AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Government Holiday List 2022: ಕರ್ನಾಟಕ ಸರ್ಕಾರದ 2022ನೇ ಸಾಲಿನ ರಜಾ ದಿನಗಳ ಪಟ್ಟಿ ಹೀಗಿದೆ

2022ನೇ ಸಾಲಿಗೆ ಸರ್ಕಾರಿ ಸಿಬ್ಬಂದಿಗೆ ಕರ್ನಾಟಕ ಸರ್ಕಾರದಿಂದ ಅಧಿಕೃತ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

Karnataka Government Holiday List 2022: ಕರ್ನಾಟಕ ಸರ್ಕಾರದ 2022ನೇ ಸಾಲಿನ ರಜಾ ದಿನಗಳ ಪಟ್ಟಿ ಹೀಗಿದೆ
2022ರಲ್ಲಿ ಕರ್ನಾಟಕ ಸರ್ಕಾರದ ಸಾರ್ವತ್ರಿಕ ಜಾ ದಿನಗಳ ಪಟ್ಟಿ
TV9 Web
| Edited By: |

Updated on:Feb 09, 2022 | 5:28 PM

Share

ಕರ್ನಾಟಕ ಸರ್ಕಾರವು ನವೆಂಬರ್ 30ನೇ ತಾರೀಕಿನಂದು 2022ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಎಲ್ಲ ಎರಡನೇ ಮತ್ತು ನಾಲ್ಕನೇ ಶನಿವಾರ ಹಾಗೂ ಭಾನುವಾರಗಳಂದು ಸರ್ಕಾರಿ ಸಿಬ್ಬಂದಿಗೆ ರಜಾ ಇರುತ್ತದೆ. ಅದನ್ನು ಹೊರತುಪಡಿಸಿದಂತೆ ಇರುವ ರಜಾ ದಿನಗಳು ಈ ಕೆಳಗಿನಂತಿವೆ:

15-1-2022: ಶನಿವಾರ- ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ ಹಬ್ಬ 26-1-2022: ಬುಧವಾರ- ಗಣರಾಜ್ಯೋತ್ಸವ 1-3-202022: ಮಂಗಳವಾರ- ಮಹಾ ಶಿವರಾತ್ರಿ 2-4-2022: ಶನಿವಾರ- ಯುಗಾದಿ ಹಬ್ಬ 14-4-20222: ಗುರುವಾರ- ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ, ಮಹಾವೀರ ಜಯಂತಿ 15-4-2022: ಶುಕ್ರವಾರ- ಗುಡ್​ಫ್ರೈಡೇ 3-5-2022: ಮಂಗಳವಾರ- ಬಸವೇಶ್ವರ ಜಯಂತಿ/ಅಕ್ಷಯ ತೃತೀಯ, ಖುತುಬ್-ಎ-ರಂಜಾನ್ 9-8-2022: ಬುಧವಾರ- ಮೊಹರಂ ಕಡೇ ದಿನ 15-8-2022: ಸೋಮವಾರ- ಸ್ವಾತಂತ್ರ್ಯ ದಿನಾಚರಣೆ 31-8-2022: ಬುಧವಾರ- ವರಸಿದ್ಧಿ ವಿನಾಯಕ ವ್ರತ 4-10-2022: ಮಂಗಳವಾರ- ಮಹಾನವಮಿ, ಆಯುಧಪೂಜೆ 5-10-2022: ಬುಧವಾರ- ವಿಜಯದಶಮಿ 24-10-2022: ಸೋಮವಾರ- ನರಕ ಚತುರ್ದಶಿ 26-10-2022: ಬುಧವಾರ- ಬಲಿಪಾಡ್ಯಮಿ, ದೀಪಾವಳಿ 1-11-2022: ಮಂಗಳವಾರ- ಕನ್ನಡ ರಾಜ್ಯೋತ್ಸವ 11-11-2022: ಶುಕ್ರವಾರ- ಕನಕದಾಸ ಜಯಂತಿ

Karnataka State Government Holidays (1)

ಕರ್ನಾಟಕ ರಾಜ್ಯ ಸರ್ಕಾರದ ಪರಿಮಿತ ರಜಾ ದಿನಗಳ ಪಟ್ಟಿ

ಅಂದಹಾಗೆ ಈ ರಜಾ ಪಟ್ಟಿಯಲ್ಲಿ ಭಾನುವಾರಗಳಂದು ಬರುವ ಕಾರ್ಮಿಕ ದಿನಾಚರಣೆ (ಮೇ 1), ಬಕ್ರೀದ್ (ಜುಲೈ 10), ಮಹಾಲಯ ಅಮಾವಾಸ್ಯೆ (ಸೆಪ್ಟೆಂಬರ್ 25), ಗಾಂಧೀ ಜಯಂತಿ (ಅಕ್ಟೋಬರ್ 2), ಮಹರ್ಷಿ ವಾಲ್ಮೀಕಿ ಜಯಂತಿ/ ಈದ್ ಮಿಲಾದ್ (ಅಕ್ಟೋಬರ್ 9) ಮತ್ತು ಕ್ರಿಸ್​ಮಸ್ (ಡಿಸೆಂಬರ್ 25) ಒಳಗೊಂಡಿಲ್ಲ). ಮುಸಲ್ಮಾನರಿಗೆ ಆಯಾ ನಿಗದಿತ ದಿನಾಂಕದ ಬದಲಿಗೆ ಬೇರೆ ದಿನ ಹಬ್ಬ ಬಂದಲ್ಲಿ ಆ ದಿನ ರಜಾ ನೀಡಬಹುದು. ಇನ್ನು ಸೆಪ್ಟೆಂಬರ್ 3 ಕೈಲ್ ಮುಹೂರ್ತ ಹಾಗೂ ಡಿಸೆಂಬರ್ 8 ಹುತ್ತರಿ ಹಬ್ಬಕ್ಕೆ ಕೊಡಗು ಜಿಲ್ಲೆಗೆ ಮಾತ್ರ ಅನ್ವಯ ಆಗುವಂತೆ ಸ್ಥಳೀಯ ಸಾರ್ವತ್ರಿಕ ರಜಾ ಘೋಷಣೆ ಮಾಡಲಾಗಿದೆ. ಇವೆಲ್ಲವನ್ನೂ ಹೊರತುಪಡಿಸಿ ಪರಿಮಿತ ರಜಾ, ಅಂದರೆ ರಿಸ್ಟ್ರಿಕ್ಟೆಡ್ ಹಾಲಿಡೇ 22 ದಿನಗಳು ಬರುತ್ತವೆ.

ಇದನ್ನೂ ಓದಿ: Bank Holidays in December 2021: ಡಿಸೆಂಬರ್​ನಲ್ಲಿ ಬ್ಯಾಂಕ್​ಗಳಿಗೆ ಒಟ್ಟು ಎಷ್ಟು ದಿನ ರಜಾ ಗೊತ್ತೆ?

Published On - 8:34 pm, Wed, 1 December 21

ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್
ಬಿಗ್ ಬಾಸ್ ಧನುಷ್​​ಗೆ ಬಾಲ್ಯದಲ್ಲೇ ಆಗಿತ್ತು ಎಂಗೇಜ್​​ಮೆಂಟ್
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
2026 ತುಲಾ ರಾಶಿಗೆ ವೃತ್ತಿ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಶುಭ ಫಲದ ವರ್ಷ
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಜಮೀರ್ ಅಹ್ಮದ್ ಆಪ್ತಗೆ ಲೋಕಾ ಶಾಕ್! ಎಲ್ಲೆಲ್ಲಿ ಆಸ್ತಿ, ಸಂಪತ್ತಿದೆ ಗೊತ್ತೇ?
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಅಂಜನಾದ್ರಿ: ಆಂಜನೇಯನ ಗರ್ಭಗುಡಿಯಲ್ಲೇ ಸ್ವಾಮೀಜಿಗಳ ಫೈಟ್, ವಿಡಿಯೋ ವೈರಲ್
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಮಗಳನ್ನು ಮದುವೆ ಮಾಡಿಕೊಡಲಿಲ್ಲವೆಂದು ತಾಯಿಗೆ ಬೆಂಕಿ ಹಚ್ಚಿದ ಕಿರಾತಕ!
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಗಿಲ್ಲಿ ಸೂಪರ್; ಬಿಗ್ ಬಾಸ್​​ಗೆ ಬಂದು ಗಿಲ್ಲಿ ಬೆಂಬಲಿಸಿದ ಧನು ತಾಯಿ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
ಫ್ಯಾನ್ ವಾರ್ ಬಗ್ಗೆ ಮಾತನಾಡಲ್ಲ ಎಂದ ಸಾಧು ಕೋಕಿಲ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
‘ಶಿವ ತಾಂಡವ ನೋಡಿದಂತಾಯ್ತು’; ಹೊರಬಿತ್ತು‘45’ ಚಿತ್ರದ ಮೊದಲ ವಿಮರ್ಶೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
140 ಕೆಜಿ ಬೆಳ್ಳಿ ದೋಚಿದ್ದು ಸಿಸಿ ಕ್ಯಾಮೆರಾದಲ್ಲಿ ಸೆರೆ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ
ವಿಚ್ಛೇದನ ನೋಟಿಸ್‌ ನೀಡಿದಕ್ಕೆ ಪತ್ನಿಯ ಮೇಲೆ ಗುಂಡು ಹಾರಿಸಿದ ಪತಿ