ಶಾಸಕ ಎಎಸ್ ಪೊನ್ನಣ್ಣ ನಿವಾಸದ ಬಳಿ ಘರ್ಜಿಸಿದ ಹುಲಿ: ದಂಗಾದ ಸ್ಥಳೀಯರು, ಕೂಂಬಿಂಗ್​ ಶುರು

ಕೊಡಗು ಜಿಲ್ಲೆಯಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಅವರ ಸ್ವಗ್ರಾಮದ ಬಳಿ ಹುಲಿ ಕಾಣಿಸಿಕೊಂಡಿರುವಂತಹ ಘಟನೆ ನಡೆದಿದೆ. ಹುಲಿ ಕಳೆದ ಕೆಲವು ದಿನಗಳಿಂದ ಜಾನುವಾರುಗಳನ್ನು ಬೇಟೆಯಾಡುತ್ತಿದೆ. ಅರಣ್ಯ ಇಲಾಖೆ ಹುಲಿಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಿದೆ. ಸ್ಥಳೀಯರು ಆತಂಕಗೊಂಡಿದ್ದಾರೆ ಮತ್ತು ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.

ಶಾಸಕ ಎಎಸ್ ಪೊನ್ನಣ್ಣ ನಿವಾಸದ ಬಳಿ ಘರ್ಜಿಸಿದ ಹುಲಿ: ದಂಗಾದ ಸ್ಥಳೀಯರು, ಕೂಂಬಿಂಗ್​ ಶುರು
ಸಚಿವ ಎಎಸ್ ಪೊನ್ನಣ್ಣ ನಿವಾಸದ ಬಳಿ ಘರ್ಜಿಸಿದ ಹುಲಿ: ದಂಗಾದ ಸ್ಥಳೀಯರು, ಕೂಂಬಿಂಗ್​ ಶುರು
Follow us
Gopal AS
| Updated By: ಗಂಗಾಧರ​ ಬ. ಸಾಬೋಜಿ

Updated on:Dec 12, 2024 | 9:32 PM

ಕೊಡಗು, ಡಿಸೆಂಬರ್ 12: ಮುಖ್ಯಮಂತ್ರಿಗಳ ಕಾನೂನು ಶಾಸಕ ಎಎಸ್ ಪೊನ್ನಣ್ಣ ಅತ್ತ ಬೆಳಗಾವಿ ಅಧಿವೇಶನದಲ್ಲಿ ಬ್ಯುಜಿಯಾಗಿದ್ದರೆ, ಇತ್ತ ಅವರ ಕೊಡಗಿನ ಮನೆಯ ಸಮೀಪ ಹುಲಿ (tiger) ಪ್ರತ್ಯಕ್ಷವಾಗಿದೆ. ಅಷ್ಟೇ ಅಲ್ಲದೆ ಬೆಳಗ್ಗೆ ಕಾಲು ಗಂಟೆಗಳ ಕಾಲ ಘರ್ಜಿಸಿ ಕಾಡು ಹಂದಿ ತಿಂದು ತನ್ನ ಇರುವಿಕೆಯನ್ನ ಖಾತ್ರಿಪಡಿಸಿದೆ. ಹಾಗಾಗಿ ಪೊನ್ನಣ್ಣ ಅವರ ಸ್ವಗ್ರಾಮದ ಜನತೆ ಇದೀಗ ಸಂಪೂರ್ಣ ಬೆಚ್ಚಿ ಬಿದ್ದಿದ್ದು, ಹುಲಿ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದೆ.

ಹುಲಿ ಘರ್ಜನೆ ಕೇಳಿ ದಂಗಾದ ಸ್ಥಳೀಯರು 

ಜಿಲ್ಲೆಯ ಪೊನ್ನಂಪೇಟೆ ತಾಲ್ಲೂಕಿನ ಬೆಳ್ಳೂರು ಶಾಸಕ ಪೊನ್ನಣ್ಣನವರ ಸ್ವಗ್ರಾಮ. ಜಿಲ್ಲೆಯ ಬೇರೆ ಬೇರೆ ಕಡೆಗಳಲ್ಲಿ ಸಾರ್ವಜನಿಕ ಸ್ಥಳಗಳಿಗೆ ಬಂದು ನಿರಂತರ ಭೀತಿ ಹುಟ್ಟಿಸುತ್ತಿದ್ದ ಹುಲಿಗಳು ಇದೀಗ ನೇರವಾಗಿ ಶಾಸಕರ ತೋಟಕ್ಕೇ ಎಂಟ್ರಿಕೊಟ್ಟಿದೆ. ಕಳೆದ 15 ದಿನಗಳ ಹಿಂದೆ ಇದೇ ಸ್ಥಳದಲ್ಲಿ ಹಸುವನ್ನ ಕೊಂದು ಭಕ್ಷಿಸಿದ್ದ ಈ ಹುಲಿ ಇದೀಗ ನಿನ್ನೆ ಕಾಡು ಹಂದಿಯೊಂದನ್ನ ಕೊಂದು ತಿಂದಿದೆ. ಬಳಿಕ ಬೆಳಗ್ಗಿನ ಜಾವ ಸುಮಾರು ಕಾಲು ಗಂಟೆಗಳ ಕಾಲ ತೋಟದಲ್ಲಿ ಘರ್ಜಿಸಿದೆ.

ಇದನ್ನೂ ಓದಿ: ಕೊಡಗು: ತೋಟಕ್ಕೆ ನುಗ್ಗಿ ನೂರಾರು ಅಡಕೆ ಮತ್ತು ಬಾಳೆಗಿಡಗಳನ್ನು ನಾಶಮಾಡಿದ ಕಾಡಾನೆಗಳ ಹಿಂಡು

ಹುಲಿ ಘರ್ಜನೆಯನ್ನ ಸ್ಥಳೀಯರು ಕೇಳಿದ್ದಾರೆ. ಹಾಗಾಗಿ ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದೆ. ಕೂಡಲೇ ಸ್ಥಳಕ್ಕಾಗಮಿಸಿದ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯ ಸಂಕೇತ್ ಪೂವಯ್ಯ, ಹಿರಿಯ ಅರಣ್ಯಾಧಿಕಾರಿಗಳಿಗೆ ಬುಲಾವ್ ನೀಡಿ ತಕ್ಷಣವೇ ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಳ್ಳುವಂತೆ ಸೂಚಿಸಿದ್ದಾರೆ.

ಕೂಂಬಿಂಗ್ ಶುರು

ವಿರಾಜಪೇಟೆ ವಲಯದ ಡಿಸಿಎಫ್ ಜಗನ್ನಾತ್ ನೇತೃತ್ವದ ಅರಣ್ಯ ಇಲಾಖೆ ತಂಡ 88 ಸಿಬ್ಬಂದಿಯೊಂದಿಗೆ ಬೆಳ್ಳೂರು ಗ್ರಾಮಕ್ಕೆ ಆಗಮಿಸಿ ಹುಲಿ ಸೆರೆಗೆ ಕಾರ್ಯಾಚರಣೆ ಕೈಗೊಂಡಿದೆ. ಸೂಕ್ತ ಸ್ಥಳದಲ್ಲಿ ಬೋನ್​, ಕ್ಯಾಮರಾ ಅಳವಡಿಸಿ ಹುಲಿ ಸೆರೆಗೆ ಕ್ರಮವಹಿಸಿದೆ. ಇದೀಗ ಕಾಫಿ ಕೊಯ್ಲಿನ ಸಮಯವಾಗಿರೋದ್ರಿಂದ ಸಾಕಾನೆಗಳನ್ನ ಕಾಫಿ ತೋಟದಲ್ಲಿ ಕಾರ್ಯಾಚರಣೆಗೆ ಬಳಸುವಂತಿಲ್ಲ. ಹಾಗಾಗಿ ಅರಣ್ಯ ಇಲಾಖೆ ಸಿಬ್ಬಂದಿ ಜೀವಭಯದಲ್ಲೇ ಕಾಲ್ನಡಿಗೆಯಲ್ಲೇ ಕೂಂಬಿಂಗ್ ಶುರು ಮಾಡಿದ್ದಾರೆ.

ಈ ಬೆಳ್ಳೂರು ಗ್ರಾಮ ಅತ್ತ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶ ಹಾಗೂ ಬ್ರಹ್ಮಗಿರಿ ಅಭಯಾರಣ್ಯದ ಮಧ್ಯದಲ್ಲೆ ಬರೋದ್ರಿಂದ ಹುಲಿಗಳು ಇದೇ ಮಾರ್ಗದಲ್ಲಿ ಅಡ್ಡಾಡುತ್ತಿವೆ. ಇದು ಇಡೀ ಊರಿನಲ್ಲಿ ಜೀವ ಭಯ ಸೃಷ್ಟಿಸಿದೆ.

ಇದನ್ನೂ ಓದಿ: ಬೀದರ್​ನಲ್ಲಿ ಮಂಗನ ಉಪಟಳಕ್ಕೆ ಗ್ರಾಮಸ್ಥರು ಸುಸ್ತು: 10ಕ್ಕೂ ಹೆಚ್ಚು ಜನರಿಗೆ ಕಚ್ಚಿದ ಮುಶ್ಯಾ

ನಿನ್ನೆಯಿಂದ ಆರಂಭವಾಗಿರುವ ಕಾರ್ಯಾಚರಣೆ ಇನ್ನೂ ಹಲವು ದಿನಗಳ ಕಾಲ ನಡೆಯಲಿದೆ. ಹುಲಿ ಇದೇ ಗ್ರಾಮ ವ್ಯಾಪ್ತಿಯಲ್ಲಿ ಅಡ್ಡಾಡುತ್ತಿದ್ದು, ಯಾವುದೇ ಕ್ಷಣದಲ್ಲಿ ಹಸು, ದನಗಳ ಮೇಲೆ ಎರಗಬಹುದು. ಹಾಗಾಗಿ ಜನರು ತಮ್ಮ ಜಾನುವಾರುಗಳನ್ನ ಸುರಕ್ಷಿತ ಸ್ಥಳದಲ್ಲಿ ಕಾಪಾಡಿಕೊಳ್ಳುವಂತೆ, ಜನರು ಮತ್ತು ಶಾಲಾ ಮಕ್ಕಳು ಎಚ್ಚರಿಕೆಯಿಂದ ಗುಂಪಾಗಿ ಓಡಾಡುವಂತೆಯೂ ಅಧಿಕಾರಿಗಳು ಸಲಹೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:24 pm, Thu, 12 December 24