AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಂಗಳೂರಲ್ಲಿ ಹಲಸಿನ ಹಬ್ಬ: ತರಹೇವಾರಿ ಭಕ್ಷ್ಯ ಸವಿದು ಫುಲ್​ ಖುಷ್ ಆದ ಜನರು

ಮಂಗಳೂರಿನ ಶರವು ದೇವಳ ಸಮೀಪದ ಬಾಳಂಭಟ್ ಹಾಲ್‌ನಲ್ಲಿ ಇಂದು ಹಲಸು ಹಬ್ಬ ನಡೆದಿದೆ. ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ನೇತೃತ್ವದಲ್ಲಿ ನಡೆದ ಈ ಹಲಸು ಮೇಳದಲ್ಲಿ ಹಲಸಿನ ಕಾಯಿಯ ಮೌಲ್ಯವರ್ಧನೆ ಮಾಡುವ ಕಾರ್ಯ ನಡೆಯಿತು. ಈ ಹಲಸು ಮೇಳದಲ್ಲಿ ಹಲಸಿನಿಂದ ಮಾಡಿದ ವಿವಿಧ ಖಾದ್ಯಗಳ ಮಾರಾಟವೂ ನಡೆಯಿತು. ಹಲಸಿನಿಂದ ಮಾಡಿದ ಹಲ್ವ, ಹೋಳಿಗೆ ನೋಡುತ್ತಿದ್ದರೆ ಬಾಯಲ್ಲೆ ನೀರೂರಿಸುವಂತಿತ್ತು.

ಮಂಗಳೂರಲ್ಲಿ ಹಲಸಿನ ಹಬ್ಬ: ತರಹೇವಾರಿ ಭಕ್ಷ್ಯ ಸವಿದು ಫುಲ್​ ಖುಷ್ ಆದ ಜನರು
ಮಂಗಳೂರಲ್ಲಿ ಹಲಸಿನ ಹಬ್ಬ: ತರಹೇವಾರಿ ಭಕ್ಷ್ಯ ಸವಿದು ಫುಲ್​ ಖುಷ್ ಆದ ಜನರು
ಅಶೋಕ್​ ಪೂಜಾರಿ, ಮಂಗಳೂರು
| Edited By: |

Updated on:May 19, 2024 | 5:05 PM

Share

ಮಂಗಳೂರು, ಮೇ 19: ಇಂದು ಬಹುಪಯೋಗಿಯಾದ ಹಲಸಿನ (Jackfruit) ಹಣ್ಣಿನ ಪ್ರಾಮುಖ್ಯತೆ ಹೆಚ್ಚಿನ ಜನರಿಗೆ ಗೊತ್ತಿಲ್ಲ. ಅದರಲ್ಲೂ ನಗರದ ಮಂದಿಗೆ ಹಲಸಿನ ಹಣ್ಣು ಕಾಣಸಿಗೋದು ಬಲು ಅಪರೂಪವಾಗಿ ಬಿಟ್ಟಿದೆ. ಆದರೆ ಇದೆಲ್ಲವುದಕ್ಕೆ ತದ್ವಿರುದ್ದ ಎನ್ನುವಂತೆ ಒಂದು ಅದ್ಬುತವಾದ ಕಾರ್ಯಕ್ರಮ ಕಡಲನಗರಿ ಮಂಗಳೂರಿನಲ್ಲಿ ನಡೆದಿದೆ. ಬಾಯಲ್ಲಿ ನೀರೂರಿಸುವ ಹಲವು ಖಾದ್ಯಗಳನ್ನು ಹಲಸಿನ ಹಣ್ಣಿನಿಂದ ಮಾಡಬಹುದು ಎಂಬುದನ್ನು ಎಲ್ಲರಿಗೂ ತಿಳಿಯುವಂತೆ ಮಾಡಿದೆ.

ಮಂಗಳೂರಿನ ಶರವು ದೇವಳ ಸಮೀಪದ ಬಾಳಂಭಟ್ ಹಾಲ್‌ನಲ್ಲಿ ಇಂದು ಹಲಸು ಹಬ್ಬ ನಡೆಯಿತು. ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ನೇತೃತ್ವದಲ್ಲಿ ನಡೆದ ಈ ಹಲಸು ಮೇಳದಲ್ಲಿ ಹಲಸಿನ ಕಾಯಿಯ ಮೌಲ್ಯವರ್ಧನೆ ಮಾಡುವ ಕಾರ್ಯ ನಡೆಯಿತು. ಈ ಹಲಸು ಮೇಳದಲ್ಲಿ ಹಲಸಿನಿಂದ ಮಾಡಿದ ವಿವಿಧ ಖಾದ್ಯಗಳ ಮಾರಾಟವೂ ಮಾಡಲಾಗಿದೆ.

ಇದನ್ನೂ ಓದಿ: ಮಂಗಳೂರಿನಲ್ಲಿ ಇನ್ಮುಂದೆ ರೇಡಾರ್​ ಕಣ್ಗಾವಲು: ಸಂಚಾರಿ ನಿಯಮ ಉಲ್ಲಂಘಿಸಿದ್ರೆ ದಂಡ ಪಕ್ಕಾ

ಹಲಸಿನಿಂದ ಮಾಡಿದ ಹಲ್ವ, ಹೋಳಿಗೆ, ಮಾಂಬಳ, ಮುಲ್ಕಾ, ಗಟ್ಟಿ, ಮಂಚೂರಿ, ಬೋಂಡಾ ನೋಡುತ್ತಿದ್ದರೆ ಬಾಯಲ್ಲೆ ನೀರೂರಿಸುವಂತಿತ್ತು. ಇನು ಇದರ ಉತ್ಪನ್ನಗಳಾದ ಜಾಮ್, ಜ್ಯೂಸ್, ಚಿಪ್ಸ್, ಹಪ್ಪಳ ಒಣಗಿಸಿದ ಹಲಸಿನ ಬೀಜ, ವಿವಿಧ ತಳಿಯ ಹಲಸಿನ ಹಣ್ಣುಗಳು ಇಲ್ಲಿ ಮಾರಾಟಕಿದ್ದವು.

ಇನ್ನು ರುಚಿಯನ್ನು ಸವಿಯುವುದಕ್ಕೆ ಜನರು ಮುಗಿಬೀಳುತಿದ್ದ ದೃಶ್ಯಗಳು ಕಂಡುಬಂತು. ಪಿಜ್ಜಾ, ಬರ್ಗರ್ ತಿನ್ನುವಂತಹ ಈ ಕಾಲದಲ್ಲಿ ಇಂತಹ ಅಪರೂಪದ ಆರೋಗ್ಯಕರ ಆಹಾರದ ರುಚಿ ಕಂಡು ಯುವ ಜನತೆ ಫುಲ್ ಖುಷಿಯಾಗಿದ್ದರು. ಬಹಳ ಹಿಂದಿನಿಂದಲೂ ಬಡವರ ಬಂದುವಾಗಿದ್ದ ಈ ಹಲಸಿನ ಕುರಿತು ಇಂದು ರೈತರಲ್ಲಿ ಅರಿವು ಮೂಡಿಸುದಕ್ಕಾಗಿ ಹಾಗೂ ಹಲಸಿನ ಮೌಲ್ಯವರ್ಧನೆಗಾಗಿ ಇದರಿಂದ ತಯಾರಾದ ಉತ್ಪನ್ನಗಳ ಕುರಿತು ಬೇರೆಯವರಿಗೆ ತಿಳಿಯಪಡಿಸುವುದಕ್ಕಾಗಿ ಇದು ಒಂದು ಉತ್ತಮ ಕಾರ್ಯಕ್ರಮವಾಗಿತ್ತು.

ಇದನ್ನೂ ಓದಿ: ಮಂಗಳೂರು, ಉಡುಪಿಯಲ್ಲಿ 60 ರೂ. ತಲುಪಿದ ಎಳನೀರು ದರ: ಪೂರೈಕೆ ಕೊರತೆಯಿಂದ ವ್ಯಾಪಾರಿಗಳು ಕಂಗಾಲು

ಗುಜ್ಜೆಯಿಂದ ಹಿಡಿದು, ಕಾಯಿ, ಹಣ್ಣಾಗುವ ತನಕವೂ ಬಹುಬೇಡಿಕೆಯ ವಸ್ತುವಾಗಿರುವ ಹಲಸಿನ ಕುರಿತು ಇನ್ನಷ್ಟೂ ಅರಿವು ಮೂಡಿಸುವ ಕಾರ್ಯವಾಗಬೇಕಾಗಿದೆ. ಹಲಸಿನ ಮೌಲ್ಯವರ್ಧನೆಯಿಂದ ಹಲಸು ಬಹುಪಯೋಗಿ ಎಂದು ಎಲ್ಲರಿಗೂ ತಿಳಿಯುವಂತಾಗಬೇಕಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:04 pm, Sun, 19 May 24

ವಿಡಿಯೋ: ಡಿಕೆಶಿ ತಿನಿಸಿದ ಸ್ವೀಟನ್ನು ಬಾಯಿಂದ ತೆಗೆದು ಎಸೆದ ಸಿದ್ದರಾಮಯ್ಯ!
ವಿಡಿಯೋ: ಡಿಕೆಶಿ ತಿನಿಸಿದ ಸ್ವೀಟನ್ನು ಬಾಯಿಂದ ತೆಗೆದು ಎಸೆದ ಸಿದ್ದರಾಮಯ್ಯ!
ಡಿ ಕ್ಲರ್ಕ್ ಆಟಕ್ಕೆ ಸಲಾಂ ಹೊಡೆದ ಕ್ರಿಕೆಟ್ ಜಗತ್ತು; ವಿಡಿಯೋ
ಡಿ ಕ್ಲರ್ಕ್ ಆಟಕ್ಕೆ ಸಲಾಂ ಹೊಡೆದ ಕ್ರಿಕೆಟ್ ಜಗತ್ತು; ವಿಡಿಯೋ
ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಚಳಿಯೆಂದು ಹುತಾತ್ಮನಾದ ಸೈನಿಕನ ಪ್ರತಿಮೆಗೆ ಕಂಬಳಿ ಹೊದಿಸಿದ ಅಮ್ಮ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ಭುಗಿಲೆದ್ದ ಆಕ್ರೋಶ
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಹೊರಗೆ ಬಂದಮೇಲೆ ಬಿಗ್ ಬಾಸ್ ಬಗ್ಗೆ ವಿಡಿಯೋ ಮಾಡಲು ನಿರ್ಧರಿಸಿದ ರಘು
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಆರ್​ಸಿಬಿ ಪರ ಚೊಚ್ಚಲ ವಿಕೆಟ್ ಉರುಳಿಸಿದ ಲಾರೆನ್ ಬೆಲ್
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಅಶ್ವಿನಿ ಗೌಡ ಎದುರಲ್ಲೇ ಧ್ರುವಂತ್ ಓವರ್ ಆ್ಯಕ್ಟಿಂಗ್; ವಿಡಿಯೋ ನೋಡಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ