ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತದಲ್ಲಿ ಹಸುಗೂಸು ಸೇರಿ ಮಂಗಳೂರಿನ ನಾಲ್ವರು ಸಾವು

| Updated By: ಗಂಗಾಧರ​ ಬ. ಸಾಬೋಜಿ

Updated on: Mar 21, 2024 | 4:28 PM

ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹಳೆಯಂಗಡಿ ಮಂಗಳೂರಿನ ನಾಲ್ವರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಸೌದಿ ಅರೇಬಿಯಾದ ತೈಫ್ ನಗರದ ಬಳಿ ಭೀಕರ ಅಪಘಾತ ಸಂಭವಿಸಿದೆ. ಕತಾರ್‌ನಿಂದ ಸೌದಿಗೆ ಉಮ್ರಾ ನಿರ್ವಹಿಸಲು ಕಾರಿನಲ್ಲಿ ತೆರಳುವಾಗ ಝುಲ್ಫಾ ಎಂಬಲ್ಲಿ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದ ನಂತರ ಕಾರು ಪಲ್ಟಿಯಾಗಿದೆ.

ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತದಲ್ಲಿ ಹಸುಗೂಸು ಸೇರಿ ಮಂಗಳೂರಿನ ನಾಲ್ವರು ಸಾವು
ಪ್ರಾತಿನಿಧಿಕ ಚಿತ್ರ
Follow us on

ಮಂಗಳೂರು, ಮಾರ್ಚ್​ 21: ಸೌದಿ ಅರೇಬಿಯಾದಲ್ಲಿ ರಸ್ತೆ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ (Mangaluru) ಹಳೆಯಂಗಡಿ ಮಂಗಳೂರಿನ ನಾಲ್ವರು ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಸೌದಿ ಅರೇಬಿಯಾದ ತೈಫ್ ನಗರದ ಬಳಿ ಭೀಕರ ಅಪಘಾತ ಸಂಭವಿಸಿದೆ. ಕತಾರ್‌ನಿಂದ ಸೌದಿಗೆ ಉಮ್ರಾ ನಿರ್ವಹಿಸಲು ಕಾರಿನಲ್ಲಿ ತೆರಳುವಾಗ ಝುಲ್ಫಾ ಎಂಬಲ್ಲಿ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದ ನಂತರ ಕಾರು ಪಲ್ಟಿಯಾಗಿದೆ. ಹಳೆಯಂಗಡಿ ತೋಕೂರು ನಿವಾಸಿ ಹಿಬಾ(29), ಪತಿ ಮೊಹಮ್ಮದ್‌(34), ಮಕ್ಕಳಾದ ಆರೂಶ್(3) ಹಾಗೂ 40 ದಿನದ ಹಸುಗೂಸು ರಾಹ ಮೃತಪಟ್ಟಿದ್ದಾರೆ. ಹಿಬಾ ಸೋದರಿ ಪುತ್ರಿ ಫಾತಿಮಾಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಹಾಸನದಲ್ಲಿ ಡೆಂಘೀ ಜ್ವರಕ್ಕೆ 7 ವರ್ಷದ ಬಾಲಕಿ ಬಲಿ

ಹಾಸನ: ಡೆಂಘೀ ಜ್ವರಕ್ಕೆ 7 ವರ್ಷದ ಬಾಲಕಿ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾತ್ವಿಕಾ(7) ಮೃತ ಬಾಲಕಿ ಕಳೆದ 3-4 ದಿನಗಳಿಂದ ಜ್ವರದಿಂದ ಬಳಲುತ್ತಿದ್ದಳು. ಖಾಸಗಿ ನರ್ಸಿಂಗ್ ಹೋಂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ವೈದ್ಯರ ಸಲಹೆ ಮೇರೆಗೆ ಚಿಕಿತ್ಸೆಗಾಗಿ ಹಿಮ್ಸ್​ಗೆ ದಾಖಲಿಸಿದ್ದರು. ಇಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಸಿಂಗಾಪುರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವಪತ್ತೆ

ಚಿತ್ರದುರ್ಗ: ಸಿಂಗಾಪುರದಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ವ್ಯಕ್ತಿಯ ಶವಪತ್ತೆ ಆಗಿರುವಂತಹ ಘಟನೆ ನಡೆದಿದೆ. ಮೃತನ ಸಂಬಂಧಿಕರಿಂದ ಪತ್ನಿ ಕುಟುಂಬಸ್ಥರ ವಿರುದ್ಧ ಕೊಲೆ ಆರೋಪ ಮಾಡಲಾಗಿದೆ. ಚಿತ್ರದುರ್ಗ ತಾಲೂಕಿನ ಸಿಂಗಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶಿವಕುಮಾರ್(31) ಶವಪತ್ತೆ ಆಗಿದೆ.

ಇದನ್ನೂ ಓದಿ: ಇಂಜಿನಿಯರ್ ಗಂಡನಿಗೆ ಅಂಟಿಕೊಂಡಿತ್ತು ಐಪಿಎಲ್ ಬೆಟ್ಟಿಂಗ್ ಭೂತ: 54 ಲಕ್ಷ ರೂ ಸಾಲ, ನೊಂದ ಹೆಂಡತಿ ನೇಣಿಗೆ ಶರಣು

ಕೌಟುಂಬಿಕ ಕಲಹ ಹಿನ್ನೆಲೆ‌ ಹೊಡೆದು ಕೊಲೆ ಮಾಡಿದ ಆರೋಪ ಮಾಡಲಾಗಿದೆ. ಬಳಿಕ ಪ್ರಕರಣ ಮುಚ್ಚಿ ಹಾಕಲು ನೇಣು ಬಿಗಿದಿದ್ದಾರೆಂದು ಆರೋಪಿಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:14 pm, Thu, 21 March 24