ರಾಜ್ಯಾದ್ಯಂತ ಒಂದು ಸಾವಿರ ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಚಿಂತನೆ: ಹೆಚ್​​ಕೆ ಪಾಟೀಲ್​​

| Updated By: ವಿವೇಕ ಬಿರಾದಾರ

Updated on: Jul 08, 2023 | 3:21 PM

ರಾಜ್ಯ ಸರ್ಕಾರದಿಂದ ರಾಜ್ಯಾದ್ಯಂತ ಒಂದು ಸಾವಿರ ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಚಿಂತನೆ ಇದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ ಎಂದು ಸಚಿವ ಹೆಚ್​​.ಕೆ ಪಾಟೀಲ್​ ಹೇಳಿದ್ದಾರೆ.

ರಾಜ್ಯಾದ್ಯಂತ ಒಂದು ಸಾವಿರ ಗ್ರಾಮ ನ್ಯಾಯಾಲಯಗಳ ಸ್ಥಾಪನೆಗೆ ಚಿಂತನೆ: ಹೆಚ್​​ಕೆ ಪಾಟೀಲ್​​
ಸಚಿವ ಹೆಚ್​​ ಕೆ ಪಾಟೀಲ್​​
Follow us on

ಗದಗ: ರಾಜ್ಯ ಸರ್ಕಾರದಿಂದ (Karnataka Government) ರಾಜ್ಯಾದ್ಯಂತ ಒಂದು ಸಾವಿರ ಗ್ರಾಮ ನ್ಯಾಯಾಲಯಗಳ (Court) ಸ್ಥಾಪನೆಗೆ ಚಿಂತನೆ ಇದೆ. ಮುಂದಿನ ದಿನಗಳಲ್ಲಿ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡುತ್ತೇನೆ. 2008 ರಲ್ಲಿ ಗ್ರಾಮ ನ್ಯಾಯಾಲಯಗಳ ಕಲ್ಪನೆ, ಸ್ಪಷ್ಟತೆ ಬಂದಿದೆ. ನಿಯಮಗಳನ್ನು ರೂಪಿಸಿ ಆ ಹಿನ್ನಲೆಯಲ್ಲಿ ನಾವು ಗ್ರಾಮ ನ್ಯಾಯಾಲಯ ಸ್ಥಾಪನೆ ಚಿಂತನೆ ಮಾಡಲಾಗುತ್ತದೆ. ಜೆಎಮ್ಎಫ್​​ಸಿ (JMFC) ಮಾದರಿಯಲ್ಲಿ ನ್ಯಾಯಾಲಯಗಳನ್ನು ಸ್ಥಾಪನೆ ಮಾಡುತ್ತೇವೆ ಎಂದು ಸಚಿವ ಹೆಚ್ ಕೆ ಪಾಟೀಲ್ (HK Patil) ಹೇಳಿದರು.

ಗದಗನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಬೆಲೆ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ. ಬೆಲೆ ಏರಿಕೆಗೆ ಕಾರಣ ರಾಜ್ಯ ಸರ್ಕಾರ ಆಗುತ್ತಾ. ಪೆಟ್ರೋಲ್, ಡಿಸೇಲ್, ಗ್ಯಾಸ್ ಬೆಲೆ ನಾವು ಏರಿಸುತ್ತೇವಾ? ಬೆಲೆ ಏರಿಕೆಯನ್ನು ಕೇಂದ್ರ ಸರ್ಕಾರ ಹಾಗೂ ರಿಸರ್ವ್ ಬ್ಯಾಂಕ್ ತಡಿಬೇಕು. ಅದು ಅವರ ಜವಾಬ್ದಾರಿ, ಅವ್ರ ವಿಫಲರಾಗಿ ಮತ್ತೊಬ್ಬರ ಮೇಲೆ ಹೇಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಗದಗ ಜಿಲ್ಲೆಯಲ್ಲಿ ಗ್ಯಾರಂಟಿ ಯೋಜನೆಗಳ ನೋಂದಣಿ ಕಾರ್ಯ ಶೀಘ್ರ ಪೂರ್ಣ: ವಿಶ್ವಾಸ ವ್ಯಕ್ತಪಡಿಸಿದ ಸಚಿವ ಎಚ್​ಕೆ ಪಾಟೀಲ್​

ರಾಣಿ ಅಂಗಡಿಯವರು ಬೆಲೆ ಏರಿಸಲ್ಲ, ನಿಮ್ಮ ನೀತಿ ಮೇಲೆ ಬೆಲೆ ಎರಿಕೆ ಆಗುತ್ತೆ. ಕಚ್ಚಾ ತೈಲ ಬೆಲೆ ಹೆಚ್ಚಿಗೆ ಆದರೆ, ಬೆಲೆ ಏರಿಕೆ ಆಗುತ್ತೆ. ಪ್ರಲ್ಹಾದ ಜೋಶಿಯವರ ತಮಗೆ ತಿಳಿದ್ದಿದ್ದನ್ನು ಕೇಳಿದ್ದಾರೆ. ಅವರನ್ನು ನಾನೇ ಕೇಳುತ್ತೇನೆ, ಬೆಲೆ ಏರಿಕೆಗೆ ಕೇಂದ್ರ ಸರ್ಕಾರ ಕಾರಣವೋ ಅಥವಾ ಯಾರು ಕಾರಣ ಅಂತ. ನಿಮ್ಮ ತಪ್ಪು ನಿಲುವು, ನಿಮ್ಮ ಬೇಜವಬ್ದಾರಿ, ಬಡವರ ಮೇಲೆ ನಿಮ್ಮ ನಿರ್ಲಕ್ಷ್ಯ ಈ ಬೆಲೆ ಏರಿಕೆಗೆ ಕಾರಣವಾಗಿದೆ ಎಂದು ವಾಗ್ದಾಳಿ ಮಾಡಿದರು.

ನಾವು ಬೆಲೆ ಏರಿಕೆ ಸಂದರ್ಭದಲ್ಲಿ ಬಡವರ ಅನುಕೂಲತೆಗಾಗಿ ಕಾರ್ಯಕ್ರಮ ಕೊಟ್ಟಿದ್ದೇವೆ. ಇದು ನಿವು ಜವಾಬ್ದಾರಿಯಿಂದ ನುಸುಳಿಕೊಳ್ಳುವ ನೀತಿ. ನಿಮ್ಮನ್ನು ಅರ್ಥ ಮಾಡಿಕೊಂಡು ರಾಜ್ಯದ ಜನರು ತಕ್ಕ ಶಾಸ್ತಿ ಮಾಡಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ