ಚಾಮರಾಜನಗರ ಆಕ್ಸಿಜನ್ ದುರಂತ; ಆಡಿಯೋದಲ್ಲಿರುವುದು ಸತ್ಯವಾದರೆ ಅಧಿಕಾರಿಯನ್ನು ಬಂಧಿಸಿ ಎಂದ ಮಾಜಿ ಶಾಸಕ ವಾಸು

ಅಧಿಕಾರಿಯ ಅಹಂನಿಂದ ಹತ್ತಾರು ಪ್ರಾಣಗಳು ಹೋಗಿವೆ. ಇತಿಹಾಸದಲ್ಲೇ ಇದೊಂದು ದುರದೃಷ್ಟಕರ ಸಂಗತಿ. ಆಡಿಯೋ ಸಂಬಂಧ ಪರಿಶೀಲಿಸಿ ಕೂಡಲೇ ಕ್ರಮಕೈಗೊಳ್ಳಬೇಕು. ಸರ್ಕಾರ ಆಕ್ಸಿಜನ್ ಪ್ರಕರಣದಲ್ಲಿ ಸತ್ತವರಿಗೆ ಪರಿಹಾರ ನೀಡಬೇಕು. ಆರೋಗ್ಯ ಸಚಿವರು ಈ ಬಗ್ಗೆ ಶೀಘ್ರದಲ್ಲೇ ಕಠಿಣ ಕ್ರಮಕೈಗೊಳ್ಳಿ.

ಚಾಮರಾಜನಗರ ಆಕ್ಸಿಜನ್ ದುರಂತ; ಆಡಿಯೋದಲ್ಲಿರುವುದು ಸತ್ಯವಾದರೆ ಅಧಿಕಾರಿಯನ್ನು ಬಂಧಿಸಿ ಎಂದ ಮಾಜಿ ಶಾಸಕ ವಾಸು
ಮಾಜಿ ಶಾಸಕ ವಾಸು
Follow us
TV9 Web
| Updated By: sandhya thejappa

Updated on: Jun 08, 2021 | 1:32 PM

ಮೈಸೂರು: ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ದುರಂತ ಪ್ರಕರಣದ ಕುರಿತು ಬಿಡುಗಡೆಯಾದ ಆಡಿಯೋ ಬಗ್ಗೆ ಮಾಜಿ ಶಾಸಕ ವಾಸು ಪ್ರತಿಕ್ರಿಯಿಸಿದ್ದಾರೆ. ಆಡಿಯೋಗಳು ವೈರಲ್ ಆಗುತ್ತಿವೆ. ಆಡಿಯೋದಲ್ಲಿರುವುದು ಸತ್ಯವಾದರೆ ಅಧಿಕಾರಿಯನ್ನು ಬಂಧಿಸಿ. ಆ ಐಎಎಸ್ ಅಧಿಕಾರಿ ವಿರುದ್ಧ ಎಫ್ಐಆರ್ ದಾಖಲಿಸಿ ಎಂದು ಮಾಜಿ ಶಾಸಕ ವಾಸು ಒತ್ತಾಯಿಸಿದ್ದಾರೆ.

ಅಧಿಕಾರಿಯ ಅಹಂನಿಂದ ಹತ್ತಾರು ಪ್ರಾಣಗಳು ಹೋಗಿವೆ. ಇತಿಹಾಸದಲ್ಲೇ ಇದೊಂದು ದುರದೃಷ್ಟಕರ ಸಂಗತಿ. ಆಡಿಯೋ ಸಂಬಂಧ ಪರಿಶೀಲಿಸಿ ಕೂಡಲೇ ಕ್ರಮಕೈಗೊಳ್ಳಬೇಕು. ಸರ್ಕಾರ ಆಕ್ಸಿಜನ್ ಪ್ರಕರಣದಲ್ಲಿ ಸತ್ತವರಿಗೆ ಪರಿಹಾರ ನೀಡಬೇಕು. ಆರೋಗ್ಯ ಸಚಿವರು ಈ ಬಗ್ಗೆ ಶೀಘ್ರದಲ್ಲೇ ಕಠಿಣ ಕ್ರಮಕೈಗೊಳ್ಳಿ. ರಾಜ್ಯ ಸರ್ಕಾರಕ್ಕೆ ಮಾಜಿ ಶಾಸಕ ವಾಸು ಒತ್ತಾಯಿಸಿದ್ದಾರೆ. ಜಿಲ್ಲಾಡಳಿತ 24 ಜನ ಸಾವಿಗೀಡಾಗಿದ್ದಾರೆ ಎಂದು ಹೇಳಿತ್ತು. ಆದರೆ ನ್ಯಾಯಾಲಯ ಸಾವೀಗೀಡಾಗಿರುವ ನೈಜ ಸಂಗತಿಯನ್ನ ಬೆಳಕಿಗೆ ತಂದಿದೆ ಎಂದು ಅಭಿಪ್ರಾಯಪಟ್ಟರು.

ಆಡಿಯೋದಲ್ಲಿ ಏನಿದೆ ಮೇ 2 ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಸುಮಾರು 37 ಜನ ಸಾವನ್ನಪ್ಪಿದವರ ಪ್ರಕರಣಕ್ಕೆ ಸಂಬಂಧಿಸಿ ಮೈಸೂರು ಡಿಸಿ ಆಗಿದ್ದ ರೋಹಿಣಿ ಸಿಂಧೂರಿ ಮತ್ತು ಗ್ಯಾಸ್ ಏಜೆನ್ಸಿ ಮಾಲೀಕನ ನಡುವೆ ನಡೆದ ಸಂಭಾಷಣೆಯ ಆಡಿಯೋವನ್ನು ಬಿಜೆಪಿ ಮುಖಂಡ ಅಮ್ಮನಪುರ ಮಲ್ಲೇಶ್ ಆಡಿಯೋವನ್ನು ರಿಲೀಸ್ ಮಾಡಿದ್ದರು. ರಿಲೀಸ್ ಮಾಡಿದ ಆಡಿಯೋದಲ್ಲಿ ಚಾಮರಾಜನಗರಕ್ಕೆ ಏಕೆ ಅಷ್ಟು ಆಕ್ಸಿಜನ್ ಕೊಡುತ್ತೀರಾ ಸರಿಯಾದ ಮಾಹಿತಿ ಪಡೆದು ಆಕ್ಸಿಜನ್ ಪೂರೈಕೆ ಮಾಡಿ ಎಂದು ರೋಹಿಣಿ ಸಿಂಧೂರಿ ಹೇಳಿದ್ದಾರೆ.

ಚಾಮರಾಜನಗರ ಆಕ್ಸಿಜನ್ ಪ್ರಕರಣ; ವರ್ಗಾವಣೆ ಬೆನ್ನಲ್ಲೆ ರಿಲೀಸ್ ಆಯ್ತು ರೋಹಿಣಿ ಸಿಂಧೂರಿ ಅವರ ಶಾಕಿಂಗ್ ಆಡಿಯೋ

Mysuru: ರೋಹಿಣಿ ಸಿಂಧೂರಿ ಮತ್ತು ಶಿಲ್ಪಾ ನಾಗ್ ಇಬ್ಬರೂ ಮೈಸೂರಿನಿಂದ ವರ್ಗಾವಣೆ, ಹೊಸ ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರ ನೇಮಕ

(Former MLA Vasu demanded that the officer be arrested if the audio is true in mysuru)