AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Gadag: ಉತ್ತರ ಕರ್ನಾಟಕದ ಪ್ರತಿಷ್ಠಿತ ಶಿವಾನಂದ ಮಠದಲ್ಲಿ ತಾರಕಕ್ಕೇರಿದ ಉತ್ತರಾಧಿಕಾರ ವಿವಾದ, ಮೆಡಿಕಲ್ ಕಾಲೇಜಿನ 200 ಕೋಟಿ ಆಸ್ತಿ ಮೇಲೆ ಕಣ್ಣು

Gadag Sivananda Mutt: ಜಿಎಂ ಆಯುರ್ವೇದ ಮೆಡಿಕಲ್ ಕಾಲೇಜ್ 200 ಕೋಟಿ ಆಸ್ತಿ ಕೆಲವರು ನುಂಗಲು ಹೊರಟಿದ್ರು. ಸುಳ್ಳು ದಾಖಲೆ ಸೃಷ್ಟಿಸಿ ಪ್ಲಾನ್ ಮಾಡಿದ್ರು. ಇದಕ್ಕೆ ತಡೆ ಹಾಕಿದ್ದೇ ನನ್ನ ಪೀಠದಿಂದ ತೆಗೆಯುವ ಷಡ್ಯಂತರ ನಡೆದಿದೆ ಅಂತ ಕಿರಿಯ ಶ್ರೀಗಳಾದ ಸದಾಶಿವಾನಂದ ಭಾರತಿ ಆರೋಪಿಸಿದ್ದಾರೆ.

Gadag: ಉತ್ತರ ಕರ್ನಾಟಕದ ಪ್ರತಿಷ್ಠಿತ ಶಿವಾನಂದ ಮಠದಲ್ಲಿ ತಾರಕಕ್ಕೇರಿದ ಉತ್ತರಾಧಿಕಾರ ವಿವಾದ, ಮೆಡಿಕಲ್ ಕಾಲೇಜಿನ 200 ಕೋಟಿ ಆಸ್ತಿ ಮೇಲೆ ಕಣ್ಣು
ಶಿವಾನಂದ ಮಠದಲ್ಲಿ ತಾರಕಕ್ಕೇರಿದ ಉತ್ತರಾಧಿಕಾರ ವಿವಾದ
TV9 Web
| Edited By: |

Updated on: Jan 27, 2023 | 11:01 AM

Share

ಅದು ಉತ್ತರ ಕರ್ನಾಟಕದ (Uttar Karnataka) ಪ್ರತಿಷ್ಠಿತ ಮಠ. ಆ ಮಠಕ್ಕೆ ನೂರಾರು ಕೋಟಿ ರೂಪಾಯಿ ಆಸ್ತಿ ಇದೆ. ಲಕ್ಷಾಂತರ ಭಕ್ತ ಸಮೂಹ ಇದೆ. ಆದ್ರೆ, ಈಗ ಈ ಮಠದಲ್ಲಿ ಮತ್ತೆ ಉತ್ತರಾಧಿಕಾರ ವಿವಾದ ತಾರಕಕ್ಕೇರಿದೆ. ಮತ್ತೆ ಹಿರಿಯ, ಕಿರಿಯ ಶ್ರೀಗಳ ನಡುವೆ ಜಟಾಪಟಿ ಬಲು ಜೋರು ನಡೆದಿದೆ. ಮಠದ ಆವರಣದಲ್ಲಿ ಉಭಯ ಶ್ರೀಗಳ ಎದುರಲ್ಲೇ ಭಕ್ತರ ಜಗಳ ಕೈ ಕೈ ಮೀಲಾಯಿಸುವ ಹಂತಕ್ಕೆ ತಲುಪಿತ್ತು. ಮಠದ ಆವರಣದಲ್ಲಿ ಹೈಡ್ರಾಮಾನೇ ನಡೆದು ಹೋಯ್ತು. ಅಷ್ಟಕ್ಕೂ ಈ ಪೀಠ ಗಲಾಟೆ ನಡೆದಿದ್ದು ಎಲ್ಲಿ? ಈ ಸ್ಟೋರಿ ನೋಡಿ… ಉತ್ತರ ಕರ್ನಾಟಕದ ಪ್ರತಿಷ್ಠಿತ ಮಠದ‌ಲ್ಲಿ ಮತ್ತೆ ಪೀಠಾಧಿಪತಿಗಳ ಜಟಾಪಟಿ ನಡೆದಿದ್ದು, ಗದಗ ನಗರದ ಶಿವಾನಂದ ಮಠದ ಆವರಣದಲ್ಲಿ ಭಕ್ತರ ಹೈಡ್ರಾಮಾ ಕಂಡುಬಂದಿದೆ! ಮೊದಲ ಬಾರಿಗೆ, ಉಭಯ ಶ್ರೀಗಳ ಸಮ್ಮುಖದಲ್ಲಿ ಬಹಿರಂಗವಾಗಿಯೇ ಭಕ್ತರು ಜಟಾಪಟಿಗಿಳಿದು ವಾಗ್ವಾದದಲ್ಲಿ ತೊಡಗಿದರು. ಪೀಠದಿಂದ ಕಿರಿಯ ಶ್ರೀಗಳನ್ನು ತೆಗೆದು ಹಾಕಲಾಗಿದೆ ಎಂದ ಹಿರಿಯ ಶ್ರೀ… ಅದು ಸಾಧ್ಯವೇ ಎಲ್ಲ ಎಂದ ಕಿರಿಯ ಶ್ರೀಗಳು.. ಇದು ವಾಗ್ವಾದದ ಒಂದಂಶವಾಗಿತ್ತು. ಪ್ರವಚನ, ಓಂ ನಮಃ ಶಿವಾಯ, ಮಂತ್ರಘೋಷಗಳ ನೀನಾದ ಕೇಳಬೇಕಿದ್ದ ಮಠದ ಅಂಗಳ ಇವತ್ತು ಅಕ್ಷರಶಃ ಗೊಂದಲದ ಗೂಡಾಗಿತ್ತು. ಹಿರಿಯ, ಕಿರಿಯ ಶ್ರೀಗಳ ಸಮ್ಮುಖದಲ್ಲೇ ಭಕ್ತರ ನೂಕಾಟ, ತಳ್ಳಾಟ, ವಾಗ್ವಾದ, ಗದ್ದಲ, ಗಲಾಟೆ ಹೈಡ್ರಾಮಾ ಬಲು ಜೋರಾಗಿತ್ತು. ಉಭಯ ಶ್ರೀಗಳ ಪರ ವಿರೋಧ ಭಕ್ತರ ಮಾತಿನ ಜಟಾಪಟಿಗೆ ಉಭಯ ಶ್ರೀಗಳೇ ದಂಗಾಗಿ ಹೋಗಿದ್ರು. ಈ ಹೈಡ್ರಾಮಾ ನಡೆದಿದ್ದು, ಗದಗ (Gadag) ನಗರದ ಕಳಸಾಪೂರ ರಸ್ತೆಯ ಶಿವಾನಂದ ಮಠದ (Sivananda Mutt) ಆವರಣದಲ್ಲಿ.

ಶಿವಾನಂದ ಮಠದಲ್ಲಿ ಎರಡು ತಿಂಗಳಿಂದ ಉಭಯ ಶ್ರೀಗಳ ನಡುವೆ ಪೀಠ ಗಲಾಟೆ ತಾರಕಕ್ಕೇರಿದೆ. ಉಭಯ ಶ್ರೀಗಳ ಮುನಿಸು ಕಿರಿಯ ಶ್ರೀಗಳನ್ನು ಪೀಠದಿಂದಲೇ ತೆಗೆಯುವ ಹಂತಕ್ಕೆ ಹೋಗಿದೆ. ಹೌದು ಕಿರಿಯ ಶ್ರೀಗಳಾದ ಸದಾಶಿವಾನಂದ ಭಾರತಿ ಶ್ರೀಗಳು ಮಠದ ಸಂಪ್ರದಾಯ ಪಾಲನೆ ಮಾಡುತ್ತಿಲ್ಲ ಅಂತ ಮಠ ಉತ್ತರಾಧಿಕಾರಿ ಹಾಗೂ ಪೀಠದಿಂದ ತೆಗೆದು ಹಾಕಲಾಗಿದೆ ಅಂತ ಮಠದ ಹಿರಿಯ ಶ್ರೀಗಳಾದ ಅಭಿನವ ಶಿವಾನಂದ ಶ್ರೀಗಳು ಹೇಳಿದ್ರು. ಆಗ ಉಭಯ ಶ್ರೀಗಳ ನಡುವೆ ಪೀಠದ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದೆ.

ಬಳಿಕ ಈ ಪ್ರಕರಣ ಕೋರ್ಟ್ ಮೆಟ್ಟಿಲು ಕೂಡ ಏರಿತ್ತು. ಆದ್ರೆ ಈಗ ಮತ್ತೆ ಹಿರಿಯ, ಕಿರಿಯ ಶ್ರೀಗಳ ನಡುವೆ ಪೀಠದ ಜಟಾಪಟಿ ಶುರುವಾಗಿದೆ. ಮುಂದಿನ ತಿಂಗಳ 19ರಂದು ಶಿವಾನಂದ ಮಠದ ಜಾತ್ರಾಮಹೋತ್ಸ ನಡೆಯಲಿದೆ. ಹೀಗಾಗಿ ನಿನ್ನೆ ಹಿರಿಯ ಶ್ರೀಗಳು ಜಾತ್ರಾ ಕಮಿಟಿ ಮಾಡಿ ಘೋಷಣೆ ಮಾಡಿದ್ದಾರೆ. ಅಷ್ಟೇ ಅಲ್ಲ ಕಿರಿಯ ಶ್ರೀಗಳು ಕೋರ್ಟ್ ಆದೇಶದಂತೆ ಮಠದ ಆವರಣದಲ್ಲಿ ಪ್ರವೇಶ ಮಾಡುವಂತಿಲ್ಲ. ಯಾವುದೇ ಕಾರ್ಯ ಮಾಡುವಂತಿಲ್ಲ ಎಂದಿದ್ರು. ಇದು ಕಿರಿಯ ಶ್ರೀಗಳ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ನಾನು ಪೀಠಾಧಿಪತಿ ನನ್ನ ನೇತೃತ್ವದಲ್ಲಿ ಜಾತ್ರೆ ನಡೆಯಬೇಕು ಎಂದು ಕೋರ್ಟ್ ಹೇಳಿದೆ. ಕಿರಿಯ ಶ್ರೀಗಳು ರಚನೆ ಮಾಡಿದ ಜಾತ್ರಾ ಕಮಿಟಿ ಕಾನೂನುಬಾಹಿರ ಅಂತ ಹಿರಿಯ ಶ್ರೀಗಳು ಹೇಳಿದ್ದಾರೆ.

ಮಠದ ಆವರಣದಲ್ಲಿ ಕಿರಿಯ ಶ್ರೀಗಳಿಗೆ ಪ್ರವೇಶ ಇಲ್ಲ ಅನ್ನೋ ಸುದ್ದಿ ತಿಳಿಯುತ್ತಿದ್ದಂತೆ ಮಠದ ಆವರಣದಲ್ಲಿ ನೂರಾರು ಭಕ್ತರ ದಂಡೇ ಹರಿದು ಬಂತು. ಕಿರಿಯ ಶ್ರೀಗಳು ಮಾಧ್ಯಮ ಗೋಷ್ಠಿ ನಡೆಸಲು ನಿರ್ಧಾರ ಮಾಡಿದ್ರು. ಆಗ ಹಿರಿಯ ಶ್ರೀಗಳು ಹಾಗೂ ಕೆಲ ಭಕ್ತರು ಬಂದು ಮಠದ ಆವರಣದಲ್ಲಿ ಏನೂ ಮಾಡುವಂತಿಲ್ಲ. ಕೋರ್ಟ್ ಆದೇಶ ಆಗಿದೆ ಎಂದ್ರು. ಇಷ್ಟೇ ತಡ ಕ್ಷಣಾರ್ಧದಲ್ಲಿ ಮಠದ ಆವರಣದಲ್ಲಿ ಗದ್ದಲ, ಗಲಾಟೆ ಶರುವಾಯಿತು. ಹಿರಿಯ, ಕಿರಿಯ ಶ್ರೀಗಳ ಭಕ್ತರ ನಡುವೆ ತೀವ್ರ ವಾಗ್ವಾದ ನಡೆಯಿತು. ಒಂದು ಹಂತದಲ್ಲಿ ಭಕ್ತರ ಜಗಳ ಕೈಕೈ ಮೀಲಾಯಿಸುವ ಹಂತಕ್ಕೆ ತಲುಪಿತ್ತು.

ಆಗ ಸರಿಯಾದ ಸಮಯಕ್ಕೆ ಎಂಟ್ರಿಯಾದ ಪೊಲೀಸ್ರು ಭಕ್ತರನ್ನು ಸಮಾಧಾನ ಪಡಿಸಿದ್ರು. ಭಕ್ತರಿಗೆ ತಪ್ಪು ಸಂದೇಶ ಬೇಡ ಅಂತ ಕಿರಿಯ ಶ್ರೀಗಳ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಣ್ಣ ಶ್ರೀಗಳನ್ನು ತೆಗೆದು ಹಾಕಲಾಗಿದೆ ಅಂತ ತಪ್ಪು ಅಭಿಪ್ರಾಯ ನಡೆದಿದೆ. ಉತ್ತರಾಧಿಕಾರಿ ರದ್ದು ಮಾಡಬೇಕು ಅಂತ ಹುನ್ನಾರ ಮಾಡಿದ್ರು. ನಮ್ಮನ್ನು ತೆಗೆಯಲು ಯಾರಿಗೂ ಸಾಧ್ಯವಿಲ್ಲ ಅಂತ ಕಿರಿಯ ಶ್ರೀಗಳು ತಿರುಗೇಟು ನೀಡಿದ್ದಾರೆ.

ಉತ್ತರಾಧಿಕಾರ ಪತ್ರ ರದ್ದು ಮಾಡುವ ಎಲ್ಲ ಪ್ರಕ್ರಿಯೆ ಕಾನೂನುಬಾಹಿರವಾಗಿವೆ ಅಂತ ಹೇಳಿದ್ದಾರೆ. ಯಾವ ಹಳ್ಳಿ ಭಕ್ತರದ್ದೂ ಬೆಂಬಲವಿಲ್ಲ. ಕೋರ್ಟ್ ಗೆ ಹಾಗೂ ಸಾಮಾನ್ಯ ಜನ್ರಿಗೂ ಸುಳ್ಳು ಹೇಳಿದ್ದಾರೆ ಅಂತ ಕಿರಿಯ ಶ್ರೀಗಳು ಹೇಳಿದ್ದಾರೆ. ಡಿಜಿಎಂ ಆಯುರ್ವೇದ ಮೆಡಿಕಲ್ ಕಾಲೇಜ್ 200 ಕೋಟಿ ಆಸ್ತಿ ಕೆಲವರು ನುಂಗಲು ಹೊರಟಿದ್ರು. ಸುಳ್ಳು ದಾಖಲೆ ಸೃಷ್ಟಿಸಿ ಪ್ಲಾನ್ ಮಾಡಿದ್ರು. ಇದಕ್ಕೆ ತಡೆ ಹಾಕಿದ್ದೇ ನನ್ನ ಪೀಠದಿಂದ ತೆಗೆಯುವ ಷಡ್ಯಂತರ ನಡೆದಿದೆ ಅಂತ ಶ್ರೀಗಳು ಆರೋಪಿಸಿದ್ದಾರೆ.

ಕಿರಿಯ ಶ್ರೀ ಅಭಿನವ ಶಿಸವಾನಂದ ಶ್ರೀಗಳನ್ನು 2018ರ ಮೇ 25ರಂದು ಸದಾಶಿವಾನಂದ ಭಾರತಿ ಶ್ರೀಗಳನ್ನು ಉತ್ತರಾಧಿಕಾರಿಯಾಗಿ ನೇಮಿಸಲಾಗಿತ್ತು. ಆದರೆ ಭಕ್ತರು ಈಗ ಸದಾಶಿವಾನಂದ ಭಾರತಿ ಶ್ರೀಗಳನ್ನು ಪದಚ್ಯುತಿಗೊಳಿಸಿದ್ದಾರೆ. ಈ ಸಂಬಂಧ ಗದಗ ಉಪನೋಂದಣಿ‌ ಕಚೇರಿಯಲ್ಲಿ ರದ್ದು‌ ಮಾಡಿ ಆದೇಶ ಹೊರಡಿಸಿದ್ದರಿಂದಾಗಿ ಈಗ ಗಲಾಟೆ ಆರಂಭವಾಗಿದೆ. ಅದೇನೇ ಇರಲಿ ಲಕ್ಷಾಂತರ ಭಕ್ತರನ್ನು ಹೊಂದಿರೋ ಪ್ರತಿಷ್ಠಿತ ಮಠದಲ್ಲಿ ಈಗ ಹಿರಿಯ, ಕಿರಿಯ ಶ್ರೀಗಳ ಗುದ್ದಾಟ ಭಕ್ತರಿಗೆ ತಲೆನೋವಾಗಿರುವುದು ಮಾತ್ರ ಸತ್ಯ.

ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ