ಯಡಿಯೂರಪ್ಪ ಎ1 ಆರೋಪಿ; ನೀರಾವರಿ ಇಲಾಖೆಯೊಂದರಲ್ಲೇ ಕೋಟಿ ಕೋಟಿ ಲೂಟಿ: ಮಾಜಿ ಸಚಿವ ಹೆಚ್‌.ಡಿ.ರೇವಣ್ಣ

ಯಡಿಯೂರಪ್ಪ ಎ1 ಆರೋಪಿ; ನೀರಾವರಿ ಇಲಾಖೆಯೊಂದರಲ್ಲೇ ಕೋಟಿ ಕೋಟಿ ಲೂಟಿ: ಮಾಜಿ ಸಚಿವ ಹೆಚ್‌.ಡಿ.ರೇವಣ್ಣ
ಮಾಜಿ ಸಚಿವ ಹೆಚ್.ಡಿ.ರೇವಣ್ಣ

HD Revanna: ರಾಜ್ಯದ ಜನರ ತೆರಿಗೆ ಹಣದಿಂದ ವ್ಯಾಕ್ಸಿನ್ ಖರೀದಿ ಮಾಡಿರೋದು ಅಲ್ವಾ? ಲಸಿಕೆ ಖರೀದಿಸಲು ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಮನೆಯಿಂದ ಹಣ ಕೊಡ್ತಿದ್ದಾರಾ? ಎಂದು ಹೆಚ್‌.ಡಿ.ರೇವಣ್ಣ ಪ್ರಶ್ನಿಸಿದ್ದಾರೆ.

TV9kannada Web Team

| Edited By: sadhu srinath

Jun 05, 2021 | 4:01 PM

ಹಾಸನ: ರಾಜ್ಯದ ನೀರಾವರಿ ಇಲಾಖೆಯೊಂದರಲ್ಲೇ ಕೋಟಿ ಕೋಟಿ ಲೂಟಿ ನಡೆದಿದೆ. ಇದಕ್ಕೆ ಪೂರಕ ದಾಖಲೆ ನನ್ನ ಬಳಿ ಇದೆ; ಎಲ್ಲವನ್ನೂ ಬಿಡುಗಡೆ ಮಾಡುವೆ ಎಂದು ಹಾಸನದಲ್ಲಿ JDS ಮಾಜಿ ಸಚಿವ ಹೆಚ್‌.ಡಿ. ರೇವಣ್ಣ ಗುಡುಗಿದ್ದಾರೆ. ಇದೊಂದು ಲೂಟಿ ಸರ್ಕಾರ, ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನೇ ಮೊದಲ ಆರೋಪಿಯನ್ನಾಗಿ ಮಾಡಿ, ಹೋರಾಟ ಮಾಡುವೆ ಎಂದು ಹೆಚ್‌.ಡಿ. ರೇವಣ್ಣ ಘೋಷಿಸಿದ್ದಾರೆ.

ಹಾಸನ ಜಿಲ್ಲೆಯಲ್ಲಿ 3 ತಿಂಗಳಲ್ಲಿ 60 ಸಾವಿರ ಜನರಿಗೆ ಸೋಂಕು ತಗುಲಿದೆ. ಜಿಲ್ಲೆಯ ಬಗ್ಗೆ ಸರ್ಕಾರಕ್ಕೆ ನಿರ್ಲಕ್ಷ್ಯವಿದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿರುವ ಹೆಚ್‌.ಡಿ. ರೇವಣ್ಣ ಜಿಲ್ಲೆಯಲ್ಲಿ 2ನೇ ಅಲೆಯಲ್ಲಿ ಸಾವಿನ ಪ್ರಮಾಣ ಶೇ. 1.97 ರಷ್ಟಿದೆ. ಜಿಲ್ಲೆಯಲ್ಲಿ ವ್ಯಾಕ್ಸಿನ್ ನೀಡುವುದರಲ್ಲೂ ರಾಜಕೀಯ ಶುರುವಾಗಿದೆ. ಲಸಿಕೆ ವಿಚಾರದಲ್ಲಿ ರಾಜಕೀಯ ಬೇಡವೆಂದು ಮೊದಲೇ ಹೇಳಿದ್ದೆ ಎಂದು ಶಾಸಕ ಪ್ರೀತಮ್‌ಗೌಡ ವಿರುದ್ಧ ರೇವಣ್ಣ ಪರೋಕ್ಷವಾಗಿ ಕಿಡಿಕಾರಿದ್ದಾರೆ.

ಆಟೋ ಚಾಲಕರಿಗೆ ಒಂದೇ ದಿನ ಲಸಿಕೆ ನೀಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೆಡಿಎಸ್‌ ಮಾಜಿ ಸಚಿವ ರೇವಣ್ಣ ಅವರು ಸರ್ಕಾರದ ಲಸಿಕೆ ಹಾಕಿಸಿದ ಮೇಲೆ ಅವರ ಫೋಟೋ ಹಾಕಿಸಿಕೊಳ್ಳೋದೇಕೆ? ರಾಜ್ಯದ ಜನರ ತೆರಿಗೆ ಹಣದಿಂದ ವ್ಯಾಕ್ಸಿನ್ ಖರೀದಿ ಮಾಡಿರೋದು ಅಲ್ವಾ? ಲಸಿಕೆ ಖರೀದಿಸಲು ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಮನೆಯಿಂದ ಹಣ ಕೊಡ್ತಿದ್ದಾರಾ? ಎಂದು ಹೆಚ್‌.ಡಿ.ರೇವಣ್ಣ ಪ್ರಶ್ನಿಸಿದ್ದಾರೆ.

(Former Karnataka minister jds leader HD Revanna says cm bs yediyurappa is a1 looter in karnataka)

ಕಾವೇರಿ ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು ಹಲ್ಕಾ ನನ್ಮಕ್ಕಳ ಎಂದು ಗುಡುಗಿದ ಹೆಚ್​.ಡಿ.ರೇವಣ್ಣ

Follow us on

Related Stories

Most Read Stories

Click on your DTH Provider to Add TV9 Kannada