ಎಸ್​ಸಿಪಿ, ಟಿಎಸ್​ಪಿ ಹಣದ ಮೇಲೆ ಕಾಂಗ್ರೆಸ್ ವಕ್ರದೃಷ್ಟಿ, ಸಿಎಂರಿಂದ ದಲಿತರ ಹಿತ ಕಡೆಗಣನೆ: ಮಾಜಿ ಸಿಎಂ ಬೊಮ್ಮಾಯಿ

| Updated By: ವಿವೇಕ ಬಿರಾದಾರ

Updated on: Aug 04, 2023 | 1:57 PM

ದಲಿತರು ಏನೆ ಮಾಡಿದರೂ ಮತ ನೀಡುತ್ತಾರೆ ಎಂದು ತಿಳಿದಿದ್ದೀರಾ ? ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಲಿತರ ಪರ ಅಂತ ಹೇಳುತ್ತಾರೆ. ಆದರೆ ಸಿದ್ದರಾಮಯ್ಯ ದಲಿತರ ಹಿತ ಕಡೆಗಣಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದರು.

ಎಸ್​ಸಿಪಿ, ಟಿಎಸ್​ಪಿ ಹಣದ ಮೇಲೆ ಕಾಂಗ್ರೆಸ್ ವಕ್ರದೃಷ್ಟಿ, ಸಿಎಂರಿಂದ ದಲಿತರ ಹಿತ ಕಡೆಗಣನೆ: ಮಾಜಿ ಸಿಎಂ ಬೊಮ್ಮಾಯಿ
ಬಿಜೆಪಿ ಪ್ರತಿಭಟನೆ
Follow us on

ಬೆಂಗಳೂರು: ದಲಿತರು ಏನೇ ಮಾಡಿದರೂ ಮತ ನೀಡುತ್ತಾರೆ ಎಂದು ತಿಳಿದಿದ್ದೀರಾ ? ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ದಲಿತರ ಪರ ಅಂತ ಹೇಳುತ್ತಾರೆ. ಆದರೆ ಸಿದ್ದರಾಮಯ್ಯ ದಲಿತರ ಹಿತ ಕಡೆಗಣಿಸಿದ್ದಾರೆ. ಎಸ್​ಸಿಪಿ (SCP), ಟಿಎಸ್​ಪಿ (TSP) ಹಣದ ಮೇಲೆ ಕಾಂಗ್ರೆಸ್ (Congress) ವಕ್ರದೃಷ್ಟಿ ಬಿದ್ದಿದೆ. ಸರ್ಕಾರ ಶಕ್ತಿ ಯೋಜನೆಗೆ ಎಸ್​ಸಿಪಿ, ಟಿಎಸ್​ಪಿ ಹಣ ಬಳಸುತ್ತಿದ್ದಾರೆ. ಬಸ್ ಹತ್ತುವವರನ್ನು ನೀವು ಎಸ್‌ಸಿ, ಎಸ್‌ಟಿ ಎಂದು ಕೇಳುತ್ತೀರಾ? ಯಾವ ಗೃಹಿಣಿ ಎಸ್‌ಸಿ, ಯಾವ ಗೃಹಿಣಿ ಎಸ್‌ಟಿ ಎಂದು ಗುರುತಿಸುತ್ತೀರಿ ? ದಲಿತರಿಗೆ 11 ಸಾವಿರ ಕೋಟಿ ರೂ. ಅನುದಾನ ಕೊರತೆ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ (Basavaraj Bommai) ವಾಗ್ದಾಳಿ ಮಾಡಿದರು.

ಎಸ್​ಸಿಪಿ, ಟಿಎಸ್​ಪಿ ಯೋಜನೆಗಳಿಗೆ ಮೀಸಲಿಟ್ಟ ಹಣವನ್ನು ರಾಜ್ಯ ಸರ್ಕಾರ ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿರುವುದನ್ನು ವಿರೋಧಿಸಿ ಫ್ರೀಡಂ ಪಾರ್ಕ್​​ನಲ್ಲಿ ಇಂದು (ಜು.04) ಬಿಜೆಪಿ ಪ್ರತಿಭಟನೆ ನಡೆಸಿತು. ಈ ವೇಳೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ ಈ ಹಣ ಇದ್ದಿದ್ದರೆ ಸಾವಿರಾರು ಗಂಗಾ ಕಲ್ಯಾಣ, ವಸತಿ ನಿಲಯ ನಿರ್ಮಾಣ ಮಾಡಬಹುದಿತ್ತು. ಮತ್ತು ಸ್ವಯಂ ಉದ್ಯೋಗ ಆಗುತ್ತಿತ್ತು. ಇದೀಗ ದಲಿತರಿಗೆ 11 ಸಾವಿರ ಕೋಟಿ ರೂ. ಕೊರತೆ ಆಗಿದೆ. ಸಾಲ ಮಾಡಿ ಗ್ಯಾರಂಟಿಗೆ ಹಣ ನೀಡಬೇಕಿತ್ತು. ದಲಿತರ ಹಣವನ್ನು ಗ್ಯಾರಂಟಿಗಳಲ್ಲಿ ಬಳಕೆ ಮಾಡಿ ಯೋಜನೆಗಳನ್ನು ಹೇಗೆ ಅದೇ ಸಮುದಾಯಕ್ಕೆ ತಲುಪಿಸ್ತೀರಿ? ಯಾರು ದಲಿತರು, ಯಾರು ದಲಿತರು ಅಲ್ಲ ಅಂತ ಗ್ಯಾರಂಟಿ ಫಲಾನುಭವಿಗಳಲ್ಲಿ ಹೇಗೆ ಗುರಿತಿಸುತ್ತೀರಿ ? ಸರ್ಕಾರ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಶಾಸಕ ಮಾಡಾಳ್​ ಪುತ್ರ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದೆ ಬಿಜೆಪಿ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿ: ಬೊಮ್ಮಾಯಿಗೆ ತಿವಿದ ಸಿದ್ದಾರಾಮಯ್ಯ

ಬಿಡಿಎ ಅಧಿಕಾರಿಗಳಿಗೆ 250 ಕೋಟಿ ರೂ. ಸಂಗ್ರಹಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ​ ಎಂಬ ಮಾಜಿ ಸಿಎಂ ಹೆಚ್​. ಡಿ ಕುಮಾರಸ್ವಾಮಿ ಆರೋಪದ ವಿಚಾರವಾಗಿ ಮಾತನಾಡಿದ ಅವರು ಹೆಚ್​ ಡಿ ಕುಮಾರಸ್ವಾಮಿ ಬಳಿ ಅದರ ಬಗ್ಗೆ ವಿವರವಾದ ಮಾಹಿತಿ ಇರಬಹುದು. ಅದರ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ ಅವರಿಗೆ ಡಿಕೆ ಶಿವಕುಮಾರ್​ ಅವರು ಉತ್ತರ ಕೊಡಲಿ ಎಂದರು.

ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆ ನಡೆಯುತ್ತಿದೆ ಎಂಬ ಆರೋಪ ವಿಚಾರವಾಗಿ ಮಾತನಾಡಿದ ಅವರು ಹೆಚ್​ ಡಿ ಕುಮಾರಸ್ವಾಮಿ ಅವರಿಗೆ ಸಿಕ್ಕ ಮಾಹಿತಿ ಮೇಲೆ ಅವರು ಮಾತನಾಡಿದ್ದಾರೆ ಅದು ಸತ್ಯ. ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮೇಲೆ ದಂಧೆ ನಡಿತಿದೆ. ಎಲ್ಲ ಇಲಾಖೆಗಳಲ್ಲೂ ದಂಧೆ ನಡಿತಿದೆ. ಸಿಎಂ ಇದ್ಯಾವುದಕ್ಕೂ ಕಿಮ್ಮತ್ತು ಕೊಡುತ್ತಿಲ್ಲ ಎಂದು ಚಾಟಿ ಬೀಸಿದರು.

ಇನ್ನು ಪ್ರತಿಭಟನೆಯಲ್ಲಿ ವಿಧಾನಪರಿಷತ್ ಸದಸ್ಯರಾದ ಎನ್.ರವಿಕುಮಾರ್, ಛಲವಾದಿ ನಾರಾಯಣಸ್ವಾಮಿ, ಕೋಟ ಶ್ರೀನಿವಾಸ್ ಪೂಜಾರಿ ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:32 pm, Fri, 4 August 23