ಗದಗ: ಮೂವರು ಮಕ್ಕಳೊಂದಿಗೆ ತುಂಗಭದ್ರಾ ನದಿಗೆ ಹಾರಿ ತಂದೆ ಆತ್ಮಹತ್ಯೆ!

ವ್ಯಕ್ತಿಯೋರ್ವ ತನ್ನ ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕೌಟುಂಬಿಕ ಕಲಹದಿಂದ ಮನನೊಂದು ಮೂವರು ಮಕ್ಕಳೊಂದಿಗೆ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗದಗ: ಮೂವರು ಮಕ್ಕಳೊಂದಿಗೆ ತುಂಗಭದ್ರಾ ನದಿಗೆ ಹಾರಿ ತಂದೆ ಆತ್ಮಹತ್ಯೆ!
ಮೃತ ದುರ್ವೈವಿಗಳು
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ರಮೇಶ್ ಬಿ. ಜವಳಗೇರಾ

Updated on:Nov 05, 2024 | 9:04 PM

ಗದಗ, (ನವೆಂಬರ್ 05): ತಂದೆಯೋರ್ವ ತನ್ನ ಮೂವರು ಮಕ್ಕಳೊಂದಿಗೆ ತುಂಗಭದ್ರಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಗದಗ ಜಿಲ್ಲೆಯ ಕೊರ್ಲಹಳ್ಳಿ ಬಳಿ ನಡೆದಿದೆ. ಮುಂಡರಗಿ ತಾಲೂಕಿನ ಮಕ್ತುಪೂರ ಗ್ರಾಮದ ನಿವಾಸಿ ಮಂಜುನಾಥ ಅರಕೇರಿ ಮೊದಲು ಮೂವರು ಮಕ್ಕಳನ್ನು ನದಿಗೆ ಎಸೆದು ಬಳಿಕ ತಾನೂ ಸಹ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವೇದಾಂತ 3, ಪವನ 4, ಧನ್ಯಾ 6 ನದಿ ಪಾಲಾದ ಮಕ್ಕಳು. ಕೌಟುಂಬಿಕ ಕಲಹವೇ ಈ ದುರಂತಕ್ಕೆ ಕಾರಣವೆಂದು ತಿಳಿದುಬಂದಿದೆ. ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಮುಂಡರಗಿ ಪೊಲೀಸರ ದೌಡಾಯಿಸಿದ್ದಾರೆ.

ಪತ್ನಿಯನ್ನು ಕೊಂದು ಶವವನ್ನು ಸಂಪ್​ಗೆ ಎಸೆದ ಪತಿ

ಮೈಸೂರು: ಪತಿಯೋರ್ವ ತನ್ನ ಪತ್ನಿಯನ್ನು ಕೊಂದು ಬಳಿಕ ಶವವನ್ನು ಸಂಪ್​ಗೆ ಎಸೆದಿರುವ ಘಟನೆ ಮೈಸೂರಿನ ಆಲನಹಳ್ಳಿ ಬಡಾವಣೆಯಲ್ಲಿ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಚೌಡಪ್ಪ ತನ್ನ ಪತ್ನಿ ಬಸಮಣಿಯನ್ನು (40) ಕೊಂದು ಸಂಪ್​ಗೆ ಎಸೆದಿದ್ದಾನೆ. ಪತಿ ಚೌಡಪ್ಪ, ಅತ್ತೆ ಗೌರಮ್ಮ ನಿತ್ಯ ಬಸಮಣಿಗೆ ಕಿರುಕುಳ ನೀಡುತ್ತಿದ್ದರು. ಇದೇ ವಿಚಾರವಾಗಿ ಪ್ರತಿದಿನ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಈಗ ಚೌಡಪ್ಪ ಪತ್ನಿ ಬಸಮಣಿಯನ್ನು ಕೊಲೆ ಮಾಡಿದ್ದಾನೆ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಕಾನೂನು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಭೇಟಿ ನೀಡಿ ಪರಿಶೀಲಿಸಿದ್ದು, ಈ ಬಗ್ಗೆ ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ತಾಯಿ ಕಳೆದುಕೊಂಡು ಇಬ್ಬರು ಮಕ್ಕಳು ರೋದಿಸುತ್ತಿವೆ.

Published On - 8:31 pm, Tue, 5 November 24

Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
Video: ಜಾರ್ಖಂಡ್​ನಲ್ಲಿ ಬಸ್ ಪಲ್ಟಿ, 7 ಮಂದಿ ಸಾವು
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲೋದು: ಕುಮಾರಸ್ವಾಮಿ
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
6,6,6,6,6,6,6,6: ಸಿಕ್ಸರ್​ಗಳ ಸುರಿಮಳೆ, 8 ಎಸೆತಗಳಲ್ಲಿ 8 ಸಿಕ್ಸ್​
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಬೈಂದೂರಲ್ಲಿ ಲ್ಯಾಂಡ್ ಆದ ಬಳಿಕ ಶಿವಕುಮಾರ್​ಗೆ ಶೆಡ್ಯೂಲ್ ಮರೆತುಹೋಯಿತೇ?
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಯಾರದ್ದೋ ಪಿಂಚಣಿ ಹಣ, ಇನ್ನಯಾರದ್ದೋ ಖಾತೆಗೆ ಜಮೆ: ವೃದ್ಧ ದಂಪತಿ ಕಣ್ಣೀರು
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಕೇವಲ 2 ತಿಂಗಳು ಹಿಂದೆ ಚಿಕ್ಕಬಳ್ಳಾಪುರದಿಂದ ಟ್ರಾನ್ಸ್​ಫರ್ ಆಗಿರುವ ಅಧಿಕಾರಿ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಸಿಎಂ ಇವತ್ತು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್​ರನ್ನು ಭೇಟಿಯಾಗಲಿದ್ದಾರೆ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಕೇವಲ 27 ದಿನಗಳಲ್ಲೇ ಮತ್ತೆ ಕೋಟ್ಯಧಿಪತಿಯಾದ ಮಾದಪ್ಪ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಪ್ರಧಾನಿ ಮೋದಿಗೆ ಗಾಯಾನಾದ ಅತ್ಯುನ್ನತ ನಾಗರಿಕ ಪ್ರಶಸ್ತಿ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ
ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ ಮೇಲೆ ಮಧು ಅಸ್ತ್ರ