ಬೆಳೆ ಇಲ್ಲದಿದ್ರೂ ಉತ್ತಮ ಬೆಲೆ: ಮಂಡ್ಯದಲ್ಲಿ ಎಳನೀರಿಗೆ ಫುಲ್ ಡಿಮ್ಯಾಂಡ್
ಮಂಡ್ಯ ಜಿಲ್ಲೆಯಾದ್ಯಂತ ಭೀಕರ ಬರ ಆವರಿಸಿದ್ದು, ಕೆರೆಕಟ್ಟೆಗಳು ಬರಿದಾಗಿವೆ. ನಾಲೆಗಳಲ್ಲಿ ಕಾವೇರಿ ನೀರು ಹರಿಯುತ್ತಿಲ್ಲ. ಬೋರ್ ವೆಲ್ಗಳು ಬತ್ತಿವೆ. ಹೀಗಾಗಿ ಈ ಬಾರಿ ಅಷ್ಟಾಗಿ ತೆಂಗು ಫಸಲು ಇಲ್ಲ. ಕಡಿಮೆ ಫಸಲು ಇರುವುದರಿಂದ ಸಹಜವಾಗಿಯೇ ಈ ಬಾರಿ ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ. ಸರಾಸರಿ 35 ರೂ ರಿಂದ 50 ರೂ. ಸಮೀಪಕ್ಕೆ ಬಂದು ನಿಂತಿದೆ.
ಮಂಡ್ಯ, ಮೇ 20: ಸಕ್ಕರಿನಗರಿ ಮಂಡ್ಯದಲ್ಲಿ ಭೀಕರ ಬರಗಾಲ (drought) ಎದುರಾಗಿತ್ತು. ಅದರಲ್ಲೂ ಬೇಸಿಗೆಯಲ್ಲಿ ನಾಲೆಗಳಿಗೆ ನೀರು ಹರಿಸದ ಹಿನ್ನೆಲೆ, ಬೆಳೆಗಳು ಒಣಗಲು ಆರಂಭಿಸಿವೆ. ಅದರಲ್ಲೂ ವಾಣಿಜ್ಯ ಬೆಳೆ ತೆಂಗಿಗೆ ಬಾರಿ ಪೆಟ್ಟು ಬಿದ್ದಿದೆ. ಹೀಗಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ನೆಮ್ಮದಿ ವಿಚಾರ ಎಂದರೇ ಈ ಬಾರಿ ಬೆಳೆ ಇಲ್ಲದೆ ಇದ್ದರು, ಇರುವ ಬೆಳೆಗೆ ಉತ್ತಮ ಬೆಳೆ ಸಿಗುತ್ತಿದೆ. ಬರಗಾಲದ ಪರಿಣಾಮ ಫಸಲು ಕೊರತೆಯಿಂದ ಮಂಡ್ಯ ಜಿಲ್ಲೆಯಲ್ಲಿ ಎಳನೀರಿಗೆ (tender coconut) ಅಭಾವ ಸೃಷ್ಠಿಯಾಗಿದೆ. ಇದರಿಂದ ನಿತ್ಯ ಎಳನೀರಿನ ಬೆಲೆ 50 ರೂ ಸಮೀಪಕ್ಕೆ ಬಂದು ನಿಂತಿದೆ. ಕಳೆದ ಬಾರಿ ಒಂದು ಎಳನೀರಿನ ಬೆಲೆ 40 ರೂ ದಾಟಿರಲಿಲ್ಲ. ಈ ಬಾರಿ 10 ರೂ. ದರ ಏರಿಕೆ ಸಹಾ ಆಗಿದೆ. ಇದು ಗ್ರಾಹಕರ ಕೈ ಸುಡುತ್ತಿದ್ದರೇ, ರೈತರ ಉತ್ತಮ ಬೆಲೆ ಸಿಗುತ್ತಿದೆ.
ಅಂದಹಾಗೆ ಈ ಬಾರಿ ಮಂಡ್ಯ ಜಿಲ್ಲೆಯಾದ್ಯಂತ ಭೀಕರ ಬರ. ಕೆರೆಕಟ್ಟೆಗಳು ಬರಿದಾಗಿವೆ. ನಾಲೆಗಳಲ್ಲಿ ಕಾವೇರಿ ನೀರು ಹರಿಯುತ್ತಿಲ್ಲ. ಬೋರ್ ವೆಲ್ಗಳು ಬತ್ತಿವೆ. ಹೀಗಾಗಿ ಈ ಬಾರಿ ತೆಂಗು ಫಸಲು ಅಷ್ಟಾಗಿ ಇಲ್ಲ. ಕಡಿಮೆ ಫಸಲು ಇರುವುದರಿಂದ ಸಹಜವಾಗಿಯೇ ಈ ಬಾರಿ ಎಳನೀರಿಗೆ ಬೇಡಿಕೆ ಹೆಚ್ಚಾಗಿದೆ. ಸರಾಸರಿ 35 ರೂ ರಿಂದ 48 ರೂ. ವರೆಗೂ ಬೆಲೆ ಇದೆ.
ಇದನ್ನೂ ಓದಿ: ಮಂಗಳೂರು, ಉಡುಪಿಯಲ್ಲಿ 60 ರೂ. ತಲುಪಿದ ಎಳನೀರು ದರ: ಪೂರೈಕೆ ಕೊರತೆಯಿಂದ ವ್ಯಾಪಾರಿಗಳು ಕಂಗಾಲು
ಅಂದಹಾಗೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿರೋ ಎಳನೀರು ಮಂಡಿ, ದೇಶದಲ್ಲಿಯೇ ಅತಿ ಹೆಚ್ಚು ಎಳನೀರು ಮಾರಾಟವಾಗುವ ಮಂಡಿಯಾಗಿದೆ. ಇಲ್ಲಿ ಪ್ರತಿನಿತ್ಯ ಕೋಟ್ಯಾಂತರ ರೂ. ಮೌಲ್ಯದ 35 ರಿಂದ 40 ಲೋಡ್ ಎಳನೀರು ಹೊರ ರಾಜ್ಯಗಳಿಗೆ ಹೋಗುತ್ತದೆ. ಜಿಲ್ಲೆಯ ರೈತರು ತಮ್ಮ ಜಮೀನಲ್ಲಿ ಬೆಳೆದ ಎಳನೀರನ್ನ ಇಲ್ಲಿಗೆ ತಂದು ಮಾರಾಟ ಮಾಡುತ್ತಾರೆ.
ಇದನ್ನೂ ಓದಿ: ಮಂಗಳೂರಲ್ಲಿ ಹಲಸಿನ ಹಬ್ಬ: ತರಹೇವಾರಿ ಭಕ್ಷ್ಯ ಸವಿದು ಫುಲ್ ಖುಷ್ ಆದ ಜನರು
ಮಧ್ಯವರ್ತಿಗಳು ಇಲ್ಲಿ ಖರೀದಿಸಿ ಹೊರ ರಾಜ್ಯಗಳಿಗೆ ಮಾರಾಟ ಮಾಡುತ್ತಾರೆ. ಈ ಬಾರಿ ಫಸಲು ಕಡಿಮೆ ಇರುವುದರಿಂದ ಅಷ್ಟಾಗಿ ಎಳನೀರು ಮಾರುಕಟ್ಟೆಗೆ ಬರುತ್ತಿಲ್ಲ. ಕಳೆದ ಬಾರಿ ರೈತರಿಗೆ ಕಡಿಮೆ ದರ ಸಿಗುತ್ತಿತ್ತು. ಆದರೆ ಈ ಬಾರಿ ಬೆಳೆ ಇಲ್ಲದೆ ಇರುವುದರಿಂದ ಉತ್ತಮ ಬೆಲೆ ಸಿಗುತ್ತಿದೆ. ಭೀಕರ ಬರಗಾಲದಿಂದ ತೆಂಗು ಬೆಳೆಗಾರರು ಬೆಳೆಯಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ರು, ಇರುವ ಬೆಳೆಗೆ ಉತ್ತಮ ಬೆಲೆ ಸಿಗುತ್ತಿರುವುದು ನೆಮ್ಮದಿಗೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.