AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅರಣ್ಯ ಸಂರಕ್ಷಣೆ ತಿದ್ದುಪಡಿ ಮಸೂದೆ ಅಂಗೀಕಾರ: ಹಸಿರಾಗಬೇಕಿದ್ದ ರಾಜ್ಯದ 3 ಲಕ್ಷ ಎಕರೆ ಬಂಜರು ಭೂಮಿಗೆ ಕುತ್ತು?

ರಾಜ್ಯಸಭೆಯಲ್ಲಿ ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದ್ದು, ಇದರಿಂದ ಅರಣ್ಯ ಇಲಾಖೆಯ ಪ್ರಯತ್ನದಿಂದ ಹಿಸರಾಗಬೇಕಿದ್ದ ರಾಜ್ಯದ ಮೂರು ಲಕ್ಷ ಎಕರೆಗೂ ಹೆಚ್ಚಿನ ಬಂಜರು ಭೂಮಿಗೆ ರಕ್ಷಣೆ ಇಲ್ಲದಂತಾಗುತ್ತದೆ ಎಂಬ ಚರ್ಚೆಗಳು ನಡೆಯುತ್ತಿವೆ.

ಅರಣ್ಯ ಸಂರಕ್ಷಣೆ ತಿದ್ದುಪಡಿ ಮಸೂದೆ ಅಂಗೀಕಾರ: ಹಸಿರಾಗಬೇಕಿದ್ದ ರಾಜ್ಯದ 3 ಲಕ್ಷ ಎಕರೆ ಬಂಜರು ಭೂಮಿಗೆ ಕುತ್ತು?
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
|

Updated on:Aug 08, 2023 | 7:50 AM

Share

ಬೆಂಗಳೂರು: ಕಳೆದ ಬುಧವಾರ ರಾಜ್ಯಸಭೆಯಲ್ಲಿ (Rajya Sabha) ಅರಣ್ಯ (ಸಂರಕ್ಷಣೆ) ತಿದ್ದುಪಡಿ ಮಸೂದೆ (Forest (Conservation) Amendment Bill 2023) ಅಂಗೀಕಾರವಾಗಿತ್ತು. ಈ ಮಸೂದೆ ಅಂಗೀಕಾರವಾದ ನಂತರ ರಾಜ್ಯದ ಹಲವಡೆ ಈ ವಿಚಾರವಾಗಿ ಸಾಕಷ್ಟು ಚರ್ಚೆಗಳಾದವು. ಈ ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದರೇ ಅರಣ್ಯ ಇಲಾಖೆಯ (Forest Department) ಪ್ರಯತ್ನದಿಂದ ಹಿಸರಾಗಬೇಕಿದ್ದ ರಾಜ್ಯದ ಮೂರು ಲಕ್ಷ ಎಕರೆಗೂ ಹೆಚ್ಚಿನ ಬಂಜರು ಭೂಮಿಗೆ ರಕ್ಷಣೆ ಇಲ್ಲದಂತಾಗುತ್ತದೆ ಎಂದು ಖಾಸಗಿ ಸುದ್ದಿ ಸಂಸ್ಥೆ ಡೆಕ್ಕನ್​ ಹೆರಾಲ್ಡ್​ ವರದಿ ಮಾಡಿದೆ.

ಕಂದಾಯ ಇಲಾಖೆ ಕರ್ನಾಟಕದಾದ್ಯಂತ ಇರುವ 3.2 ಲಕ್ಷ ಎಕರೆ ಬಂಜರು (ಸಿ ಮತ್ತು ಡಿ ವರ್ಗ) ಭೂಮಿಯನ್ನು ಅರಣ್ಯೀಕರಣಗೊಳಿಸಲು ಅರಣ್ಯ ಇಲಾಖೆಗೆ ನೀಡಿತ್ತು. ಈ 3.2 ಲಕ್ಷ ಬಂಜರು ಭೂಮಿಯನ್ನು ಹಸಿರಾಗಿಸಲು ಅರಣ್ಯ ಇಲಾಖೆ ಸಾಕಷ್ಟು ಪ್ರಯತ್ನ ಮಾಡುತ್ತಿದೆ.

ಈ ಭೂಮಿಯಲ್ಲಿ ಗಿಡ-ಮರ, ತೋಟ ನಿರ್ಮಿಸಲು ಅರಣ್ಯ ಇಲಾಖೆಯು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದೆ. ಈ ಭೂಮಿಯನ್ನು ಅರಣ್ಯ ಪ್ರದೇಶವೆಂದು ಅಧಿಸೂಚಿಸಬಾರದು ಎಂದು ಸರ್ಕಾರ ಷರತ್ತಿನ ಮೇಲೆ ಅರಣ್ಯ ಇಲಾಖೆಗೆ ನೀಡಿದ್ದರೂ, ಇದನ್ನು ಸಂರಕ್ಷಿಸಲು ಸುಪ್ರೀಂ ಕೋರ್ಟ್​ನ ತೀರ್ಪು ಸಹಾಯಕವಾಗಿದೆ. ಆದರೂ ಈ ತೀರ್ಪನ್ನು ತಿದ್ದುಪಡಿ ಮಾಡಲು ಹಲವಾರು ಕೈಗಳು ಹವಣಿಸುತ್ತಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಜೋಯಿಡಾ ಹುಲಿ ಅಭಯಾರಣ್ಯ ವ್ಯಾಪ್ತಿಯಲ್ಲಿ ಅಡಕೆ ಮರಗಳ ಹನನ: ಅರಣ್ಯ ಇಲಾಖೆ ಸಿಬ್ಬಂದಿ ವಿರುದ್ಧ ಪರಿಸರ ಪ್ರೇಮಿಗಳ ಆಕ್ರೋಶ

ಅರಣ್ಯ ಪ್ರದೇಶಗಳನ್ನು ಯಾರೂ ಬೇಕಾಬಿಟ್ಟಿಯಾಗಿ ಅರಣೇತರ ಉದ್ದೇಶಕ್ಕೆ ಬಳಸಬಾರದು, ಅದಕ್ಕೊಂದು ನಿಯಂತ್ರಣ ಇರಲೇಬೇಕು ಎಂಬ ಉದ್ದೇಶದಿಂದ ಜಾರಿಯಾದ 1980ರ ಕಾಯ್ದೆಯು ಜಾರಿಗೆ ತರಲಾಯಿತು. ಐತಿಹಾಸಿಕ ಅರಣ್ಯ ಸಂರಕ್ಷಣೆ ಕಾಯ್ದೆ (1980) ಜಾರಿಗೆ ಬರುವ ಮುನ್ನ, ಅಂದರೆ 1950ರಿಂದ 1980ರವರೆಗೆ ದೇಶದ ಸುಮಾರು 42 ಲಕ್ಷ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಅರಣೇತರ ಉದ್ದೇಶಕ್ಕೆ ಬಳಸಲಾಗುತ್ತಿತ್ತು. ಈ ಕಾಯ್ದೆ ಜಾರಿಗೆ ಬಂದ ನಂತರದ ನಲವತ್ತು ವರ್ಷಗಳಲ್ಲಿ ಈ ಪ್ರಮಾಣ 15 ಲಕ್ಷ ಹೆಕ್ಟೇರಿಗೆ ಇಳಿಯಿತು.

ಕಾನೂನು ಭದ್ರತೆಯಿಲ್ಲದ ಅರಣ್ಯ ಪ್ರದೇಶಗಳಿಗೆ 1995ಕ್ಕೂ ಮೊದಲು ರಕ್ಷಣೆ ಇರಲಿಲ್ಲ. ಕೇರಳದ ಟಿ.ಎನ್.ಗೋಧಾವರ್ಮನ್ ಎಂಬುವರು ಅಕ್ರಮ ಮರಕಡಿತಲೆ ವಿರುದ್ಧ ಸುಪ್ರೀಂ ಕೋರ್ಟ್ ಮೊರೆ ಹೋದಾಗ ಅವರ ಅಹವಾಲನ್ನು ಪರಿಗಣಿಸಿದ ನ್ಯಾಯಾಲಯ 1996ರಲ್ಲಿ ಕಾನೂನಿನ ರಕ್ಷಣೆಗೆ ಒಳಪಡದ ಯಾವುದೇ ಅರಣ್ಯ ಪ್ರದೇಶವನ್ನು, ‘ಅರಣ್ಯ’ ಎಂಬ ಪದವನ್ನು ನಿಘಂಟಿನಲ್ಲಿ ವಿವರಿಸಿದಂತೆ ಅರ್ಥೈಸಿಕೊಂಡು, ಅದಕ್ಕೆ ಕಾನೂನುಬದ್ಧವಾದ ರಕ್ಷಣೆ ನೀಡಬೇಕು ಎಂದು ತೀರ್ಪು ನೀಡಿತು.

ಆದರೆ ಅರಣ್ಯ ಸಂರಕ್ಷಣೆ ಕಾಯ್ದೆ- 1980 ದೇಶದ ಅಭಿವೃದ್ಧಿಯ ವೇಗಕ್ಕೆ ತಡೆ ಒಡ್ಡುತ್ತದೆ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ಅದಕ್ಕೆ ತಿದ್ದುಪಡಿ ತಂದಿದೆ. ಈ ತಿದ್ದುಪಡಿ ಮಸೂದೆಯು ಕಾಯ್ದೆಯಾಗಿ ಜಾರಿಗೆ ತಂದರೆ, ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ ಹೊರಗಿನ ಅರಣ್ಯ ಪ್ರದೇಶಗಳನ್ನು ಅರಣೀತದ ಉದ್ದೇಶಕ್ಕೆ ಬಳಸಲು ಯಾವುದೇ ಅಡ್ಡಿ ಇರುವುದಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:49 am, Tue, 8 August 23