ಅಂಚೆ ಇಲಾಖೆ ಮೂಲಕ ಬೆಂಗಳೂರಿಗೆ ಬರ್ತಾಯಿದೆ ವಿದೇಶಿ ಡ್ರಗ್ಸ್: 21 ಕೋಟಿ ರೂ ಮೌಲ್ಯದ ಡ್ರಗ್ಸ್ ವಶಕ್ಕೆ
ಬೆಂಗಳೂರು ಬೆಳೆದಂತೆಲ್ಲಾ ಕ್ರೈಂ ಕೂಡ ಅಷ್ಟೇ ವೇಗವಾಗಿ ಜಾಸ್ತಿ ಆಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಮಾದಕ ವಸ್ತುಗಳ ನಶಾಲೋಕ ಶರವೇಗದಲ್ಲಿ ಬೆಳೆಯುತ್ತಿದೆ. ಬರೋಬ್ಬರಿ 21 ಕೋಟಿ ರೂ. ಮೌಲ್ಯದ ವಿವಿಧ ಬಗೆಯ ಐಷಾರಾಮಿ ಡ್ರಗ್ಸ್ ಬೆಂಗಳೂರಿಗೆ ಸರಬರಾಜು ಆಗುತ್ತಿದೆ ಎಂಬುವುದು ಸಿಸಿಬಿ ಪೊಲೀಸ ತನಿಖೆಯಿಂದ ಬಯಲಾಗಿದೆ.
ಬೆಂಗಳೂರು, ಅಕ್ಟೋಬರ್ 18: ಅದು ದೇಶದ ಮಹಾನಗರಗಳಿಗೆ ಡ್ರಗ್ಸ್ (Drugs) ಸರಬರಾಜು ಮಾಡುವ ಬೃಹತ್ ಜಾಲ. ಸರ್ಕಾರಿ ಸಂಸ್ಥೆಯನ್ನೇ ಬಳಸಿಕೊಂಡು ಮಾದಕವಸ್ತುಗಳನ್ನ ಸರಬರಾಜು ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಹಾಗಾದರೆ ಪೊಲೀಸರ ಬಲೆಗೆ ಬಿದ್ದ ಆ ಜಾಲ ಯಾವುದು, ಸಿಕ್ಕ ಡ್ರಗ್ಸ್ ಎಷ್ಟು ಎಂದು ಕೇಳಿದರೆ ಶಾಕ್ ಆಗುವುದಂತೂ ನಿಜ.
21 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶಕ್ಕೆ
ಬೆಂಗಳೂರು ಬೆಳೆದಂತೆಲ್ಲಾ ಕ್ರೈಂ ಕೂಡ ಅಷ್ಟೇ ವೇಗವಾಗಿ ಜಾಸ್ತಿ ಆಗುತ್ತಿದೆ. ಅದರಲ್ಲೂ ಪ್ರಮುಖವಾಗಿ ಮಾದಕ ವಸ್ತುಗಳ ನಶಾಲೋಕ ಶರವೇಗದಲ್ಲಿ ಬೆಳೆಯುತ್ತಿದೆ. ಹಾಗಾಗಿ ಡ್ರಗ್ಸ್ ನಿಯಂತ್ರಣ ಮಾಡುವುದಕ್ಕೆ ಬೆಂಗಳೂರು ಪೊಲೀಸರು ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಆದರೆ ಪೊಲೀಸರು ಎಷ್ಟೆ ಪ್ರಯತ್ನ ನಡೆಸಿದ್ರೂ, ಒಂದಲ್ಲೊಂದು ಮಾರ್ಗದಲ್ಲಿ ಮಾದಕವಸ್ತುಗಳು ಬೆಂಗಳೂರು ಸೇರುತ್ತಿದೆ. ಹೀಗೆ ಕಳೆದ ಸೆಪ್ಟೆಂಬರ್ನಲ್ಲಿ ನಗರದ ಎಚ್ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎರಡು ಡ್ರಗ್ಸ್ ಕೇಸ್ಗಳು ವರದಿಯಾಗಿದ್ದವು. ಆ ಎರಡು ಪ್ರಕರಣಗಳ ಬೆನ್ನತ್ತಿದ ಪೊಲೀಸರಿಗೆ ಮಾದಕ ಲೋಕದ ಸಮುದ್ರವೇ ಸಿಕ್ಕಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಲೋಕಾಯುಕ್ತ ದಾಳಿ: ಸರ್ಕಾರಿ ಕಚೇರಿಯಲ್ಲಿ ಡ್ರಗ್ಸ್, ಗಾಂಜಾ, ಲಿಕ್ಕರ್ ಬಾಟಲ್ ಪತ್ತೆ
ಅಂದಹಾಗೇ ಎಲ್ಲಾ ಡ್ರಗ್ಸ್ ಕೂಡ ವಿದೇಶಗಳಿಂದ ನಗರಕ್ಕೆ ಸರಬರಾಜು ಆಗುತ್ತಿದ್ದು, ಪೊಲೀಸರ ಪರಿಶೀಲನೆ ವೇಳೆ ಅದು ಭಾರತೀಯ ಅಂಚೆ ಇಲಾಖೆ ಮೂಲಕ ಬಂದಿರುವುದು ಗೊತ್ತಾಗಿದೆ. ಬಳಿಕ ಪ್ರಕರಣದ ಜಾಡು ಹಿಡಿದ ಸಿಸಿಬಿ ಪೊಲೀಸರು, ಕಸ್ಟಮ್ಸ್ ಅಧಿಕಾರಗಳ ಸಹಯೋಗದೊಂದಿಗೆ ಚಾಮರಾಜಪೇಟೆಯಲ್ಲಿರುವ ವಿದೇಶಿ ಪೋಸ್ಟ್ ಆಫೀಸ್ನಲ್ಲಿ ಪರಿಶೀಲನೆ ಮಾಡಿದ್ದಾರೆ. ಶ್ವಾನದಳದ ಸಹಾಯದಿಂದ ಸುಮಾರು 3500 ಪೋಸ್ಟ್ಗಳನ್ನ ಪರಿಶೀಲನೆ ನಡೆಸಿದಾಗ ಅದರಲ್ಲಿ ಯುಸ್, ಯುಕೆ, ಬೆಲ್ಜಿಯಂ, ಥೈಲ್ಯಾಂಡ್, ನೆದರಲ್ಯಾಂಡ್ ಹಾಗೂ ಇತರೆ ದೇಶಗಳಿಂದ ಬಂದಿರುವ 606 ಪೋಸ್ಟ್ಗಳಲ್ಲಿ ಬರೋಬ್ಬರಿ 21 ಕೋಟಿ ರೂ. ಮೌಲ್ಯದ ವಿವಿಧ ಬಗೆಯ ಐಷಾರಾಮಿ ಡ್ರಗ್ಸ್ಗಳು ಬಂದಿರುವುದು ಗೊತ್ತಾಗಿದೆ.
ಇದನ್ನೂ ಓದಿ: ಡ್ರಗ್ಸ್ ತಡೆಗೆ ಸಿದ್ದರಾಮಯ್ಯ ಸರ್ಕಾರ ದಿಟ್ಟ ಹೆಜ್ಜೆ, ಡ್ರಗ್ಸ್ ಕಡಿವಾಣಕ್ಕೆ ಟಾಸ್ಕ್ ಫೋರ್ಸ್ ರಚನೆ
ಸದ್ಯ ವಶಕ್ಕೆ ಪಡೆದಿರುವ ಪೋಸ್ಟ್ಗಳ ವಿಳಾಸ ಪರಿಶೀಲನೆ ನಡೆಸಿದ್ದು, ಯಾರ ಯಾರ ಹೆಸರಲ್ಲಿ ಈ ಡ್ರಗ್ಸ್ ಬಂದಿದೆ ಎನ್ನುವುದು ತನಿಖೆ ನಡೆಸಿದ್ದಾರೆ. ಒಟ್ಟನಲ್ಲಿ ಬೆಂಗಳೂರಿಗೆ ಕೇವಲ ದೇಶದ ವಿವಿಧ ರಾಜ್ಯಗಳಿಂದ ಮಾತ್ರ ಡ್ರಗ್ಸ್ ಬರುತ್ತಿಲ್ಲ, ಬದಲಿಗೆ ವಿದೇಶಗಳಿಂದಲೂ ಬರುತ್ತಿದೆ ಅನ್ನೋದು ಈ ದಾಳಿಯಿಂದ ಗೊತ್ತಾಗಿದೆ. ಅದರಿಂದ ಸಿಸಿಬಿ ಪೊಲೀಸರು ವಿದೇಶಿ ಪಾರ್ಸೆಲ್ಗಳ ಮೇಲೆ ನಿಗಾ ಇಟ್ಟಿದ್ದು, ಮಾದಕ ವಸ್ತುಗಳ ಜಾಲ ಮಟ್ಟ ಹಾಕಲು ಶತಪ್ರಯತ್ನ ನಡೆಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.