ಕರ್ನಾಟಕದಲ್ಲಿ ಹಿಂಗಾರು ಮಳೆ ಅಬ್ಬರ: ಗಗನಕ್ಕೇರಿದ ತರಕಾರಿ ಬೆಲೆ, ಯಾವುದಕ್ಕೆ ಎಷ್ಟೆಷ್ಟು?

ಹಿಂಗಾರು ಮಳೆಯ ಪರಿಣಾಮ ತರಕಾರಿಗಳು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ತರಕಾರಿ ಬೆಲೆ ಏರಿಕೆಯಾಗಿದ್ದು, ದೀಪಾವಳಿ ಹಬ್ಬಕ್ಕೆ ಈ ಬೆಲೆ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ತರಕಾರಿಗಳ ಬೆಲೆ‌ ತುಂಬ ದುಬಾರಿಯಾಗಿದೆ.‌ ಬೆಲೆ‌ ಕೇಳಿಯೇ ಗ್ರಾಹಕರು ಶಾಕ್ ಆಗುತ್ತಿದೆ.‌

ಕರ್ನಾಟಕದಲ್ಲಿ ಹಿಂಗಾರು ಮಳೆ ಅಬ್ಬರ: ಗಗನಕ್ಕೇರಿದ ತರಕಾರಿ ಬೆಲೆ, ಯಾವುದಕ್ಕೆ ಎಷ್ಟೆಷ್ಟು?
ಕರ್ನಾಟಕದಲ್ಲಿ ಹಿಂಗಾರು ಮಳೆ ಅಬ್ಬರ: ಗಗನಕ್ಕೇರಿದ ತರಕಾರಿ ಬೆಲೆ, ಯಾವುದಕ್ಕೆ ಎಷ್ಟೆಷ್ಟು?
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 18, 2024 | 9:26 PM

ಬೆಂಗಳೂರು, ಅಕ್ಟೋಬರ್​ 18: ರಾಜ್ಯ ರಾಜಾಧಾನಿಯಲ್ಲಿ ಒಂದು ವಾರದಿಂದ ಹಿಂಗಾರು ಮಳೆ ಚುರುಕಾಗಿದ್ದು, ಮಳೆ ಪರಿಣಾಮ ತರಕಾರಿಗಳ ಬೆಲೆ (Vegetable price hike) ಏರಿಕೆಯಾಗಿದೆ. ಕಳೆದ ವಾರಕ್ಕಿಂತ ಈ‌ ವಾರ 10 ರಿಂದ‌ 20 ರೂಪಾಯಿ‌ ಹಚ್ಚಾಗಿದ್ದು,‌ ದೀಪಾವಳಿ ಹಬ್ಬದ ವೇಳೆ‌ಗೆ ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದ್ದು, ತರಕಾರಿಗಳ‌ ಬೆಲೆ‌ಗೆ ಗ್ರಾಹಕರು ಶಾಕ್ ಆಗುತ್ತಿದ್ದಾರೆ.

ಹೌದು, ಹಿಂಗಾರು ಮಳೆಯ ಪರಿಣಾಮ ತರಕಾರಿಗಳ‌ ಬೆಲೆ ಜಾಸ್ತಿಯಾಗಿದೆ.‌ ಕಳೆದ ವಾರ ಟೊಮೆಟೊ ಬೆಲೆ 50 ರೂ ಇತ್ತು.‌ ಈ ವಾರ 60 ರೂ ಆಗಿದೆ. ಇನ್ನು ಆಲೂಗಡ್ಡೆ ಕಳೆದ ವಾರ 30 ರೂ ಇತ್ತು. ಈ ವಾರ 45 ರೂ ಆಗಿದೆ.‌ ಇನ್ನು ಈರುಳ್ಳಿಯಂತು‌ ಮಾರುಕಟ್ಟೆಯಲ್ಲಿ ಕೆಜಿಗೆ 60 ರೂ ಇದ್ದರೆ, ತಳ್ಳುವ ಗಾಡಿಗಳಲ್ಲಿ ಹಾಗೂ ಮನೆಗಳ ಅಕ್ಕಪಕ್ಕದ ಅಂಗಡಿಗಳಲ್ಲಿ 70 ರಿಂದ 100 ರೂ. ರವರೆಗೂ ವ್ಯಾಪಾರವಾಗುತ್ತಿದೆಯಂತೆ.

ಇದನ್ನೂ ಓದಿ: Vegetables Price in Bangalore: ಮುಂಗಾರು ಮಳೆ ಅಬ್ಬರ, ಗಗನಕ್ಕೇರಿದ ತರಕಾರಿ ಬೆಲೆ: ಇಲ್ಲಿದೆ ದರ ಪಟ್ಟಿ

ಇನ್ನು ಕ್ಯಾರೆಟ್, ಬೀನ್ಸ್, ನಾಟಿ ಬಟಾಣಿ, ಹಸಿರು, ಕ್ಯಾಪ್ಸಿಕಮ್, ಮೆಣಸಿನಗಾಯಿ ಎಲ್ಲವೂ 100 ರ ಗಡಿದಾಟಿವೆ. ಹಿಂಗಾರು ಮಳೆಯ ಪರಿಣಾಮ ತರಕಾರಿಗಳು ಸರಿಯಾಗಿ ಪೂರೈಕೆಯಾಗುತ್ತಿಲ್ಲ. ಹೀಗಾಗಿ ತರಕಾರಿ ಬೆಲೆ ಏರಿಕೆಯಾಗಿದ್ದು, ದೀಪಾವಳಿ ಹಬ್ಬಕ್ಕೆ ಈ ಬೆಲೆ ಮತ್ತಷ್ಟು ಜಾಸ್ತಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಾಗಾದ್ರೆ ಈ ವಾರ ತರಾಕಾರಿಗಳ ಬೆಲೆ ಎಷ್ಟೆಷ್ಟು ಅಂತ ನೋಡುವುದಾದರೆ,

        ತರಕಾರಿ   ಹಿಂದಿನ ಬೆಲೆ     ಇಂದಿನ ಬೆಲೆ

  • ನಾಟಿ ಬೀನ್ಸ್: 120, 80 ರೂ.
  • ಟೊಮೆಟೊ: 15,     40 ರೂ.
  • ಬಿಳಿ ಬದನೆ: 60,     40 ರೂ.
  • ಮೆಣಸಿನ ಕಾಯಿ:  40,  80 ರೂ.
  • ನುಗ್ಗೆಕಾಯಿ ಕೆಜಿಗೆ: 100 ರಿಂದ 120, ಒಂದಕ್ಕೆ 20 ರೂ.
  • ಊಟಿ ಕ್ಯಾರೆಟ್: 120,   40ರೂ.
  • ನವಿಲುಕೋಸು: 40,  40ರೂ.
  • ಮೂಲಂಗಿ: 40,  40 ರೂ.
  • ಹೀರೇಕಾಯಿ: 40,  60 ರೂ.
  • ಆಲೂಗಡ್ಡೆ:   40,   40 ರೂ.
  • ದಪ್ಪ ಈರುಳ್ಳಿ: 60,   60ರೂ.
  • ಸಣ್ಣ ಈರುಳ್ಳಿ: 40,    30 ರೂ.
  • ಕ್ಯಾಪ್ಸಿಕಂ: 40,    40 ರೂ.
  • ಹಾಗಲಕಾಯಿ: 40, 40 ರೂ.
  • ಕೊತ್ತಂಬರಿ ಸೊಪ್ಪುಕಟ್: 30 ರೂ.
  • ಶುಂಠಿ: 150, 150 ರೂ.
  • ಬೆಳ್ಳುಳ್ಳಿ: 400,  400 ರೂ.
  • ಪಾಲಕ್ ಕೆಜಿ: 40 ರೂ.
  • ಪುದಿನ ಸೊಪ್ಪು ಕೆಜಿ: 92 ರೂ.
  • ನಾಟಿ ಬಟಾಣಿ:  200,   200 ರೂ.
  • ಫಾರಂ ಬಟಾಣಿ:   100, 100 ರೂ.

ಈ ಬೆಲೆ ಇನ್ನು ಮೂರು ದಿನಗಳು ಮುಂದುವರಿಯಲಿದೆ ಎನ್ನಲಾಗುತ್ತಿದೆ. ಸದ್ಯ ಮಳೆ ಇರುವ ಕಾರಣ ಈರುಳ್ಳಿ, ಟೋಮಾಟೋ, ಆಲೂಗಡ್ಡೆ, ಸೇರಿದಂತೆ ಹಲವು ತರಕಾರಿಗಳು ಮಳೆಗೆ ಹಾನಿಯಾಗಿವೆ. ಹೀಗಾಗಿ ತರಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಪೂರೈಕೆಯಾಗುತ್ತಿಲ್ಲ. ಹಾಗಾಗಿ ತರಕಾರಿಗಳ ಬೆಲೆ ಏರಿಕೆಯಾಗಿದೆ.‌ ಅಲ್ಲದೇ ಇದೀಗ ಮದುವೆ ಸೀಸನ್​ ಆಗಿರುವುದರಿಂದ ತರಕಾರಿಗೆ ಹೆಚ್ಚು ಬೇಡಿಕೆ ಇದೆ‌.

ಆದರೆ ತರಕಾರಿಗಳು ಕಡಿಮೆ ಪೂರೈಕೆಯಾಗುತ್ತಿರುವ ಪರಿಣಾಮ ಬೆಲೆ ಏರಿಕೆಯಾಗಿದೆ. ಹೀಗಾಗಿ ವ್ಯಾಪಾರ ವಹಿವಾಟು‌ ಅಷ್ಟಾಗಿ ನಡೆಯುತ್ತಿಲ್ಲ. ಒಂದು ಕೆಜೆ ತೆಗೆದುಕೊಳ್ಳುವಲ್ಲಿ ಅರ್ಧ ಕೆಜೆ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ವ್ಯಾಪಾರ ವಹಿವಾಟು‌ ಕಡಿಮೆ ಇದೆ ಅಂತ ವ್ಯಾಪಾರಸ್ಥರಾದ ಮುಬಾರಕ್ ಅವರು ಹೇಳಿದ್ದಾರೆ.

ತರಕಾರಿಗಳ ಬೆಲೆ‌ ಏರಿಕೆ ಬಗ್ಗೆ ಗ್ರಾಹಕರು ಬೇಸರ

ತರಕಾರಿಗಳ ಬೆಲೆ‌ ತುಂಬ ದುಬಾರಿಯಾಗಿದೆ.‌ ಬೆಲೆ‌ ಕೇಳಿಯೇ ಶಾಕ್ ಆಗುತ್ತಿದೆ.‌ ಆದರೆ ಏನು ಮಾಡುವುದಕ್ಕೆ ಆಗುವುದಿಲ್ಲ. ಮಳೆ ಕಾರಣ ಹೇಳುತ್ತಿದ್ದಾರೆ. ನಾವು ರೈತರ ಕಷ್ಟ ಅರ್ಥ ಮಾಡಿಕೊಳ್ಳಬೇಕು. ಬೆಲೆ ಜಾಸ್ತಿಯಾದ್ರು, ಕಡಿಮೆಯಾದ್ರು ತರಕಾರಿಯನ್ನ ಖರೀದಿ ಮಾಡಲೇಬೇಕು. ಮಧ್ಯಮ ವರ್ಗದವರಿಗೆ ಈ ಬೆಲೆ ಏರಿಕೆ ತುಂಬ ಕಷ್ಟ. ಹೀಗಾಗಿ ಇಂದೆ ಬಂದು ತರಾಕಾರಿಗಳ‌ನ್ನ ಖರೀದಿ ಮಾಡುತ್ತಿದ್ದೇವೆ ಅಂತ ಗ್ರಾಹಕರಾದ ಚೈತ್ರ ಅವರು ಹೇಳಿದ್ದಾರೆ.

ಇದನ್ನೂ ಓದಿ: ಈ ವಾರವೂ ತರಕಾರಿಗಳ‌ ಬೆಲೆ ಏರಿಕೆ: ಮೆಣಸಿನಕಾಯಿ, ಬೀನ್ಸ್​ ದರ ಗಗನಕ್ಕೆ!

ಹಿಂಗಾರು ಮಳೆಯ ಆರ್ಭಟದಿಂದಾಗಿ ಜನರು ರೋಸಿ ಹೋಗಿದ್ದು, ಈ ಮಧ್ಯೆ ರೈತರಿಗೆ ಇನ್ನಿಲ್ಲದ ಸಮಸ್ಯೆ ಉಂಟಾಗಿದೆ. ತರಕಾರಿ ಬೆಲೆ ಫುಲ್ ದುಬಾರಿಯಾಗಿದೆ. ಇನ್ನು ದೀಪಾವಳಿ ಹಬ್ಬಕ್ಕೆ ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, ಹಬ್ಬದ ವೇಳೆ ತರಕಾರಿ ಬೆಲೆ ಮತ್ತಷ್ಟು ದುಬಾರಿಯಾಗುವ ಸಾಧ್ಯಾತೆ ಇದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ತೆಲಂಗಾಣದಲ್ಲಿ ಮಿತಿ ಮೀರಿದ ಕೋಳಿಗಳ ಕಳ್ಳತನ
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ದೀಪಕ್ ಅರಸ್​ಗೆ ನಿಜಕ್ಕೂ ಏನಾಗಿತ್ತು? ಮಾಹಿತಿ ನೀಡಿದ ಅಮೂಲ್ಯ ಪತಿ ಜಗದೀಶ್
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಚನ್ನಪಟ್ಟಣಕ್ಕೆ ನಾನೇ ಅಭ್ಯರ್ಥಿ ಅಂತ 53ನೇ ಸಲ ಹೇಳಿದ ಡಿಕೆ ಶಿವಕುಮಾರ್!
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ಶಿಗ್ಗಾವಿ ಮತ್ತು ಸಂಡೂರು ಜೆಡಿಎಸ್ ಮುಖಂಡರ ಜೊತೆ ನಾಳೆ ಮಾತುಕತೆ: ನಿಖಿಲ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ದೀಪಕ್ ಅರಸ್ ನಿಧನ: ಅಂತಿಮ ದರ್ಶನ ಪಡೆದು ಒಡನಾಟ ನೆನಪಿಸಿಕೊಂಡ ತರುಣ್ ಸುಧೀರ್
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಜೈಲಿಗೆ ಬಂದ ಸಹೋದರ, ಪತ್ನಿಯ ಭೇಟಿಗೆ ಬೇಸರದಲ್ಲೇ ಬಂದ ದರ್ಶನ್: ವಿಡಿಯೋ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಅತ್ಯಂತ ದುರದೃಷ್ಟಕರ ರೀತಿಯಲ್ಲಿ ಔಟಾದ ರೋಹಿತ್ ಶರ್ಮಾ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಈಡಿಗೆ ಬೇಕಿರುವ ಕಾಗದಪತ್ರಗಳನ್ನು ಮುಡಾ ಅಧಿಕಾರಿಗಳು ನೀಡುತ್ತಾರೆ: ಸಚಿವ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ಲೋಕಾಯುಕ್ತ ಅಧಿಕಾರಿಗಳಿಂದ ನಿಷ್ಪಕ್ಷ ತನಿಖೆ ಸಾಧ್ಯವಿಲ್ಲ: ಕುಮಾರಸ್ವಾಮಿ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ
ನಿಧಾನ ಓಡಿಸಪ್ಪಾ ಎಂದಿದ್ದಕ್ಕೆ ಒಂದೇ ಏಟಿಗೆ ವೃದ್ಧನನ್ನು ಕೊಂದ ಬೈಕ್​ ಸವಾರ