ನಮ್ಮ ಅವಧಿಯಲ್ಲಿ ಮತಾಂತರ ಕಾಯ್ದೆ ಬಗ್ಗೆ ಚರ್ಚೆಯೇ ಆಗಿಲ್ಲ, ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲು ಕಾಂಗ್ರೆಸ್ ಒಪ್ಪುವುದಿಲ್ಲ ಎಂದ ಎಚ್ ಆಂಜನೇಯ
ಸದನದಲ್ಲಿ ಕಾಯ್ದೆಯ ಬಗ್ಗೆ ಚರ್ಚೆ ವೇಳೆ ಸಿದ್ದರಾಮಯ್ಯ ಸರ್ಕಾರದ ವೇಳೆಯಲ್ಲಿಯೇ ಮತಾಂತರ ನಿಷೇಧ ಮಸೂದೆಯ ಬಗ್ಗೆ ಚರ್ಚೆಯಾಗಿತ್ತು ಎನ್ನುವ ಮಾತು ಬಂದಿದೆ. ಈ ಬಗ್ಗೆ ಮಾಜಿ ಸಚಿವ ಎಚ್ ಆಂಜನೇಯ ಗುಡುಗಿದ್ದಾರೆ.

ರಾಜ್ಯದಲ್ಲಿ ಮತಾಂತರ ಕಾಯ್ದೆ ಜಾರಿ ವಿಚಾರದಲ್ಲಿ ಪ್ರತಿಪಕ್ಷಗಳ ವಿರೋಧದ ಮಾತುಗಳು ಜೋರಾಗಿಯೇ ಕೇಳಿಬರುತ್ತಿದೆ. ಸದನದಲ್ಲಿ ಕಾಯ್ದೆಯ ಬಗ್ಗೆ ಚರ್ಚೆ ವೇಳೆ ಸಿದ್ದರಾಮಯ್ಯ ಸರ್ಕಾರದ ವೇಳೆಯಲ್ಲಿಯೇ ಮತಾಂತರ ನಿಷೇಧ ಮಸೂದೆಯ ಬಗ್ಗೆ ಚರ್ಚೆಯಾಗಿತ್ತು ಎನ್ನುವ ಮಾತು ಬಂದಿದೆ. ಈ ಬಗ್ಗೆ ಮಾಜಿ ಸಚಿವ ಎಚ್ ಆಂಜನೇಯ ಗುಡುಗಿದ್ದಾರೆ. ನಮ್ಮ ಅವಧಿಯಲ್ಲಿ ಮತಾಂತರ ಕಾಯ್ದೆ ಬಗ್ಗೆ ಚರ್ಚೆಯೇ ಆಗಿಲ್ಲ. ನಾವೇನಾದ್ರೂ ಮತಾಂತರ ಕಾಯ್ದೆ ಜಾರಿಗೆ ತಂದಿದ್ದೀವಾ. ನನಗಂತೂ ಮತಾಂತರ ವಿಷಯ ಬಂದಿದ್ದೇ ನೆನಪಿಲ್ಲ ನಾವು ಚರ್ಚೆ ಮಾಡಿದ್ದರೆ ಖಂಡಿತ ನೆನಪಿರುತ್ತಿತ್ತು. ಚರ್ಚೆಯೇ ಮಾಡಿಲ್ಲ ಅಂದ ಮೇಲೆ ಕಾಯ್ದೆ ಎಲ್ಲಿಂದ ತರಲು ಸಾಧ್ಯ ಕಾಯ್ದೆ ತರಲು ಹೊರಟವರು ನಾವಲ್ಲ. ಕಾಂಗ್ರೆಸ್ ನವರಿಗೆ ಆಡಳಿತದ ಅನುಭವ ಇದೆ. ನಾವು ಜನಾಭಿಪ್ರಾಯ ಕ್ಕೆ ಮನ್ನಣೆ ಕೊಡುವವರು. ನಾವು ಇಂಥಹ ಕಾನೂನೆಲ್ಲ ತರಲ್ಲ, ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು ಅಂತ ಗೊತ್ತು. ಮತಾಂತರ ಕಾಯ್ದೆ ಒಂದು ಧರ್ಮ ಟಾರ್ಗೆಟ್ ಮಾಡಲು ತಂದಿದ್ದಾರೆ ಇದಕ್ಕೆ ಸಂಪೂರ್ಣ ವಿರೋಧವಿದೆ. ದಲಿತರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆದರೆ ಸವಲತ್ತು ಸಿಗಲ್ಲ ಅನ್ನೋದು ಸರಿಯಲ್ಲ. ಅಂಬೇಡ್ಕರ್ ಮತಾಂತರ ಆದಾಗಲೇ ಮತಾಂತರ ಆದವರಿಗೆಲ್ಲ ಸೌಲಭ್ಯ ಕೊಡಬೇಕು ಅಂತ ನಿಯಮ ಆಗಿದೆ ಕಾಯ್ದೆಯನ್ನು ವಾಪಸ್ ಪಡೆಯಲೇಬೇಕು. ಜನ ವಿರೋಧಿ ಕಾಯ್ದೆಗಳನ್ನು ಜಾರಿಗೆ ತರಲು ಕಾಂಗ್ರೆಸ್ ಒಪ್ಪುವುದಿಲ್ಲ ಎಂದು ಹೇಳಿದ್ದಾರೆ.
ಡಿಕೆಶಿಗೆ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ಮತಾಂತರ ನಿಷೇಧ ಕಾಯ್ದೆ ರದ್ದು ಮಾಡುತ್ತೇವೆ ಎಂದ ಡಿಕೆ ಶಿವಕುಮಾರ್ ವಿರುದ್ಧ ಸಚಿವೆ ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ. ಡಿಕೆಶಿ ಎಲ್ಲಾ ಕಾಯ್ದೆಯನ್ನು ತೆಗೆಯುತ್ತೇವೆ ಎಂದಿದ್ದಾರೆ. ಕಾಶ್ಮೀರದ 370ನೇ ವಿಧಿ, ಸಿಎಎ ಕಾಯ್ದೆ ತೆಗಿತೀವಿ ಎಂದಿದ್ದಾರೆ. ಮತಾಂತರ ನಿಷೇಧ ಕಾಯ್ದೆ ಗೋಹತ್ಯಾ ನಿಷೇಧ ಕಾಯ್ದೆ ತೆಗಿತೀನಿ ಎಂದಿದ್ದಾರೆ. ಡಿಕೆ ಶಿ ಮತ್ತು ಕಾಂಗ್ರೆಸ್ ಎಲ್ಲಾ ಕಾಯ್ದೆಗಳನ್ನು ತೆಗೆಯುವುದರಲ್ಲೇ ಇದೆ. ಜಾತಿವಾದ ಧರ್ಮವಾದ ಮಾಡಿದ್ದು ಕಾಂಗ್ರೆಸ್ ಕಾಶ್ಮೀರದಲ್ಲಿ ಬೆಂಕಿ ಹಚ್ಚಲು ಕಾರಣಕರ್ತರಾದವರು ಕಾಂಗ್ರೆಸ್ಸಿಗರು. ಕಾಯ್ದೆಗಳನ್ನು ತೆಗೆಯುವ ಅವಕಾಶ ರಾಜ್ಯದ ಜನ ಕೊಡಲ್ಲ. ಕಾಂಗ್ರೆಸ್ಸನ್ನು ಎಲ್ಲಿಡಬೇಕು ಜನ ಅಲ್ಲೇ ಇಟ್ಟಿದ್ದಾರೆ. ಕಾಂಗ್ರೆಸ್ ಇನ್ನಷ್ಟು ಹೀನಸ್ಥಿತಿಗೆ ಹೋಗುತ್ತದೆ. ಡಿಕೆಶಿ ಸಿದ್ಧರಾಮಯ್ಯ ನೀವು ನಿಮ್ಮ ಕಣ್ಣಿನಲ್ಲಿ ಅದನ್ನು ನೋಡುತ್ತೀರಿ ಎಂದು ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ಡಿಕೆಶಿ ಹೇಳಿಕೆಗೆ ಸಿಟಿ ರವಿ ವ್ಯಂಗ್ಯ ಇನ್ನೂ 2023ಕ್ಕೆ ಕಾಂಗ್ರೆಸ್ ಸರ್ಕಾರ ಬರುತ್ತೆ, ಆ ಬಳಿಕ ಕಾಯ್ದೆಗಳನ್ನು ಹಿಂಪಡೆಯುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿಕೆಗೆ ಸಿ.ಟಿ ರವಿ ವ್ಯಂಗ್ಯವಾಡಿದ್ದಾರೆ. ಚುನಾವಣೆಯಲ್ಲಿ ಗೆಲ್ಲೋದು ಲ್ಯಾಂಡ್ ಅಗ್ರಿಮೆಂಟ್ ಗೆ ಸೈನ್ ಹಾಕಿಸಿಕೊಂಡಂಗೆ ಅನ್ಕೊಂಡಿದ್ದಾರೆ. ತಿರುಕನ ಕನಸು ಕಾಣ್ತಿದ್ದಾರೆ ಅಂದ್ರೆ ಬೇಜಾರಾಗುತ್ತೆ. ಆ ರೀತಿ ನಾನು ಹೇಳಲ್ಲ ಎಂದುಸಿಟಿ ರವಿ ಟಾಂಗ್ ಕೊಟ್ಟಿದ್ದಾರೆ. ಚುನಾವಣೆ ಆಗ್ಬೇಕು, ಜನ ವೋಟ್ ಹಾಕಬೇಕು, ಚರ್ಚೆಯಾಗಬೇಕು. ಆಮೇಲೆ ತಾನೇ ಯಾವ ಸರ್ಕಾರ ಬರುತ್ತೆ ಅಂತ ತೀರ್ಮಾನ ಮಾಡುವುದು.ಅವರು ಹೇಳಿರೋದು ನಿಜವಾದರೆ ಚುನಾವಣೆಯೇ ಬೇಡ. ನೇರವಾಗಿ ಅವರನ್ನೇ ಮುಖ್ಯಮಂತ್ರಿ ಅಂತ ಘೋಷಣೆ ಮಾಡಬಹುದು. ಕಾಂಗ್ರೆಸ್ಸಲ್ಲಿ ಸಿಎಂ ಕ್ಯಾಂಡಿಡೇಟ್ ಯಾರು ಎಂಬುದನ್ನೇ ತೀರ್ಮಾನ ಮಾಡಿಲ್ಲ.ಇನ್ನು ಸರ್ಕಾರ ಬರುತ್ತೆ ಅಂತ ತೀರ್ಮಾನ ಮಾಡ್ತಾರಾ? ಮೊದಲು ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ತೀರ್ಮಾನ ಮಾಡಿಕೊಳ್ಳಲಿ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.
ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರುತ್ತಿರೋದು ಸ್ವಾಗತಾರ್ಹ– ಪ್ರಮೋದ್ ಮುತಾಲಿಕ್ ಮತಾಂತರ ನಿಷೇಧ ಕಾಯ್ದೆ ಕುರಿತು ಹುಬ್ಬಳ್ಳಿಯಲ್ಲಿ ಶ್ರೀರಾಮ್ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಾಯ್ದೆ ಜಾರಿಗೆ ತರುತ್ತಿರುವುದು ಸ್ವಾಗತಾರ್ಹ ಎಂದಿದ್ದಾರೆ. ಶ್ರೀರಾಮ ಸೇನೆ ಸರಕಾರದ ನಿರ್ಧಾರವನ್ನು ಸ್ವಾಗತ ಮಾಡುತ್ತದೆ. ಶ್ರೀರಾಮ ಸೇನೆಯಿಂದ ಟಾಸ್ಕ್ ಪೋಸ್೯ ತಂಡ ರಚನೆ ಮಾಡುತ್ತೆವೆ. ಹತ್ತು ಜನರು ಈ ತಂಡದಲ್ಲಿರುತ್ತಾರೆ. ಗೋಹತ್ಯೆ ನಿಷೇದ ಕಾಯ್ದೆ ಬಂದರು ಗೋಹತ್ಯೆ ನಡೆಯುತ್ತಿದೆ. ಕಾಯ್ದೆಗಳು ಪೆಪರ್ ನಲ್ಲಿ ಮಾತ್ರ ಉಳಿಯಬಾರದು. ಇದೆ ಕಾರಣಕ್ಕೆ ಟಾಸ್ಕ್ ಫೋರ್ಸ್ ತಂಡ ರಚನೆ ಮಾಡಿದೆ. ಮತಾಂತರ ತಡೆಯಲು ಪೊಲೀಸರಿಗೆ ಅನುಕೂಲವಾಗುವಂತೆ ಈ ತಂಡ ರಚನೆ ಮಾಡುತ್ತೆವೆ. ಕಾನೂನು ಕೈಗೆತ್ತಿಕೊಳ್ಳದೆ ಈ ತಂಡ ಕೇಲಸ ಮಾಡುತ್ತದೆ ಎಂದಿದ್ದಾರೆ.
ಇದನ್ನೂ ಓದಿ:
Anti Conversion Bill: ಮತಾಂತರ ನಿಷೇಧ ಕಾಯ್ದೆ ತಿದ್ದುಪಡಿಗೆ ಬಿಜೆಪಿ ಶಾಸಕರ ಮನವಿ




