ನಾನು ಲೋಕಾಯುಕ್ತಕ್ಕೆ ವಹಿಸಿ ಪಾರದರ್ಶಕತೆ ತೋರಿದ್ದೆ; ನಿಮ್ಮ ಕಿಕ್‌ಬ್ಯಾಕ್‌ ಬಗ್ಗೆ ಏನ್ಮಾಡ್ತೀರಿ ಯಡಿಯೂರಪ್ಪ? ಕುಮಾರಸ್ವಾಮಿ​ ಪ್ರಶ್ನೆ

BS Yediyurappa: 2006ರಲ್ಲಿ ಸಿಎಂ ಆಗಿದ್ದ ನನ್ನ ವಿರುದ್ಧ ಬಿಜೆಪಿ ನಾಯಕರೇ ₹150ಕೋಟಿ ಗಣಿ ಲಂಚ ಆರೋಪ ಮಾಡಿದ್ದರು. ಸರ್ಕಾರದ ಪಾಲುದಾರ ಪಕ್ಷದವರೇ ದೂರಿದ್ದರಿಂದ ನಾನು ಅದನ್ನು ಲೋಕಾಯುಕ್ತಕ್ಕೆ ವಹಿಸಿ ಪಾರದರ್ಶಕತೆ ಕಾದುಕೊಂಡಿದ್ದೆ. ಈಗಿನ ಸರ್ಕಾರದ ವಿರುದ್ಧ ಸ್ವಪಕ್ಷೀಯರೇ ₹2000ಕೋಟಿ ನೀರಾವರಿ ಕಿಕ್‌ಬ್ಯಾಕ್‌ ಆರೋಪ ಮಾಡಿದ್ದಾರೆ. ಈಗ ತನಿಖೆ ಯಾಕಿಲ್ಲ? 

ನಾನು ಲೋಕಾಯುಕ್ತಕ್ಕೆ ವಹಿಸಿ ಪಾರದರ್ಶಕತೆ  ತೋರಿದ್ದೆ; ನಿಮ್ಮ ಕಿಕ್‌ಬ್ಯಾಕ್‌ ಬಗ್ಗೆ ಏನ್ಮಾಡ್ತೀರಿ ಯಡಿಯೂರಪ್ಪ? ಕುಮಾರಸ್ವಾಮಿ​ ಪ್ರಶ್ನೆ
ಎಚ್​ ಡಿ ಕುಮಾರಸ್ವಾಮಿ
Follow us
TV9 Web
| Updated By: ಸಾಧು ಶ್ರೀನಾಥ್​

Updated on:Jun 19, 2021 | 1:17 PM

ಬೆಂಗಳೂರು: ಕರ್ನಾಟಕ ಬಿಜೆಪಿ ಉಸ್ತುವಾರಿ ನಾಯಕ ಅರುಣ್​ ಸಿಂಗ್​ ಅವರನ್ನು ಭೇಟಿ ಮಾಡಿ ಬಿಜೆಪಿ ಕಚೇರಿಯಿಂದ ಒಂದು ಕಾಲನ್ನು ಹೊರಗೆಯಿಟ್ಟ ಮೇಲ್ಮನೆ ಸದಸ್ಯ ಹೆಚ್​ ವಿಶ್ವನಾಥ್​ ಅವರು 2000 ಕೋಟಿ ರೂಪಾಯಿ ನೀರಾವರಿ ಕಿಕ್‌ಬ್ಯಾಕ್‌ ಆರೋಪದ ಬಾಂಬ್​ ಅನ್ನು ಒಳಗೆ ಕಚೇರಿಯಲ್ಲಿದ್ದ ನಾಯಕತ್ತ ಒಗೆದು ಹೋದರು. ಅದು ಪಕ್ಷದ ನಾಯಕರ ಮಧ್ಯೆ ಸದ್ಯಕ್ಕೆ ಸಿಡಿದಿಲ್ಲವಾದರೂ ಸುಂಟರಗಾಳಿಯಂತೆ ಇನ್ನೂ ಸುತ್ತುತ್ತಲೇ ಇದೆ. ಸ್ವತಃ ಮುಖ್ಯಮಂತ್ರಿ ಬಿ ಎಸ್​ ಯಡಿಯೂರಪ್ಪ ಅವರೇ ಅಂಥದ್ದೇನೂ ಬಿಡಿಗಾಸೂ ಇಲ್ಲ. ಎಲ್ಲಾ ಪಾರದರ್ಶಕವಾಗಿದೆ ಎಂದು ಮಾರುತ್ತರ ಕೊಟ್ಟಿದ್ದಾರೆ. ಆದರೂ ಪ್ರತಿಪಕ್ಷಗಳು ಈ ಬಗ್ಗೆ ಸದ್ದು ಮಾಡುತ್ತಾ ಇವೆ. ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಈ ಬಗ್ಗೆ ಟ್ವೀಟ್​ ಮಾಡಿದ್ದು ತಮ್ಮದೇ ನಿದರ್ಶನ ಕೊಟ್ಟು, ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಯಲಿ ಎಂದು ಆಶಿಸಿದ್ದಾರೆ. 

ಜೆಡಿಎಸ್ ನಾಯಕ ಹೆಚ್​ ಡಿ ಕುಮಾರಸ್ವಾಮಿ ಅವರ ಸರಣಿ ಟ್ವೀಟ್ ಸಾರಾಂಶ ಹೀಗಿದೆ:

2006ರಲ್ಲಿ ಸಿಎಂ ಆಗಿದ್ದ ನನ್ನ ವಿರುದ್ಧ ಬಿಜೆಪಿ ನಾಯಕರೇ ₹150ಕೋಟಿ ಗಣಿ ಲಂಚ ಆರೋಪ ಮಾಡಿದ್ದರು. ಸರ್ಕಾರದ ಪಾಲುದಾರ ಪಕ್ಷದವರೇ ದೂರಿದ್ದರಿಂದ ನಾನು ಅದನ್ನು ಲೋಕಾಯುಕ್ತಕ್ಕೆ ವಹಿಸಿ ಪಾರದರ್ಶಕತೆ ಕಾದುಕೊಂಡಿದ್ದೆ. ಈಗಿನ ಸರ್ಕಾರದ ವಿರುದ್ಧ ಸ್ವಪಕ್ಷೀಯರೇ ₹2000ಕೋಟಿ ನೀರಾವರಿ ಕಿಕ್‌ಬ್ಯಾಕ್‌ ಆರೋಪ ಮಾಡಿದ್ದಾರೆ. ಈಗ ತನಿಖೆ ಯಾಕಿಲ್ಲ?

ರಾಕ್ಷಸ ಸರ್ಕಾರವೊಂದನ್ನು ಕೆಡವಿ ಅತ್ಯಂತ ಸಜ್ಜನ, ಸ್ವಚ್ಛ ಸರ್ಕಾರವನ್ನು ಪ್ರತಿಷ್ಠಾಪಿಸಿದವರೇ ಈ ಆರೋಪ ಮಾಡಿದ್ದಾರೆ. ಹೀಗಾಗಿ ಈ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕು. ಸಿಎಂ @BSYBJP 2006ರಲ್ಲಿ ನಾನು ಇಟ್ಟಂಥ ಹೆಜ್ಜೆಯನ್ನೇ ಇಟ್ಟು ತಾವು ಪ್ರಾಮಾಣಿಕ ಎಂಬುದನ್ನು ಸಾಬೀತು ಮಾಡಬೇಕು. ಹೀಗಾಗಿ ಕೂಡಲೇ ಆರೋಪವನ್ನು ತನಿಖೆಗೆ ಒಪ್ಪಿಸಬೇಕು.

ಈ ಭ್ರಷ್ಟಾಚಾರದ ಆರೋಪದಲ್ಲಿ ಅನ್ಯರ ಹಸ್ತಕ್ಷೇಪದ ಆರೋಪವಿದೆ. ಆಡಳಿತದಲ್ಲಿ, ಅದೂ ಸರ್ಕಾರದ ಹಂತದಲ್ಲಿ ಮುಖ್ಯಮಂತ್ರಿಗಳ ಕುಟುಂಬಸ್ಥರು ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಜನರ ಸೇವೆಯಲ್ಲಿ ತೊಡಗಿರುವ ಸರ್ಕಾರದಲ್ಲಿ ಸಂಬಂಧವೇ ಇಲ್ಲದವರ ಹಸ್ತಕ್ಷೇಪ ಸರಿಯಲ್ಲ. ಹೀಗಾಗಿ ಅನ್ಯರ ಹಸ್ತಕ್ಷೇಪದ ವಿಚಾರದಲ್ಲಿಯೂ ಗಂಭೀರ ತನಿಖೆ ನಡೆಯಬೇಕು.

(Former chief minister hd kumaraswamy tweet demands inquiry on rs 2000 crore kick back in irrigation department)

Published On - 1:13 pm, Sat, 19 June 21