ಗದಗ: ಗಣೇಶ ಪ್ರತಿಷ್ಠಾಪನೆಯಲ್ಲಿ ಚಂದ್ರಯಾನ-3 ಮಾದರಿ ಪ್ರದರ್ಶನ, ಭಕ್ತರಿಂದ ಚಪ್ಪಾಳೆ ಸುರಿಮಳೆ
ಗದಗ ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಗಣೇಶೋತ್ಸವ ನಡೆಯಿತು. ಈ ವೇಳೆ ಪ್ರತಿಭಾನ್ವಿತ ಯುವ ಕಲಾವಿದರು ಸೇರಿ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಈ ಬಾರಿ ಯಶಸ್ವಿಯಾದ ಚಂದ್ರಯಾನ-3 ಉಡಾವಣೆಯ ಮಾದರಿ ಪ್ರದರ್ಶನ ಮಾಡಿದರು. ವಿಕ್ರಂ ಲ್ಯಾಂಡರ್ ಮತ್ತು ರೋವರ್ ಮಾದರಿ ಲ್ಯಾಂಡ್ ಆಗುವ ದೃಶ್ಯ ಪ್ರದರ್ಶನ ಮಾಡಲಾಯಿತು.
ಗದಗ, ಸೆ.19: ಜಿಲ್ಲೆಯ ರೋಣ ತಾಲೂಕಿನ ಜಕ್ಕಲಿ ಗ್ರಾಮದಲ್ಲಿ ಗಣೇಶ ಚತುರ್ಥಿ (Ganesh Chaturthi) ಪ್ರಯುಕ್ತ ಮಹಾಂತೇಶ್ವರ ಯುವಕ ಸಂಘ ಹಾಗೂ ಶ್ರೀ ವೀರಭದ್ರೇಶ್ವರ ಗಣೇಶೋತ್ಸವ ಸಮಿತಿಯು ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿತು. ಈ ವೇಳೆ ಪ್ರತಿಭಾನ್ವಿತ ಯುವ ಕಲಾವಿದರು ಸೇರಿ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಈ ಬಾರಿ ಯಶಸ್ವಿಯಾದ ಚಂದ್ರಯಾನ-3 (Chandrayaan-3) ಉಡಾವಣೆಯ ಮಾದರಿ ಪ್ರದರ್ಶನ ಮಾಡಿದರು.
ಇಂತಹದೊಂದು ಕುತೂಹಲಕಾರಿ ರೋಮಾಂಚನ ಸನ್ನಿವೇಶವನ್ನು ನೋಡಲು ಅನೇಕರು ಆಗಮಿಸಿದರು. ಚಂದ್ರಯಾನ-3 ವಿಕ್ರಂ ಲ್ಯಾಂಡರ್ ಮತ್ತು ರೋವರ್ ಮಾದರಿ ಲ್ಯಾಂಡ್ ಆಗುವ ದೃಶ್ಯ ಪ್ರದರ್ಶನ ಆಗುತ್ತಿದ್ದಂತೆ ಗಣಪನ ದರ್ಶನ ಪಡೆದು ಕೃಪೆಗೆ ಪಾತ್ರರಾಗಲು ಬಂದವರು ಚಪ್ಪಾಳೆ ತಟ್ಟಿ ಯುವ ಕಲಾವಿದರಿಗೆ ಪ್ರೋತ್ಸಾಹಿಸಿದರು.
ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬದ ಸಂಭ್ರಮ; ಕಾಶಿ ವಿಶ್ವನಾಥ ದೇಗುಲದ ಮಾದರಿಯಲ್ಲಿ ಗಂಗಾರತಿ, ಇಲ್ಲಿದೆ ವಿಡಿಯೋ
ಗ್ರಾಮದ ಜನರು ತಂಡೋಪತಂಡವಾಗಿ ಗಣೇಶನಿಗೆ ಅಕ್ಷತೆ ಕಾಳು ಹಾಕಲು ಬಂದು ಚಂದ್ರಯಾನ ಪ್ರದರ್ಶನವನ್ನು ನಿಬ್ಬೆರಗಾಗಿ ವೀಕ್ಷಿಸಿದರು. ಬಾಹ್ಯಾಕಾಶದಲ್ಲಿ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿದು ಚಲಿಸುತ್ತಾ ಏನೆಲ್ಲ ಕಾರ್ಯಾಚರಣೆ ಮಾಡುತ್ತದೆ ಎಂಬುದರ ಕುರಿತು ಸನ್ನಿವೇಶ ಪ್ರದರ್ಶನಗೊಂಡಿತು.
ಈ ವೇಳೆಯಲ್ಲಿ ಚಂದ್ರಯಾನ-3 ಯಶಸ್ವಿಗೊಳಿದ ಇಸ್ರೋ ವಿಜ್ಞಾನಿಗಳಿಗೆ ಹಾಗೂ ಇಲ್ಲಿ ಇದನ್ನು ತಯಾರಿಸಿದ ಯುವ ಕಲಾವಿದರಾದ ನಾಗರಾಜ ಕಡಗದ, ಪ್ರವೀಣ ವಾಲಿ, ಅಂದಾನಪ್ಪ ಬಳಗೇರ, ಆನಂದ ಕೊಪ್ಪದ, ಅಭಿ ವಾಲಿ ಇವರಿಗೆ ಧನ್ಯವಾದ ಅರ್ಪಿಸಲಾಯಿತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ