ಇಷ್ಟು ವರ್ಷವಾದ್ರೂ ಕರ್ನಾಟಕ ಕನ್ನಡಮಯವಾಗಿಲ್ಲ; ಅಸಮಾಧಾನ ಹೊರಹಾಕಿದ ಸಿಎಂ

ಕನ್ನಡ ಭಾಷೆಗೆ ಪುರಾತನ ಇತಿಹಾಸಿ ಇದೆ. ಎಲ್ಲ ಭಾಷೆಗಳಲ್ಲೂ‌ ಕನ್ನಡವೂ‌ ಒಂದು ಹೆಮ್ಮೆ ಅನಿಸುತ್ತೆ. ಎಲ್ಲರೂ ಪ್ರತಿಜ್ಞೆ ಮಾಡಬೇಕು, ನಾನೆಲ್ಲಾ ಕನ್ನಡದಲ್ಲೇ ಮಾತನಾಡಬೇಕು, ಕಲಿಯಬೇಕೆಂದು. ಇಷ್ಟು ವರ್ಷವಾದ್ರೂ ಕರ್ನಾಟಕ ಇನ್ನು ಕನ್ನಡ ಮಯವಾಗಿಲ್ಲ ಎಂದು ಸಿಎಂ ಅಸಮಾಧಾನ ಹೊರಹಾಕಿದರು.

ಇಷ್ಟು ವರ್ಷವಾದ್ರೂ ಕರ್ನಾಟಕ ಕನ್ನಡಮಯವಾಗಿಲ್ಲ; ಅಸಮಾಧಾನ ಹೊರಹಾಕಿದ ಸಿಎಂ
ಸಿದ್ದರಾಮಯ್ಯ
Follow us
ಸಂಜೀವ ಕುಮಾರ್​ ಪಾಂಡ್ರೆ, ಗದಗ
| Updated By: ಕಿರಣ್ ಹನುಮಂತ್​ ಮಾದಾರ್

Updated on:Nov 03, 2023 | 5:34 PM

ಗದಗ, ನ.03: ಕರ್ನಾಟಕ ರಾಜ್ಯ ನಾಮಕರಣಕ್ಕೆ 50ರ ಸಂಭ್ರಮ ಹಿನ್ನಲೆ ಗದಗ(Gadag) ನಗರದಲ್ಲಿ ಅದ್ಧೂರಿ ಕನ್ನಡ ಹಬ್ಬ ಆಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಈ ವೇಳೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ(Siddaramaiah) ಅವರು ‘ ತ್ಯಾಗ ಬಲಿದಾನದ ಫಲವಾಗಿ ವಿಶಾಲ ಕರ್ನಾಟಕ ನೋಡುತ್ತಿದ್ದೇವೆ. ಈ ಸಂದರ್ಭದಲ್ಲಿ ಏಕೀಕರಣಕ್ಕಾಗಿ ಹೋರಾಟ ಮಾಡಿದ ಎಲ್ಲರನ್ನೂ ಸ್ಮರಿಸುತ್ತೇನೆ. ನಮ್ಮ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷವಾಗಿದೆ‌. ಹೀಗಾಗಿ ಕರ್ನಾಟಕ ಸಂಭ್ರಮ ಆಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ನಿನ್ನೆ ಹಂಪಿಯಲ್ಲಿ ಆರಂಭ ಆಗಿದ್ದು, ಇಂದು ಗದಗ ಜಿಲ್ಲೆಗೆ ತಲುಪಿದೆ ಎಂದರು.

‘ನವೆಂಬರ್ 1 ನಮ್ಮೆಲ್ಲಾ ಹೆಮ್ಮೆಯ ದಿನ. 1956 ರಲ್ಲಿ ಭಾಷಾವಾರು ರಾಜ್ಯ ವಿಂಗಂಡನೆಯಾದಾಗ ಎಲ್ಲರನ್ನು ಒಗ್ಗೂಡಿಸಿ ರಾಜ್ಯ ರಚನೆ ಮಾಡಲಾಯಿತು. ಕನ್ನಡ ಮಾತನಾಡುವ ಜನ ಒಂದೂಗೂಡಿ ರಾಜ್ಯ ಏಕೀಕರಣ ಆಗಿದೆ. ಮೊದಲು ಮೈಸೂರ ರಾಜ್ಯ ಎಂದು ಕರೆಯಲಾಗುತ್ತಿತ್ತು. 1973 ರಲ್ಲಿ ಕರ್ನಾಟಕ ರಾಜ್ಯ ಎಂದು ಮರುನಾಮಕರಣ ಮಾಡಲಾಯಿತು. ತ್ಯಾಗ ಬಲಿದಾನ ಫಲವಾಗಿ ವಿಶಾಲ ಕರ್ನಾಟಕವನ್ನ ನಾವು ಇವತ್ತು ನೋಡುತ್ತೇವೆ. ಏಕೀರಣ ಹೋರಾಟ ಮಾಡಿದವರ ಎಲ್ಲರನ್ನೂ ಸ್ಮರಿಸುತೇನೆ ಎಂದು ಹೇಳಿದರು.

ಇದನ್ನೂ ಓದಿ:ಗದಗ: ಕರ್ನಾಟಕ ಸಂಭ್ರಮ ಮೆರವಣಿಗೆಯಲ್ಲಿ ಶಿವಕುಮಾರ್, ಸಿದ್ದರಾಮಯ್ಯರಿಂದ ‘ಅಂತರ’ ಕಾಯ್ದುಕೊಂಡಿದ್ದು ಆಕಸ್ಮಿಕವೋ?

ಅಂದಿನ‌ ಸಿಎಂ ದೇವರಾಜು ಅರಸು‌ ಅವರು ಮೈಸೂರಿನವರು ಆದರೂ ಮೈಸೂರ ರಾಜ್ಯ ಬದಲು ಮಾಡಿ‌ ಕರ್ನಾಟಕ ಎಂದು ನಾಮಕರಣ ಮಾಡಿದರು. ಅಂದು ಕೆ.ಎಚ್ ಪಾಟೀಲ್ ಸಚಿವರಾಗಿದ್ದರು. ದೇವರಾಜ್​ ಅರಸು, ಜಯಚಾಮರಾಜೇಂದ್ರೆ ಒಡೆಯರ್​ ಹಲವರು ಗದಗನಲ್ಲಿ‌ಜೋತಿ ಸ್ವೀಕಾರ ಮಾಡಿದರು. ಸಾಹಿತ್ಯ ಸಮ್ಮೆಳನದ ಅಧ್ಯಕ್ಷರಾಗಿದ್ದ ಕೆ.ಎಚ್ ಪಾಟೀಲ್​ ಅವರು ಕರ್ನಾಟಕ ರಾಜ್ಯ ಆಗಬೇಕು ಎOದು ಸಮ್ಮೇಳನದಲ್ಲಿ ನಿರ್ಣಯ ಮಾಡಿದರು. ಅಂದು ಕೆ ಎಚ್ ಪಾಟೀಲ್​, ಇಂದು ಅವರ ಪುತ್ರ ಎಚ್ ಪಾಟೀಲ್ ಈ ಕಾರ್ಯಕ್ರಮ‌ ಮಾಡಿದರು. ಅಷ್ಟೇ ಅಲ್ಲ, ಅಂದು‌ ಮೈಸೂರು ಜಿಲ್ಲೆಯ ದೇವರಾಜ್​ ಅರಸು ಅವರು ಸಿಎಂ ಆಗಿದ್ರು, ಈಗ ಅದೇ ಜಿಲ್ಲೆಯ ನಾನು ಸಿಎಂ ಆಗಿದ್ದೇನೆ ಎಷ್ಟು ಕಾಕತಾಳಿಯ ಎಂದರು.

ಭಾಷಣ ವೇಳೆ ಡಿಸಿಎಂ ಡಿಕೆ ಹೆಸರನ್ನೇ ಮರೆತ ಸಿಎಂ ಸಿದ್ದರಾಮಯ್ಯ

ಇನ್ನು ಭಾಷಣದ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಅವರ​ ಹೆಸರನ್ನೇ ಸಿಎಂ ಸಿದ್ದರಾಮಯ್ಯ ಮರೆತಿದ್ದಾರೆ. ಹೌದು, ಭಾಷಣ ಆರಂಭಿಸುವಾಗ ಗಣ್ಯರ ಹೆಸರನ್ನು ಪ್ರಸ್ತಾಪಿಸಿದ ಅವರು ‘ಈ ವೇಳೆ ಡಿ.ಕೆ.ಶಿವಕುಮಾರ್​ ಹೆಸರನ್ನೇ ಮರೆತಿದ್ದರು. ಕೂಡಲೇ ಭೈರತಿ ಸುರೇಶ್ ಹೋಗಿ ನೆನಪಿಸಿದ ಬಳಿಕ ಡಿಕೆ ಅವರ ಹೆಸರನ್ನು ಹೇಳಿದ್ದಾರೆ. ಶಿವಕುಮಾರ್ ಹೆಸರು ಹೇಳುತ್ತಿದ್ದಂತೆ ಜನರು ಘೋಷಣೆ ಕೂಗಿದ್ದಾರೆ.

ಇಷ್ಟು ವರ್ಷವಾದ್ರೂ ಕರ್ನಾಟಕ ಕನ್ನಡ ಮಯವಾಗಿಲ್ಲ

ಕನ್ನಡ ಭಾಷೆಗೆ ಪುರಾತನ ಇತಿಹಾಸಿ ಇದೆ. ಎಲ್ಲ ಭಾಷೆಗಳಲ್ಲೂ‌ ಕನ್ನಡವೂ‌ ಒಂದು ಹೆಮ್ಮೆ ಅನಿಸುತ್ತೆ. ಎಲ್ಲರೂ ಪ್ರತಿಜ್ಞೆ ಮಾಡಬೇಕು, ನಾನೆಲ್ಲಾ ಕನ್ನಡದಲ್ಲೇ ಮಾತನಾಡಬೇಕು, ಕಲಿಯಬೇಕೆಂದು. ಇಷ್ಟು ವರ್ಷವಾದ್ರೂ ಕರ್ನಾಟಕ ಇನ್ನು ಕನ್ನಡ ಮಯವಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು. ಕನ್ನಡ ವಾತಾವರಣ ನಿರ್ಮಾಣ ಮಾಡಬೇಕು. ಎಲ್ಲಾದರೂ ಇರು ಹೇಗಾದರೂ ಇರು, ಮೊದಲು ಕನ್ನಡದವನಾಗಿರು ಎಂದು ಕುವೆಂಪು ಅವರು ಹೇಳಿದ್ದಾರೆ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:06 pm, Fri, 3 November 23

ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಸಚಿವೆಯ ಪತಿ ರವೀಂದ್ರ ಹೆಬ್ಬಾಳ್ಕರ್
ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಸಚಿವೆಯ ಪತಿ ರವೀಂದ್ರ ಹೆಬ್ಬಾಳ್ಕರ್
ಘಟನೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಒಳ್ಳೇದು ಮಾಡಲ್ಲ: ವಿಜಯೇಂದ್ರ
ಘಟನೆ ಸಿದ್ದರಾಮಯ್ಯ ಮತ್ತು ಅವರ ಸರ್ಕಾರಕ್ಕೆ ಒಳ್ಳೇದು ಮಾಡಲ್ಲ: ವಿಜಯೇಂದ್ರ
ಅಪಘಾತದ ಸ್ವರೂಪ ನೋಡಿದರೆ ಕಾರು ಚಾಲಕ ಬದುಕುಳಿದಿದ್ದೇ ಪವಾಡ
ಅಪಘಾತದ ಸ್ವರೂಪ ನೋಡಿದರೆ ಕಾರು ಚಾಲಕ ಬದುಕುಳಿದಿದ್ದೇ ಪವಾಡ
ಬೆಂಗಳೂರಿನ ಬಯೋ ಇನ್ನೋವೇಶನ್ ಸೆಂಟರ್​ನಲ್ಲಿ ಅಗ್ನಿ ಅವಘಡ
ಬೆಂಗಳೂರಿನ ಬಯೋ ಇನ್ನೋವೇಶನ್ ಸೆಂಟರ್​ನಲ್ಲಿ ಅಗ್ನಿ ಅವಘಡ
ಬಿಗ್ ಬಾಸ್ ಮುಗಿದ ಬಳಿಕ ಎಲ್​ಎಲ್​ಬಿ ಓದಲು ರೆಡಿ ಆದ ಚೈತ್ರಾ ಕುಂದಾಪುರ
ಬಿಗ್ ಬಾಸ್ ಮುಗಿದ ಬಳಿಕ ಎಲ್​ಎಲ್​ಬಿ ಓದಲು ರೆಡಿ ಆದ ಚೈತ್ರಾ ಕುಂದಾಪುರ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್​​ಗೆ ಚಿಕಿತ್ಸೆ
ಬೆಳಗಾವಿಯ ಖಾಸಗಿ ಆಸ್ಪತ್ರೆಯೊಂದರಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್​​ಗೆ ಚಿಕಿತ್ಸೆ
ಕಾರು ಅಪಘಾತದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​ ಬೆನ್ನು ಮೂಳೆ ಮುರಿತ!
ಕಾರು ಅಪಘಾತದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್​ ಬೆನ್ನು ಮೂಳೆ ಮುರಿತ!
ಮಂಡ್ಯ: ಶಿವಲಿಂಗಕ್ಕೆ ಸ್ಪರ್ಶಿಸದ ಸೂರ್ಯ ರಶ್ಮಿ, ಕಾದಿದೆಯಾ ಗಂಡಾಂತರ?
ಮಂಡ್ಯ: ಶಿವಲಿಂಗಕ್ಕೆ ಸ್ಪರ್ಶಿಸದ ಸೂರ್ಯ ರಶ್ಮಿ, ಕಾದಿದೆಯಾ ಗಂಡಾಂತರ?
ರನೌಟ್​ನೊಂದಿಗೆ ವಿದೇಶಿ ಲೀಗ್ ಆರಂಭಿಸಿದ ದಿನೇಶ್ ಕಾರ್ತಿಕ್
ರನೌಟ್​ನೊಂದಿಗೆ ವಿದೇಶಿ ಲೀಗ್ ಆರಂಭಿಸಿದ ದಿನೇಶ್ ಕಾರ್ತಿಕ್