ಬೈಕ್​ ಅಡ್ಡ ಬಂದು ತಪ್ಪಿಸಲು ಹೋಗಿ ಅಪಘಾತವಾಯಿತು, ಮದ್ಯ ಸೇವಿಸಿರಲಿಲ್ಲ: ವಿನಯ್​ ಕುಲಕರ್ಣಿ ಸೋದರ ವಿಜಯ್

ಅಪಘಾತ ಸಂದರ್ಭದಲ್ಲಿ ನಾನೇ ಕಾರು ಚಲಾಯಿಸುತ್ತಿದ್ದೆ. ಬೈಕ್‌ ಅಡ್ಡ ಬಂದಾಗ ತಪ್ಪಿಸಲು ಹೋಗಿ ಅಪಘಾತವಾಗಿದೆ. ಅಪಘಾತ ನಂತರ ನಾನೇ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಗಾಯಾಳುಗಳನ್ನ ಆಸ್ಪತ್ರೆಗೆ ರವಾನೆ ಮಾಡಿದ ಬಳಿಕ ಸ್ಥಳದಿಂದ ತೆರಳಿದ್ದೆ: ವಿಜಯ್ ಕುಲಕರ್ಣಿ

ಬೈಕ್​ ಅಡ್ಡ ಬಂದು ತಪ್ಪಿಸಲು ಹೋಗಿ ಅಪಘಾತವಾಯಿತು, ಮದ್ಯ ಸೇವಿಸಿರಲಿಲ್ಲ: ವಿನಯ್​ ಕುಲಕರ್ಣಿ ಸೋದರ ವಿಜಯ್
ವಿಜಯ್​ ಕುಲಕರ್ಣಿ
Follow us
Skanda
| Updated By: ಆಯೇಷಾ ಬಾನು

Updated on: Apr 13, 2021 | 6:38 AM

ಧಾರವಾಡ: ಹತ್ಯೆ ಪ್ರಕರಣವೊಂದರಲ್ಲಿ ಜೈಲುಪಾಲಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಸಹೋದರ, ಕಾಂಗ್ರೆಸ್ ಮುಖಂಡ ವಿಜಯ್ ಕುಲಕರ್ಣಿ ಅವರ ಕಾರು ಅಪಘಾತಕ್ಕೆ ಸಂಬಂಧಿಸಿದಂತೆ ಸ್ವತಃ ವಿಜಯ್​ ಕುಲಕರ್ಣಿ ಹೇಳಿಕೆ ನೀಡಿದ್ದಾರೆ. ಅಪಘಾತ ಸಂದರ್ಭದಲ್ಲಿ ನಾನೇ ಕಾರು ಚಲಾಯಿಸುತ್ತಿದ್ದೆ. ಬೈಕ್‌ ಅಡ್ಡ ಬಂದಾಗ ತಪ್ಪಿಸಲು ಹೋಗಿ ಅಪಘಾತವಾಗಿದೆ. ಅಪಘಾತ ನಂತರ ನಾನೇ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ. ಗಾಯಾಳುಗಳನ್ನ ಆಸ್ಪತ್ರೆಗೆ ರವಾನೆ ಮಾಡಿದ ಬಳಿಕ ಸ್ಥಳದಿಂದ ತೆರಳಿದ್ದೆ ಎಂದು ಧಾರವಾಡ ಸಂಚಾರಿ ಠಾಣೆ ಬಳಿ ಹೇಳಿದ್ದಾರೆ.

ನಾನು ಮದ್ಯ ಸೇವಿಸಿ ಕಾರು ಚಲಾಯಿಸಿರಲಿಲ್ಲ. ಈ ರೀತಿಯಾಗಿ ಸುಳ್ಳು ಸುದ್ದಿ ಹಬ್ಬಿಸುವುದು ಸರಿಯಲ್ಲ. ಈಗಾಗಲೇ ನನಗೆ ಟೆಸ್ಟ್ ಕೂಡ ಮಾಡಲಾಗಿದೆ ಎಂದು ಸ್ಪಷ್ಟೀಕರಣ ನೀಡಿರುವ ವಿಜಯ್​ ಕುಲಕರ್ಣಿ ಅಪಘಾತ ಸಂದರ್ಭ ಕಾರು ಚಲಾಯಿಸುತ್ತಿದ್ದಿದ್ದು ನಾನೇ ಎಂದು ಹೇಳಿಕೊಂಡಿದ್ದಾರೆ. ಈ ಸಂಬಂಧ ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೇಸ್​ನಲ್ಲಿ ವಿಜಯ್ ಕುಲಕರ್ಣಿ A1 ಆರೋಪಿ ಎಂದು ಉಲ್ಲೇಖವಾಗಿದೆ.

ಇಬ್ಬರು ಸಾವು, ಆರು ಜನ ಗಾಯಾಳು ನಿನ್ನೆ (ಏಪ್ರಿಲ್ 12) ವಿಜಯ್ ಕುಲಕರ್ಣಿ ಪ್ರಯಾಣಿಸುತ್ತಿದ್ದ ಕಾರು ಧಾರವಾಡ ಕೆವಿಜಿ ಬ್ಯಾಂಕ್ ಎದುರು ರಸ್ತೆ ಬಳಿ ನಿಂತಿದ್ದವರ ಮೇಲೆ ಹರಿದ ಪರಿಣಾಮ ಇಬ್ಬರು ಮೃತಪಟ್ಟಿದ್ದು, 6 ಜನರು ಗಾಯಗೊಂಡಿದ್ದಾರೆ. ಇನ್ನೋರ್ವರ ಸ್ಥಿತಿ ಗಂಭೀರವಾಗಿದೆ. ಅಪಘಾತ ನಡೆದ ತಕ್ಷಣ ವಿಜಯ್ ಕುಲಕರ್ಣಿ ಕಾರಿಗೆ ಸ್ಥಳೀಯರು ಮುತ್ತಿಗೆ ಹಾಕಿದ್ದರು. ಜನರು ಮುತ್ತಿಗೆ ಹಾಕುತ್ತಿದ್ದಂತೆ ವಿಜಯ್ ಕುಲಕರ್ಣಿ ಮತ್ತೊಂದು ಕಾರಿನಲ್ಲಿ ಪರಾರಿಯಾಗಿದ್ದರು. ಬೆಳಗಾವಿಯಿಂದ ಧಾರವಾಡದ ಕಡೆಗೆ ಬರುವಾಗ ಈ ಅಪಘಾತ ನಡೆದಿದ್ದು, ಅಪಘಾತದ ರಭಸಕ್ಕೆ ಕೆಲವು ಬೈಕ್​ಗಳು ಕೂಡ ಜಖಂ ಆಗಿದ್ದವು. ಅಪಘಾತದಲ್ಲಿ ಶೇಖರ ಹುದ್ದಾರ್(37), ಚರಣ್ ನಾಯ್ಕ್(17) ಎಂಬ ಇಬ್ಬರು ಮೃತಪಟ್ಟಿದ್ದಾಗಿ ತಿಳಿದುಬಂದಿದೆ.

ಇದನ್ನೂ ಓದಿ: ರಸ್ತೆ ಬದಿ ನಿಂತಿದ್ದವರ ಮೇಲೆ ಕಾರು ಹತ್ತಿಸಿದ ವಿನಯ್​ ಕುಲಕರ್ಣಿ ಸೋದರ ವಿಜಯ್; ಇಬ್ಬರ ದುರ್ಮರಣ, ಐವರಿಗೆ ಗಾಯ 

ನಟಿ ಮಹಿಮಾ ಮುಖದಲ್ಲಿತ್ತು 67 ಗಾಜಿನ ಚೂರುಗಳು! ಭೀಕರ ಅಪಘಾತದ ಕರಾಳ ನೆನಪು