ದೆಹಲಿ ತೊರೆದು ಮಡಿಕೇರಿಯಲ್ಲಿ ವಾಸ: ಸ್ವಂತ ಹಣದಲ್ಲೇ ಪರಿಸರ ರಕ್ಷಣೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 25, 2024 | 8:16 PM

ದೆಹಲಿಯ ವಾಯುಮಾಲಿನ್ಯದಿಂದ ಬೇಸತ್ತು, ಪಿಯೂಶ್ ಅಗರವಾಲ್ ಎಂಬುವವರು ಮಡಿಕೇರಿಗೆ ಬಂದು ನೆಲೆಸಿದ್ದಾರೆ. ಇಲ್ಲಿ ಅವರು ಪಟ್ಟಣದ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಸ ವಿಲೇವಾರಿ, ಹೂವಿನ ಕುಂಡಗಳ ಅಳವಡಿಕೆ, ಸಾವಿರಾರು ಗಿಡಗಳನ್ನು ನೆಡುವುದು ಮುಂತಾದ ಕೆಲಸಗಳಲ್ಲಿ ತೊಡಗಿದ್ದಾರೆ. ಅವರ ಈ ಕೆಲಸಕ್ಕೆ ಸ್ಥಳೀಯರು ಮತ್ತು ನಗರಸಭೆ ಮೆಚ್ಚುಗೆ ವ್ಯಕ್ತಪಡಿಸಿದೆ.

ದೆಹಲಿ ತೊರೆದು ಮಡಿಕೇರಿಯಲ್ಲಿ ವಾಸ: ಸ್ವಂತ ಹಣದಲ್ಲೇ ಪರಿಸರ ರಕ್ಷಣೆ
ದೆಹಲಿ ತೊರೆದು ಮಡಿಕೇರಿಯಲ್ಲಿ ವಾಸ: ಸ್ವಂತ ಹಣದಲ್ಲೇ ಪರಿಸರ ರಕ್ಷಣೆ
Follow us on

ಕೊಡಗು, ಡಿಸೆಂಬರ್​ 25: ರಾಷ್ಟ್ರ ರಾಜಧಾನಿಯಲ್ಲಿ ದಿನದಿಂದ ದಿನಕ್ಕೆ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ಬೇಸಿಗೆಯಲ್ಲಿ ಉಸಿರಾಡುವುದಕ್ಕೂ ಇಲ್ಲಿ ಸಮಸ್ಯೆಯಾಗುತ್ತಿದೆ. ಆದ್ದರಿಂದ ದೆಹಲಿಯ (Delhi) ಪರಿಸರ
ಪ್ರೇಮಿಯೊಬ್ಬರು ಮಡಿಕೇರಿಯನ್ನು ಇಷ್ಟಪಟ್ಟಿದ್ದಾರೆ. ಮಂಜಿನ ನಗರಿಗೆ ಆಗಮಿಸಿ ಸ್ವಚ್ಚತೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಹಾಗಾದರೆ ಆ ವ್ಯಕ್ತಿ ಮಾಡುತ್ತಿರುವ ಕೆಲಸ ಏನು ಎಂಬುದರ
ಒಂದು ಸ್ಪೆಷಲ್ ವರದಿ ಇಲ್ಲಿದೆ. ಮುಂದೆ ಓದಿ.

ಮಡಿಕೇರಿ ಈಸ್ ದ ಬೆಸ್ಟ್

ಪಿಯೂಶ್​ ಅಗರವಾಲ್​ ಎಂಬುವವರು ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯು ಮಾಲಿನ್ಯ ಹೆಚ್ಚಾಗುತ್ತಿರುವ ಕಾರಣ ಎರಡು ವರ್ಷದ ಹಿಂದೆ ಮಡಿಕೇರಿಗೆ ಆಗಮಿಸಿದ್ದು, ಇಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಪ್ರಪಂಚದ ಬೇರೆ ಬೇರೆ ಸ್ಥಳಗಳಿಗೆ ಭೇಟಿ ನೀಡುತ್ತಿರುವ ಅಗರವಾಲ್, ಮಡಿಕೇರಿ ಈಸ್ ದ ಬೆಸ್ಟ್ ಅಂತ ಇಲ್ಲಿಯೇ ನೆಲೆಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲೇ ಮೊದಲ ಬಾರಿಗೆ ಮೂಳೆ ದಾನ: ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡಗಿನ ಯುವಕ

ಅಂದ ಹಾಗೆ ಇವರು ಮಡಿಕೇರಿಗೆ ಆಗಮಿಸಿ ಸುಮ್ಮನೆ ಕುಳಿತ್ತಿಲ್ಲ. ಸ್ವಚ್ಚತೆಗೆ ಹೆಚ್ಚಿನ ಒತ್ತುಕೊಡುತ್ತಿರುವ ಅಗರವಾಲ್, ದಿನನಿತ್ಯ ಪಟ್ಟಣದಲ್ಲಿ ಕಸ ಹೆಕ್ಕುವ ಕೆಲಸವನ್ನು ಮಾಡುತ್ತಾರೆ. ಮಡಿಕೇರಿಯಲ್ಲಿ ಸಾಕಷ್ಟು ಕಡೆಗಳಲ್ಲಿ ಕಸ ಹಾಕಲು ತೊಟ್ಟಿಗಳನ್ನು ಅಳವಡಿಸಿದ್ದು, ಅದರಲ್ಲಿ ಕಸ ಹಾಕುವಂತೆ ಪ್ರೇರೇಪಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಕಾಲೇಜು ತಡೆಗೋಡೆ ಸೇರಿದಂತೆ ಹಲವು ಕಡೆಗಳಲ್ಲಿ ಹೂವಿನ ಕುಂಡಗಳನ್ನು ಅಳವಡಿಸಿ ಅದಕ್ಕೆ ನೀರು ಹಾಕುವ ಕೆಲಸವನ್ನು ಮಾಡುತ್ತಿದ್ದಾರೆ. ಇವರು ಪ್ರತಿದಿನ ಎಲೆಕ್ಟ್ರಿಕಲ್ ಸೈಕಲ್​ನಲ್ಲಿ ಸಂಚಾರ ಮಾಡುತ್ತಾರೆ. ಮಡಿಕೇರಿಯಲ್ಲಿ AQI(ಏರ್ ಕ್ವಾಲಿಟಿ) ಇಂಡೆಕ್ಸ್ 50 ರಿಂದ 60 ಇದೆ. ಕೆಲವೊಮ್ಮೆ 5 ಕ್ಕೂ ಬರುತ್ತದೆ. ಆದರೆ ದೆಹಲಿಯಲ್ಲಿ ಪ್ರತಿ ದಿನ 300 ರ ಮೇಲೆ ಇರುತ್ತದೆಯಂತೆ.

ಪಿಯೂಶ್​ ಅಗರವಾಲ್

ಇನ್ನೂ ದೆಹಲಿ ಮೂಲದ ಈ ವ್ಯಕ್ತಿ ತನ್ನದೇ ಹಣದಿಂದ ಇಷ್ಟೆಲ್ಲಾ ಮಾಡುತ್ತಿದ್ದಾರೆ. ಇದರ ಜೊತೆಗೆ ಬೇರೆಯವರ ಕಾಫಿ ತೋಟದಲ್ಲಿ ಗಿಡಗಳನ್ನು ನೆಡುವ ಕೆಲಸವನ್ನು ಮಾಡುತ್ತಿದ್ದು, ಸಾವಿರಕ್ಕೂ ಹೆಚ್ಚು ಗಿಡಗಳನ್ನು ನಾಟಿ ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಮಡಿಕೇರಿ ನಗರಸಭೆಯಿಂದಲೂ ಸಹಕಾರ ನೀಡಲಾಗುತ್ತಿದೆ.

ಇದನ್ನೂ ಓದಿ: ಶಾಸಕ ಎಎಸ್ ಪೊನ್ನಣ್ಣ ನಿವಾಸದ ಬಳಿ ಘರ್ಜಿಸಿದ ಹುಲಿ: ದಂಗಾದ ಸ್ಥಳೀಯರು, ಕೂಂಬಿಂಗ್​ ಶುರು

ಇವರ ಪರಿಸರ ಮೇಲಿನ ಕಾಳಜಿ, ಸ್ವಚ್ಛತೆಗೆ ಕೊಡುವ ಮಹತ್ವ ಇವೆಲ್ಲವೂ ಸ್ಥಳೀಯ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಬಹುತೇಕ ಮಂದಿ ನಿವೃತ್ತಿಯ ನಂತರ ವಿಶ್ರಾಂತಿಯ ಜೀವನ ನಡೆಸುತ್ತಾರೆ. ಆದರೆ ಇವರು ತಮ್ಮ ಪ್ರವೃತ್ತಿಯನ್ನೇ ಸದ್ಯ ವೃತ್ತಿಯನ್ನಾಗಿ ಮಾಡಿಕೊಂಡು ಇಳಿ ಜೀವನವನ್ನ ಮತ್ತಷ್ಟು ಸಂತೋಷದಾಯಕವನ್ನಾಗಿ ಮಾಡಿಕೊಂಡಿದ್ದಾರೆ.

ಒಟ್ಟಿನಲ್ಲಿ ಮಡಿಕೇರಿ ನಗರದ ಸ್ವಚ್ಚತೆಯತ್ತ ಹೆಚ್ಚು ಒಲವು ತೋರುತ್ತಿರುವ ದೆಹಲಿ ಮೂಲದ ಪಿಯೂಶ್​ ಅಗರವಾರ್​ ಅವರ ಪರಿಸರ ಪ್ರೇಮವನ್ನು ಮೆಚ್ಚಲೇಬೇಕು. ನಿಜವಾದ ಪರಿಸರ ಪ್ರೇಮ ಅಂದರೆ ಇದೇ ಅಲ್ವಾ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.