಿನ ಬೆಲೆ
ಕಾರವಾರದಲ್ಲಿ 1 ಕೆಜಿ ಇಸವಾಣ್ ಮೀನಿನ ಬೆಲೆ 1500, ಬಾಂಗಡೆ ನಾಲ್ಕು ಮೀನಿಗೆ 200, ಶಟ್ಲಿ ಹತ್ತು ಮೀನಿಗೆ – 200, ಬೆಳುಂಜಿ ಮೀನು ಹತ್ತಕ್ಕೆ 100, ಸೊಂದಾಳೆ ಆರು ಮೀನಿಗೆ 200, ಪಾಂಪ್ಲೆಟ್ -2ಕ್ಕೆ 700 ರಿಂದ 800 ರೂ. ತಲುಪಿದ್ದು, ಸದ್ಯ ಮತ್ತೆ ಮೀನುಗಾರಿಕೆ ಪ್ರಾರಂಭವಾಗುವ ವರೆಗೆ ಇದೇ ದರ ಇರಲಿದೆ. ಇನ್ನು ಹಸಿ ಮೀನು ದರ ಹೆಚ್ಚಾದ್ದರಿಂದ ಒಣ ಮೀನಿಗೂ ಹೆಚ್ಚಿನ ಬೇಡಿಕೆ ಬರತೊಡಗಿದ್ದು ಮೀನು ಪ್ರಿಯರಿಗೆ ದರದ ಬಿಸಿ ತಟ್ಟಿದೆ.
ಇದನ್ನೂ ಓದಿ: ವಾಯುಭಾರ ಕುಸಿತ: 5 ದಿನ ಮೀನುಗಾರಿಕೆಗೆ ತೆರಳದಂತೆ ಉತ್ತರ ಕನ್ನಡ ಜಿಲ್ಲಾಡಳಿತ ಸೂಚನೆ
ಪ್ರತಿ ವರ್ಷ ಜೂನ್ ಬಳಿಕ ಮೀನುಗಾರಿಕೆ ಬಂದ್ ಮಾಡಲಾಗುತಿತ್ತು. ಆದರೆ ಈ ವರ್ಷ ಮೇ 18 ರಿಂದಲ್ಲೇ ಮೀನುಗಾರಿಕೆ ನಿಷೇಧ ಮಾಡಿದ್ದರಿಂದ, ಮೀನುಗಾರಿಕೆ ನಂಬಿ ಜೀವನ ಸಾಗಿಸುತ್ತಿದ್ದವರು, ಕುಟುಂಬ ನಿರ್ವಣೆಗೆ ಏನು ಮಾಡುವುದು ಎಂಬ ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.
ಮೀನಿನ ದರ ದಿನದಿಂದ ದಿನಕ್ಕೆ ಹೆಚ್ಚಳವಾಗುತಿದ್ದಂತೆ ಇತ್ತ ತರಕಾರಿಗೂ ಬೇಡಿಕೆ ಹೆಚ್ಚಾಗಿದ್ದು ತರಕಾರಿ ದರ ಸಹ ಗಗನಕ್ಕೇರಿದೆ. ಬೆಳುಳ್ಳಿ ಕೆಜಿಗೆ- 300 ರಿಂದ 500, ಕ್ಯಾರೆಟ್ ಕೆಜಿಗೆ 70 ರಿಂದ 80, ಬೀನ್ಸ್ – 200 ರಿಂದ 250 , ಕುತ್ತಂಬರಿ ಕಟ್ಟಿಗೆ 60 ರಿಂದ 70, ಸೌತೆ ಕೆಜಿಗೆ 60 ರಿಂದ 80, ಟೊಮೇಟೊ -50 ರಿಂದ 80 ದರಗಳಿದ್ದು ಪ್ರತಿ ತರಕಾರಿ ಬೆಲೆ ನಿಗದಿಗಿಂತ 50 ರಿಂದ 100 ರೂ ಹೆಚ್ಚಿದೆ.
ತರಕಾರಿಗೂ ಹೆಚ್ಚಾಯ್ತು ಬೇಡಿಕೆ
ಮೀನಿನ ದರ ಹೆಚ್ಚಾದ್ದರಿಂದ ತರಕಾರಿಗೆ ಹೆಚ್ಚು ಬೇಡಿಕೆ ಬಂದಿದೆ. ನೆರೆಯ ಗೋವಾದಿಂದ ಇಲ್ಲಿಗೆ ಜನ ಬಂದು ಕೊಂಡುಕೊಳ್ಳುತ್ತಾರೆ. ಗ್ರಾಹಕ ಬೇಡಿಕೆ ಹೆಚ್ಚಾಗಿದೆ. ಆದರೆ ಹುಬ್ಬಳ್ಳಿ, ಬೆಳಗಾವಿ, ಹಾವೇರಿಯಿಂದ ಬರುವ ತರಕಾರಿಗಳು ಕಮ್ಮಿಯಾಗಿದೆ. ಬೆಂಗಳೂರಿನಿಂದ ತರಿಸಬೇಕಿದೆ. ಮಳೆ ಇಲ್ಲದೇ ಬೆಳೆ ಹೆಚ್ಚು ಬಾರದ ಕಾರಣ ತರಕಾರಿ ಬೆಲೆ ಹೆಚ್ಚಾಗಲು ಕಾರಣ ಎನ್ನುತ್ತಾರೆ.
ಇದನ್ನೂ ಓದಿ: ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ
ಅವಧಿಗೂ ಮುನ್ನವೇ ಮಳೆಯ ಎಂಟ್ರಿಯಾದ ಪರಿಣಾಮ ಕೆಲವರಿಗೆ ಅನಕೂಲವಾಗಿದ್ದರೆ ಕರಾವಳಿ ನಗರದಲ್ಲಿ ಮೀನು, ತರಕಾರಿ ಬೆಲೆ ಗಗನಕ್ಕೇರಿ ಗ್ರಾಹಕರ ಜೇಬು ಬಿಸಿಮಾಡುತ್ತಿದೆ. ಮೀನುಗಾರಿಕೆ ಹಾಗೂ ಮೀನು ಮಾರಾಟ ಮಾಡಿ ಜೀವನ ಸಾಗಿಸುತ್ತಿರುವವರು ಮಳೆಗಾಲ ಮುಗಿಯುವವರೆಗೂ ಪರ್ಯಾಯ ಕೆಲಸದ ಕಡೆ ಮುಖ ಮಾಡಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:31 pm, Mon, 20 May 24