ಮೈಸೂರಿನಲ್ಲಿ ಆಸ್ತಿ ನೋಂದಣಿಗಾಗಿ ಹಾಸಿಗೆ ಹಿಡಿದ ವೃದ್ಧನನ್ನು ಕರೆ ತಂದ ಕುಟುಂಬಸ್ಥರು!
Sub registrar office: ವೃದ್ಧನ ಕುಟುಂಬಸ್ಥರು ಮೊದಲ ಮಹಡಿಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿಗೆ ಹಾಸಿಗೆ ಸಮೇತ ಅವರನ್ನು ಎತ್ತಿಕೊಂಡು ಹೋಗಿದ್ದಾರೆ. ಆಸ್ತಿ ನೋಂದಣಿಗಾಗಿ ಆ ಹಿರಿಯ ವ್ಯಕ್ತಿ ನಿಯಮಾನುಸಾರ ಖುದ್ದು ಹಾಜರಾಗುವುದು ಕಡ್ಡಾಯವಾಗಿತ್ತು.
ಮೈಸೂರು: ಆಸ್ತಿ ನೋಂದಣಿಗಾಗಿ (property) ಹಾಸಿಗೆ ಹಿಡಿದ ವೃದ್ದನನ್ನೇ ಮನೆಯವರು ಕರೆ ತಂದಿರುವ ಪ್ರಕರಣ ಮೈಸೂರಿನಲ್ಲಿ (mysore) ನಡೆದಿದೆ. ಮೈಸೂರಿನ ರಾಮಕೃಷ್ಣ ನಗರದ ಆಂದೋಲನ ವೃತ್ತದ ಬಳಿ ಇರುವ ಉಪನೋಂದಣಾಧಿಕಾರಿ ಕಚೇರಿಯಲ್ಲಿ (sub registrar office) ಈ ದೃಶ್ಯ ಕಂಡುಬಂದಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಆ ವೃದ್ಧರಿಂದ ಸಿಬ್ಬಂದಿ ಹೆಬ್ಬೆಟ್ಟು ಸಹಿ ಪಡೆದಿದ್ದಾರೆ.
ವೃದ್ಧನ ಕುಟುಂಬಸ್ಥರು ಮೊದಲ ಮಹಡಿಯಲ್ಲಿರುವ ಉಪನೋಂದಣಾಧಿಕಾರಿ ಕಚೇರಿಗೆ ಹಾಸಿಗೆ ಸಮೇತ ಅವರನ್ನು ಎತ್ತಿಕೊಂಡು ಹೋಗಿದ್ದಾರೆ. ಆಸ್ತಿ ನೋಂದಣಿಗಾಗಿ ಆ ಹಿರಿಯ ವ್ಯಕ್ತಿ ನಿಯಮಾನುಸಾರ ಖುದ್ದು ಹಾಜರಾಗುವುದು ಕಡ್ಡಾಯವಾಗಿತ್ತು.
ಹಾಗಾಗಿ ಹಾಸಿಗೆ ಹಿಡಿದಿರುವ ವೃದ್ದ ವ್ಯಕ್ತಿಯ ಹೆಬ್ಬೆಟ್ಟು ಸಹಿಗಾಗಿ ಕುಟುಂಬಸ್ಥರು ಕರೆತಂದಿದ್ದರು. ವೃದ್ದ ವ್ಯಕ್ತಿಯನ್ನು ಕರೆತಂದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೋಂದಣಿ ಮಾಡಿಸಿದವರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
Published On - 3:54 pm, Sat, 16 July 22