1 ರೂ ಕುಸಿದ ಕೊತ್ತಂಬರಿ ಬೆಲೆ: ರೈತರು ಕಂಗಾಲು, ನೂರಾರು ಎಕರೆಯಲ್ಲಿ ಬೆಳೆದ ಸೊಪ್ಪು ನಾಶ
Gadag News: ಸರಿಯಾಗಿ ಮಳೆಯಿಲ್ಲದೆ ಮತ್ತು ಜೊತೆಗೆ ಮಾರ್ಕೆರ್ಟ್ನಲ್ಲಿ ಸಹ ಬೆಲೆ ಸಿಗದೆ, ಒಂದು ಕಟ್ಟು ಕೊತ್ತಂಬರಿ ಕೇವಲ 1 ರೂ. ಗೆ ಮಾತ್ರ ಖರೀದಿ ಆಗುತ್ತಿದೆ. ಇದರಿಂದ ರೈತರಿಗೆ ಆಘಾತ ಎದುರಾಗಿದ್ದು, ಗದಗ ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕೆ ಗ್ರಾಮದ ಸುತ್ತಮುತ್ತಲಿನ ನೂರಾರು ಎಕರೆ ಕೊತ್ತಂಬರಿ ಬೆಳೆವನ್ನು ರೈತರು ನಾಶ ಮಾಡಿದ್ದಾರೆ.
ಗದಗ, ಆಗಸ್ಟ್ 25: ಮಳೆಯಿಲ್ಲ, ಜೊತೆಗೆ ಮಾರ್ಕೆಟ್ನಲ್ಲಿ ಬೆಲೆ ಇಲ್ಲ ಎಂದು ಜಿಲ್ಲೆಯ ರೋಣ ತಾಲೂಕಿನ ಬೆಳವಣಿಕೆ ಗ್ರಾಮದ ಸುತ್ತಮುತ್ತಲಿನ ನೂರಾರು ಎಕರೆ ಕೊತ್ತಂಬರಿ ಬೆಳೆವನ್ನು (Coriander) ರೈತರು ನಾಶ ಮಾಡಿದ್ದಾರೆ. ಕಳೆದ ವರ್ಷ ಒಂದು ಕಟ್ಟು ಸೊಪ್ಪಿಗೆ 140-180 ರೂ. ಮಾರಾಟವಾಗಿತ್ತು. ಹೀಗಾಗಿ ಈ ವರ್ಷವೂ ಲಾಭ ಸಿಗಬಹುದೆಂಬ ನಿರೀಕ್ಷೆಯಲ್ಲಿ ರೈತರು ಅತೀ ಹೆಚ್ಚು ಕೊತ್ತೊಂಬರಿ ಬೆಳೆದಿದ್ದರು. ಆದರೆ ಸರಿಯಾಗಿ ಮಳೆಯಿಲ್ಲದೆ ಮತ್ತು ಜೊತೆಗೆ ಮಾರ್ಕೆರ್ಟ್ನಲ್ಲಿ ಸಹ ಬೆಲೆ ಸಿಗದೆ, ಒಂದು ಕಟ್ಟು ಕೊತ್ತಂಬರಿ ಕೇವಲ 1 ರೂ. ಮಾತ್ರ ಖರೀದಿ ಆಗುತ್ತಿದೆ. ಇದರಿಂದ ರೈತರಿಗೆ ಆಘಾತ ಎದುರಾಗಿದೆ.
ಒಂದು ಎಕರೆಗೆ ಸುಮಾರು 15 ರಿಂದ 20 ಸಾವಿರ ರೂ. ಖರ್ಚು ಮಾಡಿ ರೈತರು ಕೊತ್ತಂಬರಿ ಸೊಪ್ಪು ಬೆಳೆದಿದ್ದಾರೆ. ಉತ್ತಮ ಬೆಲೆ ಸಿಕ್ಕಿದ್ದರೆ 50 ರಿಂದ 80 ಸಾವಿರ ರೂ. ವರೆಗೆ ಲಾಭ ಸಿಗುತಿತ್ತು. ಆದರೆ ಈಗ ಕೂಲಿ ಕೆಲಸ ಮಾಡುವವರ ಖರ್ಚು ಸಹ ಹೊರೆಯಾಗುತ್ತಿದೆ.
ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದ ದಿನವಾದ ಇಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಪವರ್ ಕಟ್
ಇನ್ನೊಂದೆಡೆ ತಮಿಳುನಾಡು ಆಂಧ್ರಪ್ರದೇಶದಲ್ಲಿ ಸಹ ಕೊತ್ತಂಬರಿ ಸೊಪ್ಪು ಹೆಚ್ಚು ಬೆಳೆಯಲಾಗುತ್ತಿದೆ. ಇದರಿಂದ ನಮ್ಮ ರೈತರ ಕೊತ್ತಂಬರಿಗೆ ಬೇಡಿಕೆ ಕಡಿಮೆಯಾಗಿದೆ. ಹೀಗಾಗಿ ಕೊತ್ತಂಬರಿ ಹರಗಿ ಹಿಂಗಾರು ಬೆಳೆಗೆ ರೈತರು ಸಿದ್ಧತೆಗೆ ಮುಂದಾಗಿದ್ದಾರೆ.
ಇದನ್ನೂ ಓದಿ: ಸರ್ಕಾರಕ್ಕೆ ಹೊಸ ಟೆನ್ಷನ್: ಎನ್ಇಪಿ ರದ್ದತಿಗೆ ಖಾಸಗಿ ಶಾಲೆಗಳ ಒಕ್ಕೂಟ ವಿರೋಧ
ಇತ್ತೀಚೆಗೆ ಕೊತ್ತಂಬರಿ ಸೊಪ್ಪಿನ ಬೆಲೆ 100ಕ್ಕೆ ಏರಿಕೆ ಆಗಿತ್ತು. ಆವಕ ಕಡಿಮೆಯಾಗಿದ್ದೇ ಬೆಲೆ ಹೆಚ್ಚಳಕ್ಕೆ ಕಾರಣ ಎನ್ನಲಾಗಿತ್ತು.
ಕುಸಿದ ಕಿಚನ್ ಕ್ವೀನ್ ಬೆಲೆ!
ಜೂನ್ ತಿಂಗಳಿಂದ ನಿರಂತವಾಗಿ ಏರಿಕೆ ಕಂಡಿದ್ದ ಟೊಮೆಟೊ ಬೆಲೆ ಏರಿಕೆಯಾದಷ್ಟೇ ಜೋರಾಗಿ ಇಳಿಕೆಯಾಗಿದೆ. ಎರಡು ತಿಂಗಳಲ್ಲಿ ಹದಿನೈದು ಕೆಜಿ ಬಾಕ್ಸ್ ಟೊಮೆಟೊ 2700ರ ವರೆಗೂ ಏರಿಕೆ ಕಂಡಿತ್ತು. ಈಗ ಅಷ್ಟೇ ವೇಗವಾಗಿ ಇಳಿಕೆಯಾಗಿದೆ. ಸದ್ಯ ಮಾರುಕಟ್ಟೆಗೆಯಲ್ಲಿ ಮತ್ತೆ ಯಾವಾಗ ಇಂಥ ದಾಖಲೆ ಬೆಲೆ ಬರುತ್ತದೋ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:11 pm, Fri, 25 August 23