ಕಾರು-ಕ್ರೂಸರ್ ನಡುವೆ ಭೀಕರ ಅಪಘಾತ; ಚಿಕಿತ್ಸೆಗೆ ಹೊರಟ್ಟಿದ್ದ ನಾಲ್ಕು ಮಂದಿ ಸ್ಥಳದಲ್ಲೇ ಸಾವು
ಮೃತರು ರಾಯಚೂರಿನ ಮಾನ್ವಿಯ ವಿಠ್ಠಲ ನಗರದ ನಿವಾಸಿಗಳಾಗಿದ್ದು, ಕಾರವಾರದ ಹಲಗಾಕ್ಕೆ, ಪಾರ್ಶ್ವವಾಯು ಚಿಕಿತ್ಸೆಗಾಗಿ ಹೋಗುತ್ತಿದ್ದರು.
ಧಾರವಾಡ: ಕಾರು ಮತ್ತು ಕ್ರೂಸರ್ ನಡುವೆ ಡಿಕ್ಕಿಯಾಗಿ, ನಾಲ್ವರು ದಾರುಣವಾಗಿ ಮೃತಪಟ್ಟ ದುರ್ಘಟನೆ ಅಣ್ಣಿಗೇರಿ ಪಟ್ಟಣದ ಕೊಂಡಿಕೊಪ್ಪ ಕ್ರಾಸ್ನಲ್ಲಿ ನಡೆದಿದೆ.
ಕಾರಿನಲ್ಲಿದ್ದ ಸಣ್ಣಗಂಗಣ್ಣ, ನಾಗಮ್ಮ, ಹನುಮಂತು ಮತ್ತು ಈರಣ್ಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರು ರಾಯಚೂರಿನ ಮಾನ್ವಿಯ ವಿಠ್ಠಲ ನಗರದ ನಿವಾಸಿಗಳಾಗಿದ್ದು, ಕಾರವಾರದ ಹಲಗಾಕ್ಕೆ, ಪಾರ್ಶ್ವವಾಯು ಚಿಕಿತ್ಸೆಗಾಗಿ ಹೋಗುತ್ತಿದ್ದರು.
ಸಣ್ಣೀರಣ್ಣ, ಲಕ್ಷ್ಮೀ, ಕ್ರೂಸರ್ ಚಾಲಕ ಮಲ್ಲಪ್ಪ ಗಿಡ್ಡಣ್ಣನವರ್ ತೀವ್ರ ಗಾಯೊಂಡಿದ್ದು, ಅವರನ್ನು ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಣ್ಣಿಗೇರಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇದನ್ನೂ ಓದಿ: ಮದುವೆಗೆ ಹೋಗಿದ್ದ ಮೂವರು ಯುವಕರು, ಓರ್ವ ಯುವತಿ ಜಲಸಮಾಧಿ..
Published On - 10:15 am, Wed, 25 November 20