AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ ಟಿಆರ್​ಪಿ

ಈಗ ಹೊರ ಬಿದ್ದಿರೋದು ಕಳೆದ ವಾರದ ಟಿಆರ್​ಪಿ ಅಲ್ಲ. ಅದಕ್ಕೂ ಹಿಂದಿನ ವಾರದ ಟಿಆರ್​ಪಿ. ಕಳೆದ ವಾರ ಚೈತ್ರಾ ಅವರು ಆಟ ಆಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಆ ವಾರದ ಟಿಆರ್​ಪಿ ಖಂಡಿತವಾಗಿಯೂ ಎರಡಂಕಿ ದಾಟಲಿದೆ ಎಂಬುದು ಅನೇಕರ ಊಹೆ.

ಸುದೀಪ್ ಇರುವಾಗ ರೇಟಿಂಗ್ ಬಗ್ಗೆ ಚಿಂತೆಯೇಕೆ? ದೊಡ್ಮನೆ ಶೋಗೆ ಭರ್ಜರಿ ಟಿಆರ್​ಪಿ
ಸುದೀಪ್
ರಾಜೇಶ್ ದುಗ್ಗುಮನೆ
|

Updated on:Nov 21, 2024 | 5:28 PM

Share

‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭದ ದಿನಗಳಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಚರ್ಚೆಯಲ್ಲಿ ಇದೆ. ಜಗದೀಶ್ ಹಾಗೂ ರಂಜಿತ್ ಅವರು ಬಡಿದಾಡಿಕೊಂಡು ದೊಡ್ಮನೆಯಿಂದ ಔಟ್ ಆದರು. ಆ ವಾರ ಭರ್ಜರಿ ಟಿಆರ್​ಪಿ ಸಿಕ್ಕಿತ್ತು. ಸುದೀಪ್ ಅವರು ತಾಯಿಯನ್ನು ಕಳೆದುಕೊಂಡ ಬಳಿಕ ಒಂದು ವಾರ ಬಿಗ್ ಬಾಸ್ ವೇದಿಕೆ ಏರಿರಲಿಲ್ಲ. ಆಗ ಟಿಆರ್​ಪಿ ಕುಗ್ಗಿತ್ತು. ಅವರು ಮರಳಿದ ಬಳಿಕ ಬಿಗ್ ಬಾಸ್ ಟಿಆರ್​ಪಿ ಅಲ್ಲಿ ಏರಿಕೆ ಕಂಡಿದೆ.

‘ಬಿಗ್ ಬಾಸ್ ಕನ್ನಡ ಸೀಸನ್ 11’ ಸುದೀಪ್ ಅವರ ಕೊನೆಯ ಸೀಸನ್ ಎನ್ನಲಾಗಿದೆ. ಈ ಬಗ್ಗೆ ಅವರು ಈಗಾಗಲೇ ಘೋಷಣೆ ಮಾಡಿದ್ದಾರೆ. ಅವರು ಈ ವಾರ ಖಡಕ್ ಆಗಿ ಬಿಗ್ ಬಾಸ್ ನಡೆಸಿಕೊಡುತ್ತಿದ್ದಾರೆ. ವಾರದ ದಿನಗಳಲ್ಲಿ 7.4 ಟಿವಿಆರ್​, ಶನಿವಾರ 8.7 ಟಿವಿಆರ್​ ಹಾಗೂ ಭಾನುವಾರ 9.1 ಟಿವಿಆರ್ ಸಿಕ್ಕಿದೆ. ಇದು ನಗರ ಭಾಗದ ಟಿಆರ್​ಪಿ ಮಾತ್ರ. ಒಂದೊಮ್ಮೆ ರಾಜ್ಯದ ಸಂಪೂರ್ಣ ಟಿಆರ್​ಪಿ ಸೇರಿದರೆ ಇನ್ನೂ ಹೆಚ್ಚಲಿದೆ.

ಈಗ ಹೊರ ಬಿದ್ದಿರೋದು ಕಳೆದ ವಾರದ ಟಿಆರ್​ಪಿ ಅಲ್ಲ. ಅದಕ್ಕೂ ಹಿಂದಿನ ವಾರದ ಟಿಆರ್​ಪಿ. ಕಳೆದ ವಾರ ಚೈತ್ರಾ ಅವರು ಆಟ ಆಡಿದ ವಿಚಾರಕ್ಕೆ ಸಂಬಂಧಿಸಿದಂತೆ ಸುದೀಪ್ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಆ ವಾರದ ಟಿಆರ್​ಪಿ ಖಂಡಿತವಾಗಿಯೂ ಎರಡಂಕಿ ದಾಟಲಿದೆ ಎಂಬುದು ಅನೇಕರ ಊಹೆ.

ಇದನ್ನೂ ಓದಿ: ‘ನಿಮ್ಮಿಂದ ಟಿಆರ್​ಪಿ ಬರೊಲ್ಲ’: ಸ್ಪರ್ಧಿಗಳ ಭ್ರಮೆ ದೂರ ಮಾಡಿದ ಸುದೀಪ್

ಬಿಗ್ ಬಾಸ್ ಈಗಾಗಲೇ 50 ದಿನಗಳನ್ನು ಪೂರ್ಣಗೊಳಿಸಿದೆ. ಈ ಬಾರಿ 50ನೇ ದಿನಕ್ಕೆ ಇಬ್ಬರು ವೈಲ್ಡ್ ಕಾರ್ಡ್ ಆಟಗಾರರ ಎಂಟ್ರಿ ಆಗಿದೆ. ಇದರಿಂದ ಆಟದ ರೋಚಕತೆ ಮತ್ತಷ್ಟು ಹೆಚ್ಚಿದೆ. ಶೋಭಾ ಶೆಟ್ಟಿ ಅವರು ಜೋರು ಧ್ವನಿಯಲ್ಲಿ ಮಾತನಾಡಿ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದ್ದಾರೆ.

ಇನ್ನು ಧಾರಾವಾಹಿಗಳ ಟಿಆರ್​ಪಿ ವಿಚಾರಕ್ಕೆ ಬಂದರೆ, ಮೊದಲ ಸ್ಥಾನದಲ್ಲಿ ‘ಲಕ್ಷ್ಮೀ ನಿವಾಸ’ ಧಾರಾವಾಹಿ ಇದೆ. ಎರಡನೇ ಸ್ಥಾನದಲ್ಲಿ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಇದೆ. ಮೂರನೇ ಸ್ಥಾನದಲ್ಲಿ ‘ಅಮೃತಧಾರೆ ಧಾರಾವಾಹಿ ಇದೆ. ಈ ಮೂರು ಧಾರಾವಾಹಿಗಳು ಜೀ ಕನ್ನಡದಲ್ಲಿ ಪ್ರಸಾರ ಕಾಣುತ್ತಿವೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:01 pm, Thu, 21 November 24

ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ಬೆಳೆಬಾಳುವ ಮರಗಳನ್ನೇ ಕಡಿದು ಮಾರಿಕೊಂಡ್ರಾ ಅಧಿಕಾರಿಗಳು?
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ತನ್ನ ಕ್ಷೇತ್ರದಲ್ಲಿ ಕರೆಂಟ್ ತೆಗೆದಿದ್ದಕ್ಕೆ ವಿದ್ಯುತ್ ಕಂಬ ಹತ್ತಿದ ಶಾಸಕ
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ನ್ಯೂ ಇಯರ್ ಗಿಫ್ಟ್​: ಮನೆ ಕಳೆದುಕೊಂಡ ಕೋಗಲು ಜನರಿಗೆ ಹೊಸ ಸೂರು
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಬಿಗ್ ಬಾಸ್: ಮುಚ್ಚುಮರೆ ಇಲ್ಲದೇ 3 ರಿಲೇಷನ್​ಶಿಪ್ ಬಗ್ಗೆ ನಿಜ ಹೇಳಿದ ಸೂರಜ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಕಾರಿನ ಮೇಲೆ ಬಿದ್ದ ವಾಟರ್ ಟ್ಯಾಂಕರ್
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಮತ್ತೊಂದು ಕೆನರಾ ಬ್ಯಾಂಕಿನಿಂದ ಗ್ರಾಹಕರಿಗೆ ಮಹಾ ಮೋಸ
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಕೋಗಿಲು ಲೇಔಟ್​​ಗೆ ಡಿಕೆ ಶಿವಕುಮಾರ್​ ಭೇಟಿ: ಪರಿಶೀಲನೆ, ಹೇಳಿದ್ದಿಷ್ಟು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಡಿಕೆ ಶಿವಕುಮಾರ್ ಸಿಎಂ ಆಗುವುದು ಗ್ಯಾರಂಟಿನಾ?ವಿಶ್ವಾಸದಲ್ಲಿ ಡಿಕೆಶಿ ಆಪ್ತರು
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ?
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!
ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್ ಪಲ್ಟಿ​​: ಎದೆ ಝಲ್ ಎನಿಸೋ ದೃಶ್ಯ!