ಈ ವಾರವೂ ತರಕಾರಿಗಳ‌ ಬೆಲೆ ಏರಿಕೆ: ಮೆಣಸಿನಕಾಯಿ, ಬೀನ್ಸ್​ ದರ ಗಗನಕ್ಕೆ!

ಬರಗಾಲದಿಂದ ಸಾಕಷ್ಟು ಅವಾಂತರಗಳಾಗಿವೆ. ಬರಗಾಲದಿಂದ ಕುಡಿಯಲು ನೀರಿಲ್ಲದೆ ಪರದಾಟ ಒಂದಡೆಯಾದರೆ,‌ ಮತ್ತೊಂದೆಡೆ ನೀರಿಲ್ಲದೆ ಬೆಳೆ ಒಣಗಿಹೋಗುತ್ತಿವೆ. ಇದರಿಂದ ತರಕಾರಿಗಳ‌ ಬೆಲೆ‌ ಗಗನಕ್ಕೆ ಏರಿಕೆಯಾಗಿತ್ತು.‌‌ ಇದೀಗ ಒಂದು ವಾರದಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದ್ದು, ಯಾವುದೇ ತರಕಾರಿಗಳು ಮಾರುಕಟ್ಟೆಗೆ ಬರುತ್ತಿಲ್ಲ.‌ ಹೀಗಾಗಿ ಈ ವಾರವು ತರಕಾರಿಗಳ ಬೆಲೆ‌ ಗಗನಕ್ಕೆ ಏರಿಕೆಯಾಗಿದೆ.‌

ಈ ವಾರವೂ ತರಕಾರಿಗಳ‌ ಬೆಲೆ ಏರಿಕೆ: ಮೆಣಸಿನಕಾಯಿ, ಬೀನ್ಸ್​ ದರ ಗಗನಕ್ಕೆ!
ತರಕಾರಿ
Follow us
Poornima Agali Nagaraj
| Updated By: ವಿವೇಕ ಬಿರಾದಾರ

Updated on: May 21, 2024 | 8:26 AM

ಬೆಂಗಳೂರು, ಮೇ 21: ರಾಜಧಾನಿಯಲ್ಲಿ ಬಿಸಿಲಿನ ಪ್ರಮಾಣ ಕೊಂಚ ಕಡಿಮೆಯಾಗಿ ಕಳೆದ ಒಂದು ವಾರದಿಂದ ಮಳೆ (Rain) ಆಗುತ್ತಿದೆ.‌ ಆದರೆ ತರಕಾರಿಗಳ‌ ಬೆಲೆ‌ (Vegetables Price) ಏರಿಕೆಯಾಗಿದ್ದು,‌ ಕಳೆದ ವಾರಕ್ಕೆ‌‌ ಹೋಲಿಕೆ‌ ಮಾಡಿದರೆ ಈ ವಾರ ತರಕಾರಿ ಬೆಲೆ‌‌ ಬಹಳ ದುಬಾರಿಯಾಗಿದೆ.

ಈ ಬಾರಿ ಬಿಸಿಲಿನ ಪ್ರಮಾಣ ಹೆಚ್ಚಾಗಿ ಇದ್ದಿದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ‌ ಫಸಲು ಬಂದಿಲ್ಲ. ಈ ಮಧ್ಯೆ ಕಳೆದ ಒಂದು ವಾರದಿಂದ ಮಳೆಯು‌ ಬರುತ್ತಿದ್ದು, ಬಂದಂತಹ ಬೆಳೆಯು ಹಾಳಾಗುತ್ತಿದೆ. ಹೀಗಾಗಿ ಬರುವ ಅಲ್ಪ ತರಕಾರಿಗಳಿಗೆ ಹೆಚ್ಚಿನ ಬೆಲೆ ನಿಗದಿ ಮಾಡಿ ಮಾರಾಟ‌ ಮಾಡಲಾಗುತ್ತಿದೆ. ಇನ್ನು ಹೊಸ ಬೆಳೆ ಬರುವವರೆಗೂ ಬೆಲೆ ಇದೇ ರೀತಿ ಹೆಚ್ಚಾಗುವ ಸಾಧ್ಯಾತೆ ಇದ್ದು, ಮುಂದಿನ ದಿನಗಳಲ್ಲಿ ಸರಿಯಾಗಿ ಮಳೆಯಾಗದಿದ್ದರೆ ತರಕಾರಿಗಳ‌ ಬೆಲೆ‌ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ತರಕಾರಿ ಬೆಲೆ

ತರಕಾರಿ ಬೆಲೆ
ತರಕಾರಿ ಹಿಂದಿನಬೆಲೆ (ಕೆಜಿ ರೂ.) ಇಂದಿನಬೆಲೆ (ಕೆಜಿ ರೂ.)
ಗಜ್ಜರಿ 80 82
ಬೀನ್ಸ್ 220 235
ನವಿಲುಕೋಸು 60 78
ಬದನೆಕಾಯಿ 60 70
ದಪ್ಪ ಮೆಣಸಿನಕಾಯಿ 40 72
ಬಟಾಣಿ 140 190
ಬೆಂಡೆಕಾಯಿ 60 66
ಟೊಮಾಟೋ 30 44
ಆಲೂಗೆಡ್ಡೆ 30 49
ಹಾಗಲಕಾಯಿ 60 82
ಸೋರೆಕಾಯಿ 40 56
ಬೆಳ್ಳುಳ್ಳಿ 300 318
ಶುಂಠಿ 180 195
ಪಡವಲಕಾಯಿ 30 47
ಗೋರಿಕಾಯಿ 50 64
ಹಸಿರು ಮೆಣಸಿಕಾಯಿ 80 110
ಬಿಟ್ರೋಟ್ 40 46
ಈರುಳ್ಳಿ 20 42

ಇನ್ನು ತರಕಾರಿ ಬೆಲೆ ತುಂಬ‌ ಜಾಸ್ತಿಯಾಗಿದೆ.‌ ತರಕಾರಿ ಯಾವುದು ಸರಿಯಾಗಿ ಬರುತ್ತಿಲ್ಲ. ಹೊಸ ಬೆಳೆ ಬರುವವರೆಗೂ ಬೆಲೆ‌ ಹೀಗೆ‌ ಮುಂದುವರೆಯಲಿದೆ.‌ ಆದರೆ ತರಕಾರಿಗಳ‌ ಬೆಲೆ ಕೇಳಿ ಗ್ರಾಹಕರು ತರಕಾರಿಗಳನ್ನು ಖರೀದಿ‌ ಮಾಡಲು ಹಿಂದುಮುಂದು ನೋಡುತ್ತಿದ್ದಾರೆ.‌ ಒಂದು ಕೆಜಿ ಖರೀದಿಸುವವರು ಅರ್ಧ ಕೆಜಿ ಖರೀದಿ‌ ಮಾಡುತ್ತಿದ್ದಾರೆ. ಇದರಿಂದ ವ್ಯಾಪಾರ ತುಂಬ ಕಡಿಮೆ ಆಗುತ್ತಿದೆ ಎಂದು ವ್ಯಾಪರಸ್ಥ ಇನಾಯತ್ ಹೇಳಿದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಈ ವಾರವೂ ತರಕಾರಿ, ಹಣ್ಣುಗಳ ಬೆಲೆ ಏರಿಕೆ, ಯಾವುದಕ್ಕೆ ಎಷ್ಟಿದೆ ದರ? ಇಲ್ಲಿದೆ ವಿವರ

ತರಕಾರಿಗಳ ಬೆಲೆ ತುಂಬ ಜಾಸ್ತಿಯಾಗಿದೆ. ತರಕಾರಿಗಳ ಬೆಲೆ‌ ಕೇಳಿಯೇ ಅರ್ಧ ಸುಸ್ತಾಗುತ್ತಿದೆ. ಸದ್ಯ ಎಲ್ಲಾ ತರಕಾರಿಗಳ‌ ಬೆಲೆ 80ರ ಗಡಿದಾಟಿದೆ. ಬೀನ್ಸ್ ಬೆಲೆ ಅಂತು 200 ರ ಗಡಿದಾಟಿದೆ. ಈ ಮಧ್ಯೆ ಸೌತೆಕಾಯಿ ಹಾಗೂ ಬಿಂಬೆಹಣ್ಣಿನ ಬೆಲೆಯು ತುಂಬ ಜಾಸ್ತಿಯಾಗಿ ಹೋಗಿದೆ. ಹೀಗಾದರೆ ತರಕಾರಿಗಳನ್ನ ಖರೀದಿ ಮಾಡುವುದಾದರು ಹೇಗೆ ಹೇಳಿ. ಮನೆಗಳಲ್ಲಿ ಸಮಾರಂಭಗಳನ್ನು ಮಾಡುವುದಾದರು ಹೇಗೆ‌. ತರಕಾರಿಯಿಂದ ಹಿಡಿದು ದಿನಸಿವರೆಗೂ ಎಲ್ಲಾ ಬೆಲೆಯು ತುಂಬ ಜಾಸ್ತಿಯಾಗಿ ಹೋಗಿದೆ. ಹೀಗೆ ಮುಂದುವರೆದರೆ ಬಡಜನರ ಪರಿಸ್ಥಿತಿ ತುಂಬ ಕಷ್ಟವಾಗಲಿದೆ ಎಂದು ಗ್ರಾಹಕ ಶೋಭರಾಣಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ